ಕ್ರೈಂ

ಆಫೀಸ್ ಗೆ ನುಗ್ಗಿದ ಪತ್ನಿ ಗಂಡನಿಗೆ ಚಪ್ಪಲಿಯಿಂದ ಹೊಡೆದದ್ದೇಕೆ? ಆಕೆಯ ರೌದ್ರಾವತಾರ ನೋಡಿ ದಂಗಾದ ಆಫೀಸ್ ಮಂದಿ! ಏನಿದು ವೈರಲ್ ಸ್ಟೋರಿ?

ನ್ಯೂಸ್‌ ನಾಟೌಟ್‌: ಹಲವು ಬಾರಿ ಮನೆಯೊಳಗಿರಬೇಕಾದ ಪತಿ – ಪತ್ನಿಯರ ಜಗಳ ಬೀದಿ ರಂಪಾಟವಾಗುವುದು ಇತ್ತೀಚೆಗೆ ಸಹಜ ಎಂಬಂತಾಗಿದೆ, ಹವು ಬಾರಿ ಗಂಡನ ಅವ್ಯವಹಾರಗಳು, ಅಕ್ರಮ ಸಂಬಂಧಗಳು ಬಹಿರಂಗವಾದಾಗ ಪತ್ನಿ ಆಕ್ರೋಶಗೊಂಡು ಅನಾಹುತ ಸೃಸ್ಟಿಸಿರುವ ಘಟನೆಗಳಿವೆ. ಹಾಗೆಯೇ, ಇಲ್ಲೊಂದು ಅಕ್ರಮ ಸಂಬಂಧದ ಘಟನೆ ಗಂಡನ ಆಫೀಸ್ ವರೆಗೆ ತಲುಪಿದೆ.

ಅನೇಕ ದಾರವಾಹಿಗಳು ಇಂತಹ ಕಥಾ ಹಂದರವನ್ನು ಹೊಂದಿರುತ್ತವೆಯಾದರೂ, ಕೆಲವೊಮ್ಮೆ ಅಂತಹಾ ಕಥೆಗಳೇ ನಿಜವಾಗುವುದುಂಟು.
ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾದ ಪತಿಯನ್ನು ಆತ ಕೆಲಸ ಮಾಡುತ್ತಿದ್ದ ಕಚೇರಿಗೆ ಬಂದು ಪತ್ನಿ ಚಪ್ಪಲಿಯಿಂದ ಥಳಿಸಿರುವ ಘಟನೆ ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ನಡೆದಿದೆ.

ಪತಿ ಕಚೇರಿಯಲ್ಲಿನ ಮಹಿಳೆಯೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿರುವ ವಿಚಾರವನ್ನು ತಿಳಿದು ಪತ್ನಿ ನೇರವಾಗಿ ಕಚೇರಿಗೆ ಬಂದು ಪತಿಯ ಮೇಲೆ ಚಪ್ಪಲಿಯನ್ನು ಎಸೆದಿದ್ದಾರೆ. ಪತ್ನಿಯ ರೌದ್ರಾವತಾರ ನೋಡಿ ತನ್ನನ್ನು ತಾನು ರಕ್ಷಿಸಲು ಪತಿ ಯತ್ನಿಸಿದ್ದಾರೆ.
ಕುಟುಂಬ ನಿಭಾಯಿಸಲು ಹಾಗೂ ಮಕ್ಕಳನ್ನು ಬೆಳೆಸಲು ಆರ್ಥಿಕವಾಗಿ ನೆರವಾಗಿಲ್ಲ ಎಂದು ಪತ್ನಿ ಆರೋಪಿಸಿದ್ದು, ಆ ಕಂಪನಿಯಲ್ಲಿ ಮಹಿಳೆಯ ಪತಿ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.

ಪತಿ ಕುಟುಂಬ ನಿಭಾಯಿಸಲು ಆರ್ಥಿಕ ಸಹಾಯ ನೀಡಿದ ಕಾರಣ ನಾನು ಕಳೆದ ವರ್ಷದಿಂದ ತವರು ಮನೆಯಲ್ಲಿಯೇ ವಾಸಿಸುತ್ತಿದ್ದೇನೆ. ಪತಿ ತನ್ನ ಅಕ್ರಮ ಸಂಬಂಧಕ್ಕಾಗಿ ತನ್ನೆಲ್ಲ ಹಣವನ್ನು ಪೋಲು ಮಾಡುತ್ತಿದ್ದಾನೆ, ತನಗೆ ಮತ್ತು ಮಕ್ಕಳಿಗೆ ಆರ್ಥಿಕ ಬೆಂಬಲವನ್ನು ನೀಡಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ.
ಕಚೇರಿಗೆ ನುಗ್ಗಿ ಪತಿಗೆ ಚಪ್ಪಲಿಯಲ್ಲಿ ಥಳಿಸಿರುವ ಮಹಿಳೆಯ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ
.

Related posts

ದಕ್ಷಿಣ ಕನ್ನಡ: ವೃದ್ಧ ರೋಗಿಯ ಮೇಲೆ ಲೈಂಗಿಕ ದೌರ್ಜನ್ಯ! ಹೋಮ್ ನರ್ಸಿಂಗ್ ಗೆ ಬಂದಿದ್ದ 19ರ ಯುವಕನ ಬಂಧನ!

ಸಚಿವ ಮಧು ಬಂಗಾರಪ್ಪ ಕಾರು ಅಪಘಾತ, ಬೆಂಗಳೂರಿಗೆ ತೆರಳುತ್ತಿದ್ದಾಗ ನಡೆದ ದುರ್ಘಟನೆ

ಚಲಿಸುತ್ತಿರುವ ಕಾರಿನಲ್ಲಿ ರೊಮ್ಯಾನ್ಸ್‌..! ಲಿಪ್‌ ಲಾಕ್‌ ವಿಡಿಯೋ ಎಲ್ಲೆಡೆ ವೈರಲ್