Latestಉದ್ಯೋಗ ವಾರ್ತೆದೇಶ-ವಿದೇಶ

ರೈಲ್ವೆಯಲ್ಲಿ 1000 ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ, ಕೂಡಲೇ ಅರ್ಜಿ ಸಲ್ಲಿಸಿ, ಇಲ್ಲಿದೆ ಸಂಪೂರ್ಣ ಮಾಹಿತಿ

696

ನ್ಯೂಸ್ ನಾಟೌಟ್: ಆಗ್ನೇಯ ಮಧ್ಯ ರೈಲ್ವೆ (SECR) ಇಲಾಖೆ ಸಾವಿರಕ್ಕೂ ಹೆಚ್ಚು ಹುದ್ದೆಗಳಿಗೆ ಅಪ್ರೆಂಟಿಸ್‌ ಗಳ ನೇಮಕಾತಿಯನ್ನು ಪ್ರಕಟಿಸಿದ್ದು, ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು Apprentice India ಅಧಿಕೃತ ವೆಬ್‌ಸೈಟ್ apprenticeshipindia.gov.in ಆನ್‌ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಏಪ್ರಿಲ್ 5 ರಂದು ಪ್ರಾರಂಭವಾಗಿದ್ದು ಮೇ 4 ರವರೆಗೆ ಅರ್ಜಿಸಲ್ಲಿಸಬಹುದು. ಈ ನೇಮಕಾತಿ ಅಭಿಯಾನದ ಅಡಿಯಲ್ಲಿ, ರೈಲ್ವೆಯಲ್ಲಿ ಒಟ್ಟು 1007 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಕನಿಷ್ಠ ಶೇಕಡಾ 50 ಅಂಕಗಳೊಂದಿಗೆ ಮೆಟ್ರಿಕ್ಯುಲೇಷನ್ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಇದಲ್ಲದೆ, ಅಭ್ಯರ್ಥಿಗಳು ಸಂಬಂಧಿತ ವಿಭಾಗದಲ್ಲಿ ಐಟಿಐ ಪ್ರಮಾಣಪತ್ರವನ್ನು ಹೊಂದಿರಬೇಕು.

ಅಭ್ಯರ್ಥಿಗಳ ವಯಸ್ಸಿನ ಮಿತಿ 15 ರಿಂದ 24 ವರ್ಷಗಳ ನಡುವೆ ಇರಬೇಕು. ಸರ್ಕಾರಿ ನಿಯಮಗಳ ಪ್ರಕಾರ, ಮೀಸಲಾತಿ ವರ್ಗದ (ಒಬಿಸಿ, ಎಸ್‌ಸಿ, ಎಸ್‌ಟಿ, ದಿವ್ಯಾಂಗ, ಮಾಜಿ ಸೈನಿಕರು) ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುವುದು.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಆಯ್ಕೆಯು ಮೆರಿಟ್ ಪಟ್ಟಿಯನ್ನು ಆಧರಿಸಿರುತ್ತದೆ. ಅಭ್ಯರ್ಥಿಗಳ ದಾಖಲೆ ಪರಿಶೀಲನೆಯೂ ನಡೆಯಲಿದ್ದು, ಇದರಲ್ಲಿ ವೈದ್ಯಕೀಯ ಫಿಟ್‌ ನೆಸ್ ಪ್ರಮಾಣಪತ್ರವನ್ನು ಸಹ ಕೇಳಲಾಗಿದೆ.

ಕೇರಳ: ಕಂಪನಿಯ ಟಾರ್ಗೆಟ್ ಪೂರ್ತಿಗೊಳಿಸದ್ದಕ್ಕೆ ನಾಯಿಗಳಂತೆ ಮೊಣಕಾಲಿನಲ್ಲಿ ನಡೆಸಿ ವಿಚಿತ್ರ ಶಿಕ್ಷೆ..! ತನಿಖೆಗೆ ಆದೇಶಿಸಿದ ಕಾರ್ಮಿಕ ಇಲಾಖೆ..!

ಬೀಳ್ಕೊಡುಗೆ ಸಮಾರಂಭದಂದು ಭಾಷಣ ಮಾಡುತ್ತಲೇ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು..! ವಿಡಿಯೋ ವೈರಲ್

ದೇಶದ ಮೊದಲ ಸಮುದ್ರ ಸೇತುವೆ ಇಂದು(ಎ.6) ಉದ್ಘಾಟನೆ, ರಾಮನವಮಿಯಂದು 550 ಕೋಟಿ ರೂ. ವೆಚ್ಚದ ವಿಶಿಷ್ಟ ಸೇತುವೆ ಮೋದಿಯಿಂದ ಲೋಕಾರ್ಪಣೆ

See also  ಎಟಿಎಂನಿಂದ 18 ಲಕ್ಷ ರೂ. ದೋಚಿದ್ದ ದರೋಡೆಕೋರರ ಕಾಲಿಗೆ ಪೊಲೀಸರ ಗುಂಡೇಟು!ಈ ಬಗ್ಗೆ ಪೊಲೀಸ್ ಆಯುಕ್ತರು ಹೇಳಿದ್ದೇನು?
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget