ನ್ಯೂಸ್ ನಾಟೌಟ್: ಪುತ್ತೂರಿನ ಗುಡ್ಡವೊಂದರಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಮಹಿಳೆಯರ ಕತ್ತು ಹಿಡಿದ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಲಭಿಸಿದೆ. ಅಪರಿಚಿತ ವ್ಯಕ್ತಿ ಯಾರು ಅನ್ನುವ ವಿಚಾರವೂ ಇದೀಗ ಹೊರಬಿದ್ದಿದೆ.
ಹೌದು, ದ.ಕ. ಜಿಲ್ಲೆಯ ಪುತ್ತೂರಿನ ಬಡಗನ್ನೂರಿನಲ್ಲಿ ಹಿಂದಿನಿಂದ ಬಂದು ಮಹಿಳೆಯರಿಬ್ಬರ ಕತ್ತು ಹಿಡಿದ ವ್ಯಕ್ತಿ ಸುಳ್ಯ ಮೂಲದವನು ಎಂದು ತಿಳಿದು ಬಂದಿದೆ.
ಬಡಗನ್ನೂರು ಮುಲಗದ್ದೆ ನಿವಾಸಿ ಸುರೇಖ (54), ಆಲಂಗಾರ್ ಕುಂತೂರು ನಿವಾಸಿ ಗಿರಿಜ (52) ಎಂಬವರು ಮಂಗಳವಾರ ಗುಡ್ಡವೊಂದರಲ್ಲಿ ಅಣಬೆ ಹೆಕ್ಕುತ್ತಾ ಇದ್ದರು. ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಹಿಂದಿನಿಂದ ಬಂದು ಕತ್ತು ಹಿಸುಕಿದ್ದಾನೆ. ಗಂಭೀರ ಸ್ಥಿತಿಯಲ್ಲಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಡೆದ ಕೆಲವೇ ಗಂಟೆಯಲ್ಲಿ ಆರೋಪಿ ಸುರೇಶ್ ನನ್ನ ಬಂಧಿಸಲಾಗಿದೆ. ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.