ವೈರಲ್ ನ್ಯೂಸ್ಸಿನಿಮಾ

ಬಿಗ್ ಬಾಸ್ ಸ್ಪರ್ಧಿ ರಕ್ಷಕ್‌ ಬುಲೆಟ್ ಮೊದಲ ಚಿತ್ರದ ಪೋಸ್ಟರ್‌ ರಿಲೀಸ್ , ಇಲ್ಲಿದೆ ಸಂಪೂರ್ಣ ಮಾಹಿತಿ

229

ನ್ಯೂಸ್ ನಾಟೌಟ್: ಸ್ಯಾಂಡಲ್‌ವುಡ್‌ನಲ್ಲಿ ತನ್ನ ಹಾಸ್ಯದಿಂದಲೇ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಬುಲೆಟ್‌ ಪ್ರಕಾಶ್‌ ಮಗ ರಕ್ಷಕ್‌ ಇದೇ ಮೊದಲ ಬಾರಿಗೆ ಸಿನಿಮಾವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿ ತಿಳಿಸಿದೆ. ಬಿಗ್ ಬಾಸ್ ಸೀಸನ್ 10 ಸ್ಪರ್ಧಿ ರಕ್ಷಕ್‌ ಸೋಶಿಯಲ್‌ ಮೀಡಿಯಾದಲ್ಲಿ ಮಾತ್ರವಲ್ಲದೆ ಈಗ ಸಿನಿಮಾಕ್ಕು ಎಂಟ್ರಿ ಕೊಡುತ್ತಿದ್ದಾರೆ.

ಎಷ್ಟೇ ಟ್ರೋಲ್‌ ಮಾಡಿದರೂ, ತಾನು ಇರೋದೆ ಹೀಗೆ ಎನ್ನುವ ರಕ್ಷಕ್‌ ಬುಲೆಟ್‌ ಇದೀಗ ಚೊಚ್ಚಲ ಬಾರಿಗೆ ಸಿನಿರಂಗಕ್ಕೆ ಕಾಲಿಡಲಿದ್ದಾರೆ. ಬುಲೆಟ್‌ ಪ್ರಕಾಶ್‌ ಹುಟ್ಟುಹಬ್ಬದಂದು(ಏ.2 ರಂದು) ರಕ್ಷಕ್‌ ತಮ್ಮ ಮೊದಲ ಸಿನಿಮಾದ ಪೋಸ್ಟರ್‌ ನ್ನು ರಿಲೀಸ್‌ ಮಾಡಿದ್ದಾರೆ.

“ಎಲ್ಲಾ ‌ನನ್ನ‌ ಆತ್ಮೀಯರೆ , ಇಂದು‌ ನನ್ನ ಪೂಜ್ಯ ತಂದೆ ದಿವಂಗತ “ಬುಲೆಟ್ ಪ್ರಕಾಶ್” ರವರ 47ನೇ ಜನ್ಮದಿನ. ಇಂದಿನ ವಿಶೇಷವೇನೆಂದರೆ, ನಾನು ನಾಯಕ ನಟನಾಗಿ ನಟಿಸುತ್ತಿರುವ, ನನ್ನ ಚೊಚ್ಚಲ ಚಿತ್ರದ ಪೋಸ್ಟರ್ ಬಿಡುಗಡೆ ಮಾಡುತ್ತಿರುವುದು ನಿಜಕ್ಕೂ ನನಗೆ ಸಂತಸ ತಂದಿದೆ. ನನ್ನ ತಂದೆಯ ಆಶೀರ್ವಾದದೊಂದಿಗೆ ನಿಮ್ಮೆಲ್ಲರ ಆಶೀರ್ವಾದ ಕೂಡ ಸದಾ ನನ್ನ ಮೇಲಿರಲಿ ಎಂದು ಬಯಸುತ್ತೇನೆ. ನನಗೂ ಹಾಗೂ ನನ್ನ ಇಡೀ ಚಿತ್ರ ತಂಡಕ್ಕೂ ಹರಸಿ ಹಾರೈಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ” ಎಂದು ರಕ್ಷಕ್‌ ಬರೆದುಕೊಂಡಿದ್ದಾರೆ. ಮಚ್ಚು ಅಡ್ಡವಿಟ್ಟು ʼಆರ್‌ ಬಿ 01ʼ ಎಂದು ಬರೆಯಲಾಗಿದೆ.

ಟೈಟಲ್‌ – ಟೀಸರ್‌ ಶೀಘ್ರದಲ್ಲೇ ರಿಲೀಸ್‌ ಆಗಲಿದೆ. ಪೋಸ್ಟರ್‌ ಕೆಳಗೆ ”ಮಚ್ಚಾ ಏರಿಯಾನಲ್ಲಿ ಕಣ್ಮುಂದೆ ಬೇಜಾನ್ ಗಾಡಿಗಳು ಸೌಂಡ್ ಮಾಡ್ತಾವೆ. ಆದರೆ ಸೌಂಡ್ ಕೇಳ್ತಿದ್ದಂಗೆ ಇದೇ ಗಾಡಿ ಅಂತ ಹೇಳೋದು ಒಂದನ್ನೇ”. ”ಬುಲೆಟ್”, ”ಇನ್ಮುಂದೆ ನಂದೆ ರೌಂಡು.. ನಂದೆ ಸೌಂಡು..” ಎನ್ನುವ ಸಾಲುಗಳನ್ನು ಬರೆಯಲಾಗಿದೆ. ಈ ಸಿನಿಮಾವನ್ನು ಕ್ರಿಶ್‌ ಎನ್ನುವವರು ನಿರ್ದೇಶನ ಮಾಡಲಿದ್ದಾರೆ.

See also  ಹಾಸನ ಜಿಲ್ಲೆಯ ದಿಢೀರ್ ಹೃದಯಾಘಾತದ ಸಾವುಗಳಿಗೂ ವ್ಯಾಕ್ಸಿನ್‌ ಗೂ ಯಾವುದೇ ಸಂಬಂಧ ಇಲ್ಲ ಎಂದ ಕೇಂದ್ರ ಸರ್ಕಾರ..! ಆರೋಗ್ಯ ಇಲಾಖೆ ಕೊಟ್ಟ ಕಾರಣಗಳೇನು..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget