ದೇಶ-ಪ್ರಪಂಚದೇಶ-ವಿದೇಶವೈರಲ್ ನ್ಯೂಸ್

ಅಯೋಧ್ಯೆ ರಾಮಮಂದಿರಕ್ಕೆ 1,11,111 ಕೆಜಿ ಲಡ್ಡು ತಯಾರಿ, ಕಳೆಗಟ್ಟಿದ ರಾಮನವಮಿ ಸಂಭ್ರಮ

ನ್ಯೂಸ್ ನಾಟೌಟ್: ರಾಮಮಂದಿರದಲ್ಲಿ (Ram Mandir) ರಾಮನವಮಿ ಸಂಭ್ರಮ ಕಳೆಗಟ್ಟಿದೆ. ಮಂದಿರ ಉದ್ಘಾಟನೆಯ ಬಳಿಕ ಮೊದಲ ರಾಮನವಮಿ ಆಚರಣೆಗೆ ಸಿದ್ಧತೆ ಭರದಿಂದ ಸಾಗಿದೆ. ರಾಮನವಮಿಯಂದು ಅಯೋಧ್ಯೆಯ (Ayodhya) ರಾಮಮಂದಿರಕ್ಕೆ 1,11,111 ಕೆಜಿ ಲಡ್ಡುಗಳನ್ನು ಏಪ್ರಿಲ್ 17 ರಂದು ನೈವೇದ್ಯ ಮತ್ತು ವಿತರಣೆಗಾಗಿ ಕಳುಹಿಸಲಾಗುವುದು ಎಂದು ದೇವ್ರಹ ಹನ್ಸ್ ಬಾಬಾ ಟ್ರಸ್ಟ್ ನ ಟ್ರಸ್ಟಿ ಅತುಲ್ ಕುಮಾರ್ ಸಕ್ಸೇನಾ ತಿಳಿಸಿದ್ದಾರೆ.

ಕಾಶಿ ವಿಶ್ವನಾಥ ದೇಗುಲ ಅಥವಾ ತಿರುಪತಿ ಬಾಲಾಜಿ ದೇಗುಲಕ್ಕೂ ಪ್ರತಿ ವಾರ ವಿವಿಧ ದೇವಸ್ಥಾನಗಳಿಗೂ ಲಡ್ಡು ಪ್ರಸಾದವನ್ನು ಕಳುಹಿಸಲಾಗುತ್ತದೆ ಎಂದು ಸಕ್ಸೇನಾ ಹೇಳಿದ್ದಾರೆ. ಜ.22 ರಂದು ಅಯೋಧ್ಯೆಯಲ್ಲಿ ನಡೆದಿದ್ದ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ದಿನ ದೇವ್ರಹ ಹಂಸ ಬಾಬಾ ಆಶ್ರಮವು ನೈವೇದ್ಯಕ್ಕಾಗಿ 40,000 ಕೆಜಿ ಲಡ್ಡುವನ್ನು ಕೊಡುಗೆಯಾಗಿ ನೀಡಿತ್ತು ಎಂದು ವರದಿ ತಿಳಿಸಿದೆ.

Related posts

ರವೆ ಇಡ್ಲಿ ತಿಂದು ಕೆಫೆಯೊಳಗೆ ಬಾಂಬ್ ಇಟ್ಟು ಹೋದವ ಯಾರು..? ಇಲ್ಲಿದೆ ಸಿಸಿಟಿವಿ ದೃಶ್ಯಾವಳಿ

ಸಿಎಂ ಮುಸ್ಲಿಮರ ಓಲೈಕೆ ಮಾಡುತ್ತಿರುವುದು ಶೋಭೆಯಲ್ಲ..! ಬಿ.ಎಸ್.ಯಡಿಯೂರಪ್ಪ ಸಿದ್ದರಾಮಯ್ಯ ಬಗ್ಗೆ ಹೀಗೆ ಹೇಳಿದ್ದೇಕೆ? ಮಾಜಿ ಸಚಿವ ಸೋಮಣ್ಣ ಬಿಜೆಪಿ ಬಿಡುವ ಬಗ್ಗೆ ಬಿಎಸ್.ವೈ ಹೇಳಿದ್ದೇನು?

ಮುಡಾ ಕಂಟಕ: ಪತ್ನಿ ಹೆಸರಲ್ಲಿ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಸಿದ್ದರಾಮಯ್ಯ..! ತಾವೇ ಹಣೆಗೆ ತಿಲಕ ಹಚ್ಚಿಕೊಂಡ ಸಿಎಂ