ರಾಜಕೀಯವೈರಲ್ ನ್ಯೂಸ್

ರಾಮ ಮಂದಿರ ಉದ್ಘಾಟನೆಗೆ ಬರಲು ಅಡ್ವಾಣಿ,ಮುರಳಿ ಮನೋಹರ್‌ ಜೋಶಿಗೆ ವಿಶೇಷ ವಿಮಾನ..? ಟೀಕೆಯ ಬಳಿಕ ವಿಶ್ವಹಿಂದೂ ಪರಿಷತ್‌ ಈ ನಿರ್ಧಾರ ಮಾಡಿತಾ..?

ನ್ಯೂಸ್ ನಾಟೌಟ್ : ಇಬ್ಬರೂ ಹಿರಿಯ ನಾಯಕರಿಗೆ ದೇಗುಲ ನಿರ್ಮಾಣ ಟ್ರಸ್ಟ್‌ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನ ನೀಡಿತ್ತಾದರೂ, ಅಂದು ಭಾರೀ ಜನಜಂಗುಳಿ ಇರುವ ಕಾರಣ ಅಂದು ಬರದೇ ಇರುವುದು ಸೂಕ್ತ ಎಂದು ಸಲಹೆ ನೀಡಿತ್ತು. ಇದಕ್ಕೆ ಭಾರೀ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ, ಒಂದು ವೇಳೆ ಉಭಯ ನಾಯಕರು ದೇಗುಲಕ್ಕೆ ಆಗಮಿಸಲು ಬಯಸಿದರೆ ಅವರನ್ನು ಕರೆತರಲು ವಿಶೇಷ ವಿಮಾನ ವ್ಯವಸ್ಥೆ ಮಾಡಲಾಗಿದೆ ಎನ್ನಲಾಗಿದೆ.

ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆಗೆ ಬಿಜೆಪಿ ವರಿಷ್ಠರಾದ ಎಲ್‌ಕೆ ಅಡ್ವಾಣಿ ಹಾಗೂ ಮುರಳಿ ಮನೋಹರ್‌ ಜೋಶಿ ಆಗಮಿಸಲು ಬಯಸಿದರೆ ಅವರನ್ನು ಕರೆತಲು ವಿಶ್ವಹಿಂದೂ ಪರಿಷತ್‌ ವಿಶೇಷ ವಿಮಾನದ ವ್ಯವಸ್ಥೆ ಮಾಡಿದೆ ಎಂದು ವರದಿ ತಿಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ಶನಿವಾರ ಉದ್ಘಾಟನೆಗೊಂಡ ಅಯೋಧ್ಯೆಯ ಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೊದಲ ವಿಮಾನದಲ್ಲಿ ಭಕ್ತರು ಹನುಮಾನ್‌ ಚಾಲೀಸಾ ಪಠಿಸಿ ಸಂಭ್ರಮಿಸಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದೆ. ಅಲ್ಲದೇ ವಿಮಾನ ಇಳಿಯುವ ಸಮಯದಲ್ಲಿ ‘ಜೈ ಶ್ರೀರಾಮ್‌’ ಘೋಷಣೆಯನ್ನು ಕೂಗಿದ್ದಾರೆ. ಈ ನಡುವೆ ಮೊದಲ ವಿಮಾನದ ಪ್ರಯಾಣಿಕರಿಗೆ ಸಂಸ್ಥೆಯ ವತಿಯಿಂದ ಕೇಕ್‌ ವಿತರಿಸಲಾಯಿತು ಎಂದು ವರದಿ ತಿಳಿಸಿದೆ.

Related posts

ಬಿಸಿಲಿಗೆ ರಸ್ತೆಯಲ್ಲೇ ಕುಸಿದು ಬಿದ್ದ ಬಿಜೆಪಿ ಸಂಸದ..! ವೀರಶೈವ ಲಿಂಗಾಯತ ಸಮುದಾಯದಿಂದ ಪ್ರತಿಭಟನೆ..!

ಪುತ್ತೂರು ಬಂಡಾಯ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಹರಿಹಾಯ್ದ ಕಲ್ಲಡ್ಕ ಪ್ರಭಾಕರ್ ಭಟ್

ಪುತ್ತೂರು: ಲಾರಿಯ ಟಯರ್‌ ಬದಲಿಸುವಾಗ ಸ್ಪೋಟ..! ವ್ಯಕ್ತಿ ಗಂಭೀರ, ಆಸ್ಪತ್ರೆಗೆ ದಾಖಲು..!