ರಾಜಕೀಯವೈರಲ್ ನ್ಯೂಸ್

ಹಿಂದೂಗಳ ವೋಟ್ ಬೇಕಾದರೆ ರಾಮಮಂದಿರ ಉದ್ಘಾಟನೆಗೆ ಬರುತ್ತಾರೆ ಎಂದದ್ದೇಕೆ ಯತ್ನಾಳ್..? ಸೋನಿಯಾ ಗಾಂಧಿ ರಾಮ ಮಂದಿರಕ್ಕೆ ಬರೋ ಬಗ್ಗೆ ಯತ್ನಾಳ್ ಹೇಳಿದ್ದೇನು?

ನ್ಯೂಸ್ ನಾಟೌಟ್: ಅದೆಷ್ಟೋ ದಶಕಗಳಿಂದ ನಡೆಯುತ್ತಿದ್ದ ಬಾಬ್ರಿ ಮಸೀದಿ ಮತ್ತು ರಾಮ ಮಂದಿರದ ಬಗೆಗಿನ ವಿವಾದ ಬಗೆಹರಿದು ಜನವರಿ 22 ರಂದು ಭವ್ಯ ರಾಮಮಂದಿರ ಉದ್ಘಾಟನೆಗೆ ಸಕಲ ಸಿದ್ಧತೆಗಳು ನಡೆಯುತ್ತಿವೆ,

ಈ ವೇಳೆ ರಾಜಕೀಯ ನಾಯಕರ ಮಾತಿನ ಕೆಸರೆರಚಾಟಗಳು ಹೆಚ್ಚಾಗಿದ್ದು, ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ಆಗಮಿಸಬೇಕೆಂದು ಸೋನಿಯಾ ಗಾಂಧಿಯವರಿಗೆ ವಿಶ್ವ ಹಿಂದೂ ಪರಿಷತ್ ಹಾಗೂ ಅಯೋಧ್ಯಾ ರಾಮ‌ಮಂದಿರ ಟ್ರಸ್ಟ್ ಆಹ್ವಾನ ಮಾಡಿವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಿರುದ್ಧ ಯತ್ನಾಳ್ ಖಾರವಾಗಿಯೇ ಪ್ರತಿಕ್ರಿಯಿಸಿದ್ದು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

“ಹಿಂದೂಗಳ ಬಗ್ಗೆ ಕಳಕಳಿ ಇದ್ದರೆ ದೇಶದ ಬಗ್ಗೆ ಕಳಕಳಿ ಇದ್ದರೆ ಹಿಂದೂಗಳ ವೋಟ್ ಬೇಕಾದರೆ ಬರುತ್ತಾರೆ. ಸೋನಿಯಾ ರಾಮ ಮಂದಿರಕ್ಕೆ ಬರೋದು ಓಟಿಗಾಗಿ ಅನ್ನೋದನ್ನ ಮರೀಬೇಡಿ. ಅಕಸ್ಮಾತ್ ಅವರಿಗೆ ಸಾಬರ ಓಟ್ ಬೇಕಿದ್ದರೆ ಮಕ್ಕಾ ಮದೀನಾಕೆ ಹೋಗಲಿ’’ ಎಂದು ಹೇಳಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ವಿಜಯಪುರ ನಗರದಲ್ಲಿ ಅಯೋಧ್ಯೆಯ ಮಂತ್ರಾಕ್ಷತೆ ಕಳಸದ ಭವ್ಯ ಮೆರವಣಿಗೆಯಲ್ಲಿ ಭಾಗಿಯಾಗಿ ಈ ಮಾತನಾಡಿದ್ದಾರೆ.

ಈ ಬಗ್ಗೆ “25 ಜನ ಕಾಂಗ್ರೆಸ್ಸಿನ ವಕೀಲರು ಸುಪ್ರೀಂ ಕೋರ್ಟ್‌ನಲ್ಲಿ ಅಯೋಧ್ಯಾ ರಾಮ ಮಂದಿರ ಕೇಸ್ ನಲ್ಲಿ ವಾದ ಮಾಡಿದ್ದರು. ಕಪಿಲ್ ಸಿಬಲ್ ಅವರಿಂದ ಹಿಡಿದು ಕಾಂಗ್ರೆಸ್ ನ 27 ವಕೀಲರು ವಾದ ಮಾಡಿದ್ದಾರೆ. ರಾಮ ಒಬ್ಬ ಕಾಲ್ಪನಿಕ ವ್ಯಕ್ತಿ ಎಂದು ಕಪೀಲ್ ಸಿಬಲ್ ವಾದ ಮಾಡಿದ್ದರು. ರಾಮ ಇದ್ದ ಎನ್ನಲು ದಾಖಲೆಗಳು ಇಲ್ಲ ಎಂದು ವಾದ ಮಾಡಿದ್ದರು. ಹಿಂದೂ ಸಂಸ್ಕೃತಿ, ಭಾರತೀಯ ಸಂಸ್ಕ್ರತಿಯಲ್ಲಿ ವೈರಿಗಳಿಗೂ ಸ್ವಾಗತ ಮಾಡುವುದು ಕರೆಯೋದು ನಮ್ಮ ಧರ್ಮ‌. ಅದಕ್ಕಾಗಿಯೇ ನಮ್ಮವರು ಹೋಗಿ ಕರೆದಿದ್ದಾರೆ. ಬರೋದು ಬಿಡೋದು ಅವರಿಗೆ ಬಿಟ್ಟದ್ದು” ಎಂದು ಯತ್ನಾಳ್ ಹೇಳಿದರು.

https://newsnotout.com/2023/12/puttur-govt-hospital-ashok-rai/

Related posts

ರಷ್ಯಾದ 8 ವರ್ಷದ ಬಾಲಕನಿಗೆ ಭಾರತದಲ್ಲಿ ಇಷ್ಟಲಿಂಗ ದೀಕ್ಷೆ..! ‘ಆ್ಯಂಡ್ರೆ’ ಗಣೇಶನಾಗಿ ಬದಲಾದದ್ದೇಕೆ?

ಸಾಣೂರು ಗ್ರಾಮದಲ್ಲಿ ಮತ ಬೇಟೆಗಿಳಿದ ಬಿಜೆಪಿ ಅಭ್ಯರ್ಥಿ ವಿ ಸುನೀಲ್ ಕುಮಾರ್, ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಜನನಾಯಕ

ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯ ಮಧ್ಯೆ ಮಲಗಿದ್ದ ವ್ಯಕ್ತಿ..! ಆತನನ್ನು ಬಂಧಿಸಿದ ಪೊಲೀಸರು..! ಇಲ್ಲಿದೆ ವೈರಲ್ ವಿಡಿಯೋ