ಕರಾವಳಿ

ಪುತ್ತೂರು : ರಾತ್ರಿ ವೇಳೆ ಬಸ್ ನಿಲ್ದಾಣ ಸಮೀಪ ನಡುರಸ್ತೆಯಲ್ಲೇ ತಂಡಗಳ ಮಧ್ಯೆ ಮಾರಾಮಾರಿ – ವಿಡಿಯೋ ವೈರಲ್..!

ನ್ಯೂಸ್‌ ನಾಟೌಟ್‌ : ಪುತ್ತೂರು ಬಸ್ ನಿಲ್ದಾಣ ಸಮೀಪ ಎರಡು ತಂಡಗಳು ಹೊಡೆದಾಟ ನಡೆಸಿಕೊಂಡ ಘಟನೆ ನಿನ್ನೆ ರಾತ್ರಿ(ಫೆ.೧ರಂದು) ಸಂಭವಿಸಿದೆ.ಪುತ್ತೂರು ಬಸ್ ನಿಲ್ದಾಣ ಸಮೀಪದ ಗಾಂಧಿಕಟ್ಟೆ ಸಮೀಪ ಹಣ್ಣು ಹಂಪಲು ವಿತರಣೆಯ ಪಿಕಪ್ ವಾಹನದವರು ಮತ್ತು ಮಾರುತಿ 800 ಕಾರಿನ ನಡುವೆ ನಡುರಸ್ತೆಯಲ್ಲೇ ಹೊಡೆದಾಟ ನಡೆದಿದೆ ಎನ್ನಲಾದ ವಿಡಿಯೋ ಭಾರಿ ವೈರಲ್ ಆಗಿದೆ.

ರಾತ್ರಿ ಸುಮಾರು 8.45 ಸಮಯ ಆಗಿರಬಹದು ಈ ವೇಳೆ ಮುಖ್ಯ ಪೇಟೆಯಲ್ಲೇ ಅರ್ಧ ಗಂಟೆಗೂ ಹೆಚ್ಚು ಕಾಲ ಹೊಡೆದಾಟ ನಡೆದಿದ್ದರೂ ಕೂಡ ಪೊಲೀಸರ ಪತ್ತೆಯೇ ಇರಲಿಲ್ಲ ಎಂಬ ಆರೋಪ ಸಾರ್ವಜನಿಕರ ವಲಯದಿಂದ ಕೇಳಿ ಬಂದಿದೆ.ಆದರೆ ಈ ಗಲಾಟೆ ಯಾವ ಕಾರಣಕ್ಕೆ ನಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ.

ಹೊಡೆದಾಟದಿಂದಾಗಿ ಪುತ್ತೂರು ಬಸ್‌ ಸ್ಟ್ಯಾಂಡ್‌ ಬಳಿಯಲ್ಲಿ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಯಿತು. ನಂತರ ಸ್ಥಳೀಯ ಅಂಗಡಿಯವರು ಬಂದು ಎಚ್ಚರಿಕೆ ಕೊಟ್ಟ ನಂತರ ಎರಡು ತಂಡಗಳು ಜಾಗ ಖಾಲಿ ಮಾಡಿವೆ ಎಂದು ತಿಳಿದು ಬಂದಿದೆ.

Related posts

ಕಾಂಗ್ರೆಸ್ ಬೆಂಬಲಿಸಿದರೆ ಮತೀಯವಾದಿಗಳು ವಿಜೃಂಭಿಸುತ್ತಾರೆ! ಮತ್ತೊಂದು ಅಫ್ಘಾನಿಸ್ಥಾನ ಮತ್ತು ಪಾಕಿಸ್ಥಾನ ಆಗಲು ಬಿಡಬಾರದು ಬಿಜೆಪಿ ಅಭ್ಯರ್ಥಿ ವಿ. ಸುನೀಲ್ ಕುಮಾರ್ ಕರೆ

ಯಡಕುಮಾರಿ ಬಳಿ ಗುಡ್ಡ ಕುಸಿತ, ಬೆಂಗಳೂರು -ಮಂಗಳೂರು ರೈಲ್ವೆ ಸಂಚಾರ ಅಸ್ತವ್ಯಸ್ತ

ನಂಬಿದ ಗೆಳೆಯನ ಕತ್ತು ಕೊಯ್ದ ಗೆಳೆಯ, ಪಾಪಿ ದುನಿಯಾ..!