ದೇಶ-ಪ್ರಪಂಚವೈರಲ್ ನ್ಯೂಸ್

ಅಯೋಧ್ಯೆಯ ರಾಮ ವಿಗ್ರಹ ಕೆತ್ತನೆಗೆ ಕರುನಾಡ ಶಿಲ್ಪಿಗಳು! ಸ್ವಲ್ಪ ವ್ಯತ್ಯಾಸವಾದರೂ ವಿಗ್ರಹಕ್ಕಾಗಿ 6 ತಿಂಗಳು ಕಾಯಬೇಕಾಗುತ್ತದೆ..!?

ನ್ಯೂಸ್ ನಾಟೌಟ್:  ಡಿಸೆಂಬರ್‌ ಒಳಗಾಗಿ ರಾಮಮಂದಿರದ ಗರ್ಭಗುಡಿ ನಿರ್ಮಾಣ ಮಾಡಿ ಬಾಲರಾಮನ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಮಾಡುವ ಬಗ್ಗೆ ಚಿಂತನೆಗಲಿ ನಡೆದಿವೆ, ಹೀಗಾಗಿ ಅಯೋಧ್ಯೆ ರಾಮಮಂದಿರ ನಿರ್ಮಾಣ ಕಾರ್ಯ ವೇಗ ಪಡೆದುಕೊಂಡಿದೆ.

ಈಗಾಗಲೇ ಕರ್ನಾಟಕದ ಇಬ್ಬರು ಶಿಲ್ಪಿಗಳು ಮತ್ತು ರಾಜಸ್ಥಾನದ ಒಬ್ಬ ಶಿಲ್ಪಿ ಸೇರಿ ಏಕಕಾಲಕ್ಕೆ ಮೂವರು ಶಿಲ್ಪಿಗಳು ಪ್ರತ್ಯೇಕವಾಗಿ ಬಾಲರಾಮನ ವಿಗ್ರಹ ಕೆತ್ತನೆಗೆ ತೊಡಗಿದ್ದಾರೆ ಎಂದು ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯದ ಉಸ್ತುವಾರಿ, ವಿಎಚ್‌ಪಿ ಕೇಂದ್ರೀಯ ಸಹಕಾರ್ಯದರ್ಶಿ ಗೋಪಾಲ್‌ ಹೇಳಿದ್ದಾರೆ.

ಭಾನುವಾರ ನಡೆದ ರಾಷ್ಟ್ರೋತ್ಥಾನ ಪರಿಷತ್‌ ವಿದ್ಯಾ ಕೇಂದ್ರ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿ ಕೆತ್ತನೆ ಬಳಿಕ ಮೂರೂ ವಿಗ್ರಹಗಳನ್ನು ಪರಿಶೀಸಲಾಗುತ್ತದೆ. ಶಿಲ್ಪಶಾಸ್ತ್ರ ಸಮ್ಮತವಾಗಿರತಕ್ಕಂಥ ವಿಗ್ರಹ ಆಯ್ಕೆ ಮಾಡಿ ಗರ್ಭಗುಡಿಯಲ್ಲಿ ಪ್ರತಿಷ್ಠಾನೆ ಮಾಡಲಾಗುತ್ತದೆ. ವಿಗ್ರಹ ಕೆತ್ತನೆಗೆ ಐದಾರು ತಿಂಗಳು ಬೇಕು. ಒಬ್ಬರಿಂದಲೇ ವಿಗ್ರಹ ಕೆತ್ತನೆಗೆ ಒಬ್ಬನೇ ಶಿಲ್ಪಿಗೆ ಜವಾಬ್ದಾರಿ ವಹಿಸಿದ್ದರೆ, ಕೊನೇ ಹಂತದಲ್ಲಿ ಸ್ವಲ್ಪ ಆಚೀಚೆ ಆದರೂ ಮತ್ತೊಂದು ವಿಗ್ರಹ ಹೊಂದಲು ಮತ್ತೆ 6 ತಿಂಗಳು ಕಾಯಬೇಕಾಗುತ್ತದೆ. ಹಾಗಾಗಿ ಮೂವರನ್ನು ನೇಮಿಸಲಾಗಿದೆ. ಇನ್ನುಳಿದ 2 ವಿಗ್ರಹಗಳನ್ನು ಬೇರೆಕಡೆಗಳಲ್ಲಿ ಬಳಸಲಾಗುತ್ತದೆ ಎಂದರು.

ಮುಂದಿನ ವರ್ಷ ಜನವರಿಯಲ್ಲಿ ರಾಮ ಮಂದಿರದ ಉದ್ಘಾಟನೆಯಾಗಲಿದ್ದು, ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ರಾಮಮಂದಿರ ನಿರ್ಮಾಣದ 3 ಹಂತಗಳಲ್ಲಿ ಮೊದಲ ಹಂತವನ್ನು ಡಿಸೆಂಬರ್‌ ಒಳಗಾಗಿ ಪೂರ್ಣಗೊಳಿಸಲು ನಿರ್ಧರಿಸಿದೆ. ಮೊದಲ ಹಂತದಲ್ಲಿ, ನೆಲ ಮಹಡಿಯಲ್ಲಿ ಐದು ಮಂಟಪಗಳಿದ್ದು, ಅವುಗಳಲ್ಲಿ ಅತ್ಯಂತ ಪ್ರಮುಖವಾದ ಗರ್ಭಗುಡಿಯಲ್ಲಿ ಬಾಲ ರೂಪಲ್ಲಿರುವ ರಾಮ ದೇವರ ವಿಗ್ರಹ ಪ್ರತಿಷ್ಠಾಪಿಸಲಾಗುತ್ತದೆ ಎಂದರು.

Related posts

ವೈದ್ಯರ ನಿರ್ಲಕ್ಷ್ಯದಿಂದ ಹಲವರಿಗೆ ಒಂದೇ ಸಿರಿಂಜ್, ಬಾಲಕಿಗೆ ಎಚ್​ಐವಿ !

ಪ್ರಜ್ಞೆ ತಪ್ಪಿ ಕುಸಿದುಬಿದ್ದ ಆ ಬಿಗ್ ಬಾಸ್ ಸ್ಪರ್ಧಿ ಯಾರು..? ಆಸ್ಪತ್ರೆಗೆ ದಾಖಲು..!

ಮಗಳು ಕಪ್ಪಗಿದ್ದಾಳೆ ಎಂದು ವಿಷ ಕುಡಿಸಿದ ತಂದೆ..!18 ತಿಂಗಳ ಮಗುವನ್ನು ಕೊಂದ ಕ್ರೂರಿ..!