ದೇಶ-ಪ್ರಪಂಚದೇಶ-ವಿದೇಶರಾಜಕೀಯ

ಚುನಾವಣಾ ಪ್ರಚಾರದಲ್ಲಿ ಮದುವೆ ಯಾವಾಗ ಎಂದು ಕೇಳಿದ ಕಾರ್ಯಕರ್ತರು..! ಉತ್ತರ ಕೊಟ್ಟು ವೇದಿಕೆಯಿಂದ ಇಳಿದ ರಾಹುಲ್..! ಇಲ್ಲಿದೆ ವಿಡಿಯೋ

ನ್ಯೂಸ್ ನಾಟೌಟ್: ಈ ಬಾರಿ ಲೋಕಸಭಾ ಚುನಾವಣೆ(Lok Sabha Election 2024)ಯಲ್ಲಿ ರಾಯ್‌ ಬರೇಲಿಯಿಂದಲೂ ಕಣಕ್ಕಿಳಿದಿರುವ ರಾಹುಲ್‌ ಗಾಂಧಿ ಇಂದು(ಮೇ.13) ಭಾಗಿಯಾದ ಬಹಿರಂಗ ಪ್ರಚಾರ ಕಾರ್ಯಕ್ರಮದಲ್ಲಿ ತಮ್ಮ ಮದುವೆ ಬಗ್ಗೆ ಮೌನ ಮಾತನಾಡಿದ್ದಾರೆ. ರಾಯ್‌ ಬರೇಲಿಯಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಸಹೋದರಿ ಪ್ರಿಯಾಂಕಾ ಗಾಂಧಿ ಮತ್ತು ಆಪ್ತ ಕೆ.ಎಲ್‌ ಶರ್ಮಾ ಜೊತೆ ಭಾಗಿಯಾದ ರಾಹುಲ್‌ ಗಾಂಧಿ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು.

ಈ ವೇಳೆ ಭಾಷಣದ ಕೊನೆಯಲ್ಲಿ ಕಾರ್ಯಕರ್ತರು ರಾಹುಲ್‌ ಗಾಂಧಿಯವರನ್ನು ಮದುವೆ ಯಾವಾಗ ಎಂದು ಪ್ರಶ್ನಿಸಿದ್ದಾರೆ. ಆಗ ವೇದಿಕೆಯಲ್ಲಿದ್ದ ಪ್ರಿಯಾಂಕಾ, ರಾಹುಲ್‌ ಬಳಿಗೆ ಬಂದು ಸಭಿಕರು ಏನೋ ಕೇಳುತ್ತಿದ್ದಾರೆ ನೋಡಿ ಅಂದಿದ್ದಾರೆ.

ತಕ್ಷಣ ರಾಹುಲ್‌ ಏನು ಎಂದು ಪ್ರಶ್ನಿಸಿದ್ದಾರೆ. ಆಗ ಕಾರ್ಯಕರ್ತರು ನಿಮ್ಮ‌ ಮದುವೆ ಯಾವಾಗ ಎಂದು ಮತ್ತೊಮ್ಮೆ ಕೇಳಿದ್ದಾರೆ. ಆಗ ನಗುತ್ತಾ ಉತ್ತರಿಸಿದ ಅಬ್‌ ಜಲ್ದೀ ಹೀ ಕರ್ನೀ ಪಡೇಗಿ(ಬೇಗ ಮದುವೆ ಆಗ್ಲೇ ಬೇಕಿದೆ) ಎಂದು ಹೇಳಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗುತ್ತಿದೆ. (Rahul gandhi marriage)

Click 👇

https://newsnotout.com/2024/05/voting-and-viral-video
https://newsnotout.com/2024/05/petrol-price-60-years-ago

Related posts

ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿಕರ ವಿಡಿಯೋ ಪ್ರಸಾರ; ಕಾಂಗ್ರೆಸ್‌ ಅಭ್ಯರ್ಥಿಯಿಂದ ದೂರು

‘ವರ್ಷದ ವಿಶ್ವ ಶ್ರೇಷ್ಠ ಅಥ್ಲೀಟ್’ ಪ್ರಶಸ್ತಿ ರೇಸ್‌ನಲ್ಲಿ ಭಾರತದ ಏಕೈಕ ನಾಮನಿರ್ದೇಶನ ,ಚಿನ್ನದ ಹುಡುಗನಿಗೆ ಒಲಿಯುವುದೇ ಗೌರವ?

ಚಲಿಸುತ್ತಿದ್ದ ಬೈಕ್ ನಲ್ಲಿ ಜೋಡಿಗಳ ರೊಮ್ಯಾನ್ಸ್ ! ವಿಡಿಯೋ ವೈರಲ್