Uncategorized

ವಿಜಯ ಸಂಕಲ್ಪ ಯಾತ್ರೆ,ತ್ಯಾಜ್ಯ ಆಹಾರ ಸೇವಿಸಿ 7 ಹಸುಗಳು ಮೃತ್ಯು -ಸ್ಥಳೀಯರ ಆರೋಪ

ನ್ಯೂಸ್ ನಾಟೌಟ್ : ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯ ತ್ಯಾಜ್ಯ ಆಹಾರ ಸೇವಿಸಿ 7ಕ್ಕೂ ಹೆಚ್ಚು ಹಸುಗಳು ಸಾವಿಗೀಡಾದ ಘಟನೆ ರಾಯಚೂರು ಹೊರವಲಯದ ಗುಂಜಳ್ಳಿ ಗ್ರಾಮದಲ್ಲಿ ನಡೆದಿದೆ.ಎಂಟು ಹಸುಗಳು ತೀವ್ರ ಅಸ್ವಸ್ಥಗೊಂಡಿವೆ ಎಂದು ವರದಿಯಾಗಿದೆ.

ಬಿಜೆಪಿ ಸಂಕಲ್ಪ ಯಾತ್ರೆ ನಂತರ ರಾಶಿ ಹಾಕಲಾಗಿದ್ದ ಕಸದ ರಾಶಿ ಬಳಿ ತೆರಳಿದ ಜಾನುವಾರುಗಳು ಅವುಗಳನ್ನು ಸೇವಿಸಿವೆ.ಈ ವೇಳೆ ತೀರಾ ಅಸ್ವಸ್ಥಗೊಂಡು ಸಾವನ್ನಪ್ಪಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಅಲ್ಲದೇ ಹಲವಾರು ಹಸುಗಳು ಅಸ್ವಸ್ಥಗೊಂಡಿವೆ ಎಂದು ಹೇಳಿದ್ದಾರೆ. 10ನೇ ತಾರೀಖಿನಿಂದು ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ವಿಜಯ ಸಂಕಲ್ಪ ಯಾತ್ರೆ ನಡೆದಿತ್ತು. ಕಾರ್ಯಕ್ರಮಕ್ಕೆ ತಿಪ್ಪರಾಜ್ ಹವಾಲ್ದಾರ್ ಪರ ಬಿಜೆಪಿ ನಾಯಕರು ಪ್ರಚಾರ ನಡೆಸಿದ್ದರು. ಮಾಜಿ ಸಿಎಂ ಜಗದೀಶ್ ಶೆಟ್ಟರ್, ಬಿ. ಶ್ರೀರಾಮುಲು ಸಹ ಭಾಗಿಯಾಗಿದ್ದರು.

ಈ ವೇಳೆ ಸುಮಾರು ೧೦೦೦ಕ್ಕಿಂತಲೂ ಹೆಚ್ಚಿನ ಕಾರ್ಯಕರ್ತರಿಗೆ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಇದಾದ ಬಳಿಕ ಉಳಿದ ಆಹಾರವನ್ನು ಒಂದು ಕಡೆ ರಾಶಿ ಹಾಕಿ ಹೋಗಲಾಗಿತ್ತು.ಈ ವೇಳೆ ಜಾನುವಾರುಗಳು ಇದನ್ನು ತಿಂದು ತೀರಾ ಅಸ್ವಸ್ಥಗೊಂಡಿವೆ. ಈ ಹಸುಗಳನ್ನು ಸಾಕುತ್ತಿದ್ದವರು ಯಾತ್ರೆ ಆಯೋಜಕರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಷ್ಟಾದರೂ ಬಿಜೆಪಿ ನಾಯಕರು ಸ್ಥಳಕ್ಕೆ ಬಂದು ಸಮಸ್ಯೆ ಆಲಿಸಿಲ್ಲ, ಇನ್ನೊಂದೆಡೆ ಪಶುವೈದ್ಯರು ಕೂಡ ಗ್ರಾಮಕ್ಕೆ ಭೇಟಿ ನೀಡದೆ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಸಂತ್ರಸ್ತರು ಕಿಡಿ ಕಾರಿದ್ದಾರೆ.

Related posts

ದರ್ಶನ್ ನನ್ನು ಮದುವೆ ಆಗ್ತೇನೆ, ಒಳಗೆ ಬಿಡಿ ಎಂದು ಕಾರಾಗೃಹದ ಮುಂದೆ ಧರಣಿ ನಡೆಸುತ್ತಿರುವ ಮಹಿಳೆ..! ಬೆಂಗಳೂರಿನಿಂದ ಬಳ್ಳಾರಿಗೆ ಬಂದ ಮಹಿಳೆಗೆ ನೋ ಎಂಟ್ರಿ..!

ಪತಿಯ ಗುಪ್ತಾಂಗಕ್ಕೆ ಬಿಸಿ ನೀರು ಎರಚಿದ ಪತ್ನಿ

ದಿಲ್ಲಿಯಿಂದ ಲಂಡನ್ ಗೆ ತೆರಳುತ್ತಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ, ತುರ್ತು ಭೂ ಸ್ಪರ್ಶದ ಬಳಿಕ ತಿಳಿದು ಬಂದಿದ್ದೇನು..?