ಕ್ರೈಂದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಹಳಿ ತಪ್ಪಿದ ಎಕ್ಸ್‌ಪ್ರೆಸ್‌ ರೈಲು, 4 ಮಂದಿ ಸ್ಥಳದಲ್ಲೇ ಸಾವು..! ಹಲವರಿಗೆ ಗಾಯ, ರೈಲ್ವೆ ಸಹಾಯವಾಣಿ ಬಿಡುಗಡೆ..!

202

ನ್ಯೂಸ್ ನಾಟೌಟ್: ಎಕ್ಸ್‌ಪ್ರೆಸ್‌ ಪ್ರಯಾಣಿಕ ರೈಲಿನ ಹಲವು ಬೋಗಿಗಳು ಗುರುವಾರ(ಜುಲೈ.18) ಹಳಿತಪ್ಪಿದ್ದು,ಉತ್ತರ ಪ್ರದೇಶದ ಗೊಂಡಾ ಬಳಿ ಚಂಡೀಗಢ– ದಿಬ್ರುಗಢಕ್ಕೆ ತೆರಳುತ್ತಿದ್ದಾಗ ಘಟನೆ ನಡೆದಿದೆ.

4 ಮಂದಿ ಸಾವನ್ನಪ್ಪಿ ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಮೋತಿಗಂಜ್‌– ಜಿಲ್ಹಾಹಿ ರೈಲು ನಿಲ್ದಾಣಗಳ ನಡುವೆ 15904 ಸಂಖ್ಯೆಯ ಚಂಡೀಗಢ– ದಿಬ್ರುಗಢ ಎಕ್ಸ್‌ಪ್ರೆಸ್‌ ರೈಲು ಹಳಿತಪ್ಪಿದ್ದು, ಈ ವೇಳೆ ರೈಲಿನ ಹಲವು ಬೋಗಿಗಗಳಿಗೆ ಹಾನಿಯಾಗಿದೆ. ಹಿರಿಯ ರೈಲ್ವೆ ಅಧಿಕಾರಿಗಳು ಮತ್ತು ಆಡಳಿತಾಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಪ್ರಯಾಣಿಕರನ್ನು ರಕ್ಷಿಸುವ ಕಾರ್ಯಚರಣೆ ಮುಂದುವರಿದಿದೆ.

ಒಟ್ಟು 12 ಬೋಗಿಗಳೊಂದಿಗೆ ರೈಲು ಸಂಚರಿಸುತ್ತಿತ್ತು. ಈ ಪೈಕಿ ನಾಲ್ಕು ಬೋಗಿಗಳು ಜುಲಾಹಿ ರೈಲ್ವೆ ನಿಲ್ದಾಣದ ಕೆಲವು ಕಿಲೋಮೀಟರ್ ಮೊದಲು ಹಳಿ ತಪ್ಪಿವೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ಥಳಕ್ಕೆ ಆಗಮಿಸಿ ಪರಿಹಾರ ಕಾರ್ಯವನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸಿಎಂ ಯೋಗಿ ಜಿಲ್ಲಾಡಳಿತದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈಶಾನ್ಯ ರೈಲ್ವೆ ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ.

Click 👇

https://newsnotout.com/2024/07/bengaluru-and-mangaluru-shriradi-ghat-kannada-news-traffic-jam/
https://newsnotout.com/2024/07/urvashi-rautela-video-leak-issue-kananda-news-the-clarification-on-the-incident/
https://newsnotout.com/2024/07/netravathi-river-kannada-news-6-families-under-issue-farmers-of-areca/
https://newsnotout.com/2024/07/darshan-case-issue-about-food-in-jail-high-court-order-kannada-news/
https://newsnotout.com/2024/07/america-president-kannada-news-covid-possitive-kannada-news-health/
https://newsnotout.com/2024/07/uppinangady-ksrtc-iravata-fire-kannada-news-ac-problem/
See also  ಕೇರಳ ಸಾಮೂಹಿಕ ಹತ್ಯಾಕಾಂಡ ನಡೆಸಿದ 23 ವರ್ಷದ ಯುವಕನ ಭಯಾನಕ ವಿವರಗಳು ಬಹಿರಂಗ..! 5 ಜನರನ್ನು ಕೊಂದವ ಪೊಲೀಸ್ ಠಾಣೆಯಲ್ಲಿ ಬಂದು ಹೇಳಿದ್ದೇನು..?
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget