ಕ್ರೈಂ

ಹಣಕ್ಕಾಗಿ ಪತ್ನಿಯದ್ದೇ ಬೆತ್ತಲೆ ವಿಡಿಯೋ ಮಾಡಿದ ಪಾಪಿ ಪತಿ..!

381
Spread the love

ಶಿವಮೊಗ್ಗ: ತನ್ನ ಪತ್ನಿಯ ಬೆತ್ತಲೆ ವಿಡಿಯೊ ಮಾಡಿಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ವರದಕ್ಷಿಣೆಗಾಗಿ ಬೇಡಿಕೆ ಇಟ್ಟ ಪತಿ ವಿರುದ್ಧ ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯ ಪತಿ ಸಲ್ಮಾನ್, ಅತ್ತೆ ಸಾಹಿರಾ, ಮಾವ ಶೌಕತ್ ಖಾನ್, ನಾದಿನಿ ಸಮೀನಾ ವಿರುದ್ಧ ಸಂತ್ರಸ್ತ ಮಹಿಳೆ ದೂರು ದಾಖಲಿಸಿದ್ದಾರೆ. ಹುಂಚ ಹೋಬಳಿಯ ಸಂತ್ರಸ್ತೆಯ ವಿವಾಹ ಎಂಟು ತಿಂಗಳ ಹಿಂದೆ ಸಲ್ಮಾನ್ ಜತೆ ನಡೆದಿತ್ತು. ವಧುವಿನ ತಂದೆ ಒಪ್ಪಂದದಂತೆ ಮದುವೆ ಸಮಯದಲ್ಲಿ ಪೂರ್ಣ ವರದಕ್ಷಿಣೆ ನೀಡಿರಲಿಲ್ಲ. ರೂ.1 ಲಕ್ಷ ಬಾಕಿ ಉಳಿಸಿಕೊಂಡಿದ್ದರು. ಈ ಸಂಬಂಧ ಸಂಧಾನ ನಡೆದರೂ ಸಮಸ್ಯೆ ಬಗೆಹರಿದಿರಲಿಲ್ಲ. ವರದಕ್ಷಿಣೆ ಕಿರುಕುಳ ಮುಂದುವರಿದಿತ್ತು.

ಈ ಮಧ್ಯೆ ಸಲ್ಮಾನ್ ಪತ್ನಿ ನಗ್ನವಾಗಿರುವ ಕ್ಷಣಗಳ ವಿಡಿಯೊ ಚಿತ್ರೀಕರಿಸಿಕೊಂಡು ಹಣ ತರದಿದ್ದರೆ ಸಾಮಾಜಿಕ ಜಾಲ ತಾಣಗಳಲ್ಲಿ ಅಪ್ ಲೋಡ್ ಮಾಡುವುದಾಗಿ ಬೆದರಿಸಿದ್ದಾನೆ. ತಲಾಕ್ ನೀಡಿದ್ದಾನೆ. ತವರು ಮನೆಗೆ ಮರಳಿದರೂ ಬೆದರಿಕೆ ನಿಂತಿಲ್ಲ ಎಂದು ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾರೆ.

See also  ಪಾವಂಜೆ: ಭೀಕರ ರಸ್ತೆ ಅಪಘಾತ, 2 ಸಾವು, 1 ಗಾಯ
  Ad Widget   Ad Widget   Ad Widget   Ad Widget   Ad Widget   Ad Widget