Uncategorized

ಅಶಿಸ್ತಿನ ಹಿನ್ನೆಲೆ: ಕ್ರೀಡಾಂಗಣದಿಂದ ಜೈಸ್ವಾಲ್‌ರನ್ನು ಹೊರಗಟ್ಟಿದ ರಹಾನೆ

ನ್ಯೂಸ್ ನಾಟೌಟ್: ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಎದುರಾಳಿ ಬ್ಯಾಟ್ಸ್‌ ಮನ್‌ಗೆ ನಿಂದಿಸಿದ್ದಕ್ಕಾಗಿ ತಮ್ಮ ತಂಡದ ಸಹ ಆಟಗಾರ ಯಶಸ್ವಿ ಜೈಸ್ವಾಲ್ ಅವರನ್ನು ಪಶ್ಚಿಮ ವಲಯದ ನಾಯಕ ಅಜಿಂಕ್ಯ ರಹಾನೆ ಮೈದಾನದಿಂದ ಹೊರಗಟ್ಟಿದ ಘಟನೆ ವರದಿಯಾಗಿದೆ. 

ದಕ್ಷಿಣ ವಲಯ ವಿರುದ್ಧ ಭಾನುವಾರ ನಡೆದ ಅಂತಿಮ ದಿನದಾಟದಲ್ಲಿ ಈ ಘಟನೆ ನಡೆದಿದೆ. ದಕ್ಷಿಣ ವಲಯದ ಬ್ಯಾಟರ್ ರವಿತೇಜಾ ಅವರಿಗೆ ಜೈಸ್ವಾಲ್ ಪದೇ ಪದೇ ನಿಂದಿಸುತ್ತಿದ್ದರು. ಈ ಬಗ್ಗೆ ಆನ್ ಫೀಲ್ಡ್ ಅಂಪೈರ್ ಬಳಿ ರವಿ ತೇಜಾ ದೂರಿದ್ದರು. ಪರಿಣಾಮ ಜೈಸ್ವಾಲ್‌ಗೆ ಎಚ್ಚರಿಕೆ ನೀಡಲಾಯಿತು. ಆದರೆ ಬ್ಯಾಟರ್ ಹತ್ತಿರದಲ್ಲೇ ಫೀಲ್ಡಿಂಗ್ ಮಾಡುತ್ತಿದ್ದ ಜೈಸ್ವಾಲ್, ಮತ್ತದೇ ಚಾಳಿಯನ್ನು ಮುಂದುವರಿಸಿದರು. 57ನೇ ಓವರ್‌ನಲ್ಲಿ ಜೈಸ್ವಾಲ್ ಅನುಚಿತ ವರ್ತನೆ ಬಗ್ಗೆ ಅಂಪೈರ್, ಪಶ್ಚಿಮ ವಲಯದ ನಾಯಕ ರಹಾನೆ ಅವರ ಗಮನಕ್ಕೆ ತಂದರು.  ಇದರಿಂದ ಬೇಸತ್ತ ರಹಾನೆ, ಕೊನೆಗೆ ಸಹ ಆಟಗಾರ ಜೈಸ್ವಾಲ್ ಅವರಲ್ಲಿ ಮೈದಾನದಿಂದ ಹೊರಗುಳಿಯುವಂತೆ ಸೂಚಿಸಿದರು. ಈ ವೇಳೆ ಜೈಸ್ವಾಲ್ ಅಸಮಾಧಾನ ತೋಡಿಕೊಂಡಿದ್ದರಲ್ಲದೆ ನಿಧಾನವಾಗಿ ಮೈದಾನದಿಂದ ಹೊರಗೆ ಹೆಜ್ಜೆ ಹಾಕಿದರು.  

Related posts

ವಿಷಯುಕ್ತ ತ್ಯಾಜ್ಯ ನೀರು ಕೆರೆಗೆ, ಸತ್ತು ಬಿದ್ದ 2 ಟನ್ ಮೀನುಗಳು

ಪುತ್ತೂರು: ಸ್ಕೂಟರ್ ಸವಾರನ ಮೇಲೆ ಕಾಡು ಹಂದಿ ದಾಳಿ..! ಯುವಕ ಆಸ್ಪತ್ರೆಗೆ ದಾಖಲು..!

ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯದಲ್ಲಿ ಎನ್.ಎಸ್.ಎಸ್ ಘಟಕ ಮತ್ತು ಯುವ ರೆಡ್‌ಕ್ರಾಸ್ ಘಟಕದ ಉದ್ಘಾಟನೆ