ಕರಾವಳಿ

ಪುತ್ತೂರು:ಹೊಳೆಗೆ ಈಜಲೆಂದು ಹೋಗಿ ನೀರು ಪಾಲಾದ ಯುವಕ ಶವವಾಗಿ ಪತ್ತೆ,ಮನೆ ಮಗನನ್ನು ಕಳೆದುಕೊಂಡು ಕಣ್ಣೀರಾದ ಕುಟುಂಬ

ನ್ಯೂಸ್ ನಾಟೌಟ್ : ಹೊಳೆಗೆ ಈಜಲೆಂದು ಹೋಗಿ ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆಯಾಗಿರುವ ಘಟನೆ ಪುತ್ತೂರು ತಾಲೂಕಿನ ಅರಿಕ್ಕಿಲ ಸಮೀಪದ ಎರಕ್ಕಲ ಎಂಬಲ್ಲಿ ನಡೆದಿದೆ.ತಸ್ಲೀಮ್ (17ವ) ಮೃತ ಯುವಕನೆಂದು ತಿಳಿದು ಬಂದಿದೆ.ಈತ ಸುಳ್ಯ ತಾಲೂಕಿನ  ಅರಂತೋಡು ನೆಹರೂ ಮೆಮೋರಿಯಲ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯೆಂದು ಹೇಳಲಾಗಿದೆ.

ನಾಪತ್ತೆಯಾಗಿದ್ದ ಯುವಕನ ಮೃತದೇಹ ಅ.16ರಂದು ಬೆಳಿಗ್ಗೆ ಪತ್ತೆಯಾಗಿದೆ.ತಸ್ಲೀಮ್ (17ವ) ಮಾಡಾವು ಕಟ್ಟತ್ತಾರು ನಿವಾಸಿ ಹಂಝ ಎಂಬವರ ಪುತ್ರ ಎಂದು ತಿಳಿದು ಬಂದಿದೆ.ಅ.15ರಂದು ಸಂಜೆ ಗೆಳೆಯರ ಜೊತೆಗೂಡಿ ಅರಿಕ್ಕಿಲ ಸಮೀಪದ ಎರಕ್ಕಲ ಎಂಬಲ್ಲಿ ಹೊಳೆಗೆ ಈಜಲು ತೆರಳಿದ್ದ.ಈ ವೇಳೆ ದುರ್ಘಟನೆ ಸಂಭವಿಸಿತ್ತು. ಯುವಕ ನಾಪತ್ತೆಯಾಗುತ್ತಿದ್ದಂತೆ ಸ್ನೇಹಿತರು ಮನೆಯವರಿಗೆ, ಸ್ಥಳೀಯರಿಗೆ ವಿಷಯ ತಲುಪಿಸಿದ್ದರು.

ತಕ್ಷಣ ಸ್ಥಳೀಯರು ಹೊಳೆಯಲ್ಲಿ ಹುಡುಕಾಟ ನಡೆಸಿದರಾದರೂ ಯುವಕ ಪತ್ತೆಯಾಗಿರಲಿಲ್ಲ. ಬಳಿಕ ಮುಳುಗು ತಜ್ಞರು ಕಾರ್ಯಾಚರಣೆ ಮುಂದುವರಿಸಿದ್ದರು. ಅದರೂ, ಆತ ಪತ್ತೆಯಾಗಿರಲಿಲ್ಲ. ಸೋಮವಾರ ಬೆಳಿಗ್ಗೆ ಹುಡುಕಾಟ ಮುಂದುವರಿಸಿದಾಗ ಈಜಲು ತೆರಳಿದ್ದ ಸ್ಥಳದ ಆಸುಪಾಸಿನಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

Related posts

ಸಂಪಾಜೆ: ಕೆನರಾ ಬ್ಯಾಂಕ್ ಒಳಗೆ ಒಂಟಿಯಾಗಿ ಕುಳಿತು ಗ್ರಾಹಕನ ಮೌನ ಪ್ರತಿಭಟನೆ, 2016ರಲ್ಲಿ ವಿದ್ಯಾರ್ಥಿನಿಯ ಎಜ್ಯುಕೇಶನ್ ಲೋನ್ ನ ಜಾಮೀನಿಗೆ ಸಹಿ ಹಾಕಿದ್ದ ಗ್ರಾಹಕನಿಗೆ ಆಗಿದ್ದೇನು..?

ಪ್ರವಾಸಿ ತಾಣಗಳಲ್ಲಿ ರಜೆಯ ಮೋಜು ಅನುಭವಿಸಿದ ಪ್ರವಾಸಿಗರು..!ದೇವಸ್ಥಾನಗಳಲ್ಲಿಯೂ ಭಕ್ತರ ಸರತಿ ಸಾಲು..!

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ 1,188 ಮಂದಿ ಕ್ರಿಮಿನಲ್ ಹಿನ್ನೆಲೆ ಉಳ್ಳವರು..! ಚುನಾವಣಾ ಹಕ್ಕುಗಳ ಸಂಸ್ಥೆಯ ವರದಿಯಲ್ಲೇನಿದೆ..?