ಕರಾವಳಿಕೊಡಗುಪುತ್ತೂರುರಾಜಕೀಯ

ಹಲ್ಲೆಗೊಳಗಾದ ಹಿಂದೂ ಕಾರ್ಯಕರ್ತರನ್ನು ಭೇಟಿಯಾದ ಯತ್ನಾಳ್, ಬಿಜೆಪಿ ಮುಖಂಡನನ್ನು ಒಳಬಿಡದ ಪುತ್ತಿಲ ಬೆಂಬಲಿಗರು

ನ್ಯೂಸ್ ನಾಟೌಟ್ : ಬ್ಯಾನರ್ ವಿಚಾರದಲ್ಲಿ ಪೋಲೀಸ್ ದೌರ್ಜನ್ಯಕ್ಕೊಳಗಾದ ಹಿಂದೂ ಕಾರ್ಯಕರ್ತರ ಭೇಟಿಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಇಂದು ಪುತ್ತೂರಿಗೆ ಆಗಮಿಸಿದ್ದರು.ಕಾರ್ಯಕರ್ತರು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಗೆ ಸ್ಥಳೀಯ ಬಿಜೆಪಿ ಮತ್ತು ಹಿಂದೂ ಸಂಘಟನೆಯ ಕಾರ್ಯಕರ್ತರೊಂದಿಗೆ ಆಗಮಿಸಿದ ಯತ್ನಾಳ್ ಯೋಗಕ್ಷೇಮ ವಿಚಾರಿಸಿದರು. ಈ ವೇಳೆ ಬಿಜೆಪಿ ನಾಯಕರು ಹಾಗು ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಬೆಂಬಲಿಗರ ನಡುವೆ ನೂಕಾಟ-ತಳ್ಳಾಟ ನಡೆದಿದೆ.

ಕಾರ್ಯಕರ್ತರು ಚಿಕಿತ್ಸೆ ಪಡೆಯುತ್ತಿದ್ದ ಕೊಠಡಿ ಒಳಗೆ ಪಾಟೀಲ್ ಅವರನ್ನು ಮಾತ್ರ ಬಿಟ್ಟ ಪುತ್ತಿಲ ಪರ ಬೆಂಬಲಿಗರು ಅವರ ಜೊತೆ ಬಂದ ಬಿಜೆಪಿ ಹಾಗು ಬಿಜೆಪಿ ಪರ ಇರುವ ಹಿಂದೂ ಸಂಘಟನೆಯ ಮುಖಂಡರನ್ನು ಬಾಗಿಲಿನಿಂದಲೇ ತಳ್ಳಿ ಹೊರದಬ್ಬಿದ್ದಾರೆ ಈ ವೀಡಿಯೋ ಬಾರಿ ವೈರಲ್ ಆಗಿದೆ.

Related posts

ಸುಳ್ಯ:ಕಾರು, ಬೈಕ್‌ ಮಧ್ಯೆ ಅಪಘಾತ;ಬೈಕ್ ಸವಾರನಿಗೆ ಗಾಯ,ಆಸ್ಪತ್ರೆಗೆ ದಾಖಲು

ಯಾವಾಗ ಪ್ರಕಟವಾಗಲಿದೆ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ? ಪ್ರಮುಖ ಮಾಹಿತಿ ಹಂಚಿಕೊಂಡ ಸಚಿವ ಬಿ.ಸಿ.‌ನಾಗೇಶ್

ಹಾನಗಲ್ ಉಪಚುನಾವಣೆ: ಟಿ. ಎಂ.ಶಹೀದ್ ವೀಕ್ಷಕರಾಗಿ ನೇಮಕ