ದೇಶ-ಪ್ರಪಂಚ

ಕಣ್ಣೀರು ಹಾಕುತ್ತಲೇ ಮನೆಗೆ ಬಂದ ರಾಜ್ ಕುಂದ್ರಾ

ಮುಂಬೈ: ಉದ್ಯಮಿ ರಾಜ್ ಕುಂದ್ರಾ ಕೊನೆಗೂ ತಮ್ಮ ನಿವಾಸಕ್ಕೆ ಬಂದಿದ್ದಾರೆ. ಎರಡು ತಿಂಗಳಿಗೂ ಹೆಚ್ಚು ಕಾಲ ನ್ಯಾಯಾಂಗ ಬಂಧನದಲ್ಲಿದ್ದ ರಾಜ್ ಕುಂದ್ರಾಗೆ ಜಾಮೀನು ಸಿಕ್ಕಿದೆ. ಜಾಮೀನು ಪಡೆದುಕೊಂಡ ರಾಜ್ ಕುಂದ್ರಾ ಮಂಗಳವಾರ ಬೆಳಗ್ಗೆ ಜೈಲಿನಿಂದ ಹೊರಗೆ ಬಂದರು. ಭಾವುಕರಾಗಿದ್ದ ರಾಜ್ ಕುಂದ್ರಾ ಕಣ್ಣೀರು ಹಾಕುತ್ತಲೇ ಮನೆ ಕಡೆ ಮುಖ ಮಾಡಿದರು. ಸೋಮವಾರವಷ್ಟೇ ಮುಂಬೈ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದ ರಾಜ್ ಕುಂದ್ರಾ ಜೈಲಿನಿಂದ ಹೊರಗೆ ಕಾಲಿಟ್ಟರು. ನೋಡಲು ಕೊಂಚ ತೂಕ ಕಳೆದುಕೊಂಡಂತೆ ಕಂಡುಬಂದ ರಾಜ್ ಕುಂದ್ರಾ ಭಾವುಕರಾಗಿದ್ದರು. ಅವರ ಕಣ್ಣಾಲಿಗಳು ಒದ್ದೆ ಆಗಿದ್ದವು. ಕಣ್ಣೀರಿಡುತ್ತಲೇ ರಾಜ್ ಕುಂದ್ರಾ ಮನೆ ಕಡೆ ಹೊರಟಿದ್ದು ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾಗಿವೆ. ಐವತ್ತು ಸಾವಿರ ರೂಪಾಯಿಗಳ ಶ್ಯೂರಿಟಿ ಮೇರೆಗೆ ಉದ್ಯಮಿ ರಾಜ್ ಕುಂದ್ರಾಗೆ ಮುಂಬೈ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

Related posts

ಸೋನಾಕ್ಷಿ ಸಿನ್ಹಾ ಜಹೀರ್ ಇಕ್ಬಾಲ್ ಜೊತೆ ಇಂದು(ಜೂ.23) ವಿವಾಹ..! ಇಸ್ಲಾಂಗೆ ಮತಾಂತರವಾಗ್ತಾರಾ ಬಾಲಿವುಡ್ ನಟಿ..? ಈ ಬಗ್ಗೆ ವರನ ತಂದೆ ಹೇಳಿದ್ದೇನು..?

ಜಮ್ಮು ಕಾಶ್ಮೀರದಲ್ಲಿ ನಿಗೂಢ ಕಾಯಿಲೆಗೆ 17 ಮಂದಿ ಸಾವು..! ಸಾವನ್ನಪ್ಪಿದವರ ಮನೆಗಳನ್ನು ಸಂಪೂರ್ಣವಾಗಿ ಸೀಲ್ ಮಾಡಿದ ಆರೋಗ್ಯ ಇಲಾಖೆ..!

5 ತಿಂಗಳ ಕಂದನನ್ನು ಕಚ್ಚಿ ಕೊಂದ ಬೀದಿ ನಾಯಿ..! ಮಗುವನ್ನು ಮಲಗಿಸಿ ಕೆಲಸಕ್ಕೆ ಹೋಗಿದ್ದ ಹೆತ್ತವರು..!