ನ್ಯೂಸ್ ನಾಟೌಟ್: ಕರ್ನಾಟಕದ ಹಾಸನ ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಹೃದಯಾಘಾತ ಪ್ರಕರಣಗಳು ಆತಂಕ ಸೃಷ್ಟಿಸಿವೆ. ಇದರ ಬಗ್ಗೆ ನಾನಾ ಚರ್ಚೆಗಳು ಶುರುವಾಗಿವೆ. ಹಠಾತ್ ನಿಧನಕ್ಕೆ ಏನು ಕಾರಣ ಎಂಬುದನ್ನು ಹೇಳಲು ರಾಜ್ಯ ಸರ್ಕಾರಕ್ಕೆ ಇನ್ನೂ ಸಾಧ್ಯವಾಗಿಲ್ಲ. ಈ ಪ್ರಕರಣಗಳಿಗೂ, ಕೊರೊನಾ ವ್ಯಾಕ್ಸಿನ್ ಗೂ ಏನಾದರೂ ಸಂಬಂಧ ಇದೆಯಾ ಎಂಬ ಪ್ರಶ್ನೆಯೂ ಉದ್ಭವವಾಗಿದೆ.
ಈ ಬಗ್ಗೆ ಕೇಂದ್ರದ ಆರೋಗ್ಯ ಇಲಾಖೆಯು ಸ್ಪಷ್ಟನೆ ನೀಡಿದೆ. ದೇಶದಲ್ಲಿ ಕೊರೊನಾ ವ್ಯಾಕ್ಸಿನ್ ಗೂ ಇಂಥ ಪ್ರಕರಣಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ದೇಶದಲ್ಲಿನ ಹಠಾತ್ ನಿಧನದ ಬಗ್ಗೆ ವಿವಿಧ ಏಜೆನ್ಸಿಗಳು ತನಿಖೆ ನಡೆಸಿವೆ. ಇಂಥ ಪ್ರಕರಣಗಳಿಗೂ ಕೊರೊನಾ ವ್ಯಾಕ್ಸಿನ್ ಗೂ ಯಾವುದೇ ಸಂಬಂಧ ಇಲ್ಲ ಎಂಬುವುದು ಐಸಿಎಂಆರ್ ಹಾಗೂ ಎನ್ ಸಿಡಿಸಿ ಅಧ್ಯಯನದಲ್ಲಿ ದೃಢಪಟ್ಟಿದೆ ಎನ್ನಲಾಗಿದೆ. ಕೋವಿಡ್ ವ್ಯಾಕ್ಸಿನ್ ನಿಂದ ಹಠಾತ್ ಸಾವುಗಳು ಹೆಚ್ಚಾಗಿಲ್ಲ. ವಿವಿಧ ಸಂಶೋಧನೆ, ಅಧ್ಯಯನಗಳಲ್ಲಿ ಕೋವಿಡ್ ವ್ಯಾಕ್ಸಿನ್ ಗೂ ಈ ರೀತಿಯ ನಿಧನಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ.
“ಕಾರ್ಡಿಯಾಕ್ ಸಾವುಗಳಿಗೆ ಜೆನೆಟಿಕ್ಸ್, ಲೈಫ್ ಸ್ಟೈಲ್, ಮುಂಚೆಯೇ ಇದ್ದ ಆರೋಗ್ಯ ಸ್ಥಿತಿ, ಕೋವಿಡ್ ನಂತರದ ಆರೋಗ್ಯ ಸಮಸ್ಯೆಗಳು ಕಾರಣ ಎಂದು ಕೇಂದ್ರದ ಆರೋಗ್ಯ ಇಲಾಖೆ ಹೇಳಿದೆ. ರಿಸ್ಕಿ ಲೈಫ್ ಸ್ಟೈಲ್ ಸಡನ್ ಸಾವುಗಳಿಗೆ ಕಾರಣವಾಗುತ್ತೆ ಎಂಬುದು ಅಧ್ಯಯನದಿಂದ ದೃಢಪಟ್ಟಿದೆ. ಭಾರತದಲ್ಲಿ ನೀಡಲಾದ ಕೋವಿಡ್ ವ್ಯಾಕ್ಸಿನ್ ಸೇಫ್ ಮತ್ತು ಪರಿಣಾಮಕಾರಿ ಎಂಬುದು ಐಸಿಎಆರ್ ಅಧ್ಯಯನದಿಂದ ದೃಢಪಟ್ಟಿದೆ. ದೇಶದಲ್ಲಿ ಸಡನ್ ಸಾವುಗಳಿಗೆ ಕೋವಿಡ್ ವ್ಯಾಕ್ಸಿನ್ ಕಾರಣ ಎಂಬುದು ಸುಳ್ಳು, ತಪ್ಪು ದಾರಿಗೆಳೆಯುವಂಥದ್ದು. ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ” ಎಂದು ಕೇಂದ್ರ ಹೇಳಿದೆ. ಕೋವಿಡ್ ವ್ಯಾಕ್ಸಿನ್ ನಿಂದ ಕೋಟ್ಯಾಂತರ ಜನರ ಜೀವ ಉಳಿದಿದೆ ಎಂದು ಕೇಂದ್ರದ ಆರೋಗ್ಯ ಇಲಾಖೆ ತಿಳಿಸಿದೆ.
ಸಂಸತ್ ನಲ್ಲಿ ಸ್ಮೋಕ್ ಬಾಂಬ್ ಪ್ರಕರಣದ ಇಬ್ಬರು ಆರೋಪಿಗಳಿಗೆ ರಿಲೀಫ್..! 1.7 ವರ್ಷದ ಬಳಿಕ ಜಾಮೀನು..!