Latestಕ್ರೈಂಜೀವನಶೈಲಿಮಹಿಳೆ-ಆರೋಗ್ಯವಿಡಿಯೋವೈರಲ್ ನ್ಯೂಸ್

ಬೀಳ್ಕೊಡುಗೆ ಸಮಾರಂಭದಂದು ಭಾಷಣ ಮಾಡುತ್ತಲೇ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು..! ವಿಡಿಯೋ ವೈರಲ್

1.2k

ನ್ಯೂಸ್ ನಾಟೌಟ್: ಕಾಲೇಜಿನ ಬೀಳ್ಕೊಡುವೆ ಸಮಾರಂಭದಂದು ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ವಿದ್ಯಾರ್ಥಿನಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಧಾರಾಶಿವ್ ​ನಲ್ಲಿ ನಡೆದಿದೆ.

ಘಟನೆ ನಡೆದಾಗ ಕಾಲೇಜು ವಿದ್ಯಾರ್ಥಿನಿ ವರ್ಷಾ, ಖರತ್ ಪರಂಡ ಎಂಬಲ್ಲಿನ ಆರ್‌ ಜಿ ಶಿಂಧೆ ಕಾಲೇಜಿನಲ್ಲಿ ಸಂತೋಷದಿಂದ ಭಾಷಣ ಮಾಡುತ್ತಿದ್ದಳು.
ಇಡೀ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವರ್ಷಾ ಮಾತನಾಡುವಾಗ ಪ್ರಜ್ಞೆ ತಪ್ಪಿ ಬಿದ್ದ ಕಾರಣ ಅವರನ್ನು ಪರಾಂಡದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದ್ದರು. ಪ್ರಾಥಮಿಕ ಮಾಹಿತಿಯ ಪ್ರಕಾರ, ವರ್ಷಾ 8 ವರ್ಷದವಳಿದ್ದಾಗ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು, ಆದರೆ ಕಳೆದ ಹನ್ನೆರಡು ವರ್ಷಗಳಿಂದ ಯಾವುದೇ ಆರೋಗ್ಯ ಸಮಸ್ಯೆಗಳು ಕಂಡುಬಂದಿರಲಿಲ್ಲ ಮತ್ತು ಯಾವುದೇ ಔಷಧಿಗಳನ್ನು ತೆಗೆದುಕೊಳ್ಳುತ್ತಿರಲಿಲ್ಲ. 

ಭಾಷಣ ಮಾಡುತ್ತಿದ್ದಾಗ ಅವರಿಗೆ ಹಠಾತ್ ಹೃದಯಾಘಾತವಾಗಿ ಸಾವು ಸಂಭವಿಸಿದೆ ಎಂಬ ಊಹಾಪೋಹಗಳಿವೆ. ವರ್ಷಾ ಅವರ ನಿಧನಕ್ಕೆ ಕಾಲೇಜು ಆಡಳಿತ ಮಂಡಳಿ ತೀವ್ರ ದುಃಖ ವ್ಯಕ್ತಪಡಿಸಿದ್ದು, ಒಂದು ದಿನದ ರಜೆ ಘೋಷಿಸಿದೆ.

ಇದನ್ನೂ ಓದಿ:ದೇಶದ ಮೊದಲ ಸಮುದ್ರ ಸೇತುವೆ ಇಂದು(ಎ.6) ಉದ್ಘಾಟನೆ, ರಾಮನವಮಿಯಂದು 550 ಕೋಟಿ ರೂ. ವೆಚ್ಚದ ವಿಶಿಷ್ಟ ಸೇತುವೆ ಮೋದಿಯಿಂದ ಲೋಕಾರ್ಪಣೆ

See also  ಪುತ್ತೂರು: ಲವ್ ಪ್ರಪೋಸ್ ನಿರಾಕರಿಸಿದ್ದಕ್ಕೆ ಮುಸ್ಲಿಂ ವಿದ್ಯಾರ್ಥಿನಿಗೆ ಅಪ್ರಾಪ್ತನಿಂದ ಚಾಕು ಇರಿತ ..? ಇಲ್ಲಿದೆ ವಿಡಿಯೋ
  Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget