ಕರಾವಳಿಕ್ರೈಂಪುತ್ತೂರುವೈರಲ್ ನ್ಯೂಸ್

ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ತಡರಾತ್ರಿ ಬೆಂಕಿ ಅವಘಡ..! ರೋಗಿಗಳು ಪಾರಾಗಿದ್ದೇಗೆ? ಮಧ್ಯರಾತ್ರಿಯೇ ಶಾಸಕ ಅಶೋಕ್ ರೈ ಭೇಟಿ!

ನ್ಯೂಸ್ ನಾಟೌಟ್: ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಶುಕ್ರವಾರ ತಡರಾತ್ರಿ ಅಗ್ನಿ ಅವಘಡ ಸಂಭವಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ (ಡಿ.22) ಶುಕ್ರವಾರ ತಡರಾತ್ರಿ ನಡೆದಿದೆ.

ತಾಲೂಕು ಸರಕಾರಿ ಆಸ್ಪತ್ರೆಯ ತೀವ್ರ ನಿಗಾ ವಿಭಾಗದಲ್ಲಿ ಈ ಘಟನೆ ನಡೆದಿದೆ. ಐಸಿಯುವಿನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ವರದಿ ತಿಳಿಸಿದೆ. ಈ ಸಂದರ್ಭ ಕೆಲ ಯಂತ್ರಗಳಿಗೆ ಹಾನಿಯಾದ ಘಟನೆಯೂ ನಡೆದಿದ್ದು, ರೋಗಿಗಳು ಪಾರಾಗಿದ್ದಾರೆ.

ರಾತ್ರಿ 1 ಗಂಟೆ ವೇಳೆ ಶಾಸಕ ಅಶೋಕ್ ಕುಮಾರ್ ರೈ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಅವಲೋಕಿಸಿದ್ದಾರೆ.
ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಈ ಸಂದರ್ಭ ಪಕ್ಕದ ವಿಹಿಂಪ ಕಾರ್ಯಾಲಯದಲ್ಲಿದ್ದ ದತ್ತಮಾಲಾಧಾರಿಗಳು ಆಗಮಿಸಿ ಬೆಂಕಿ ನಂದಿಸುವಲ್ಲಿ ಸಹಕರಿಸಿದ್ದಾರೆ ಎನ್ನಲಾಗಿದೆ.

ದುರ್ಘಟನೆಯಲ್ಲಿ ಹವಾನಿಯಂತ್ರಿತ ಘಟಕ ಮತ್ತು ಅದರ ಪಕ್ಕದಲ್ಲಿದ್ದ ಇತರ ಕೆಲವೊಂದು ಯಂತ್ರಗಳಿಗೆ ಹಾನಿಯಾಗಿದೆ ಎಂದು ವರದಿ ತಿಳಿಸಿದೆ.

Related posts

ಕೊಕ್ಕಡ ಗ್ರಾಮ ಪಂಚಾಯತ್ ನಲ್ಲಿ ಡಿಜಿಟಲ್ ಗ್ರಂಥಾಲಯ, ಮಾಹಿತಿ ಕೇಂದ್ರ ಉದ್ಘಾಟನೆ

ಆರೋಗ್ಯ ಇಲಾಖೆ ಅಧಿಕಾರಿ ಆತ್ಮಹತ್ಯೆಗೆ ಶರಣು,ಕಳೆದ ಮೂರು ತಿಂಗಳ ಹಿಂದೆಯಷ್ಟೇ ವರ್ಗಾವಣೆಯಾಗಿದ್ದ ವೈದ್ಯ

ಚೆನ್ನೈನಿಂದ ಇಸ್ರೇಲ್‌ಗೆ ಶಸ್ತ್ರಾಸ್ತ್ರ ಹೊತ್ತು ಸಾಗಿದ ಹಡಗು..! ಬಂದರಿನಲ್ಲಿ ನಿಲುಗಡೆಗೆ ನಿರಾಕರಿಸಿದ ಸ್ಪೇನ್‌..!