ಕರಾವಳಿಬೆಂಗಳೂರು

ಬೆಂಗಳೂರು: ಹಿಜಾಬ್ ಧರಿಸಿ ಪಿಯುಸಿ ಪರೀಕ್ಷೆ ಬರೆಯಲು ಪಟ್ಟುಹಿಡಿದ ವಿದ್ಯಾರ್ಥಿನಿ! ಕೊನೆಗೂ ನಿರ್ಧಾರ ಬದಲಿಸಲು ಕಾರಣವೇನು?

ನ್ಯೂಸ್ ನಾಟೌಟ್: ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿದ್ದು, ಹಿಜಾಬ್ ಧರಿಸಿ ಪರೀಕ್ಷಾ ಕೇಂದ್ರದೊಳಗೆ ಹೋಗುವಂತಿಲ್ಲ ಎಂದು ಕೋರ್ಟ್ ನಿರ್ದೇಶನವನ್ನು ಆಧರಿಸಿ ಕಠಿಣ ನಿಯಮವನ್ನು ರಾಜ್ಯ ಸರ್ಕಾರ ಆದೇಶಿಸಿತ್ತು. ಆದರೂ ಬೆಂಗಳೂರು ನಗರದ ಮಲ್ಲೇಶ್ವರಂನ ಕಾಲೇಜುವೊಂದರಲ್ಲಿ ವಿದ್ಯಾರ್ಥಿನಿಯೊಬ್ಬರು ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಹಾಜರಾದದ್ದು ವಿವಾದಕ್ಕೆ ಕಾರಣವಾಗಿತ್ತು.

ಇದನ್ನು ಗಮನಿಸಿದ ಕಾಲೇಜು ಪ್ರಾಂಶುಪಾಲರು ಹಿಜಾಬ್ ತೆಗೆಯುವಂತೆ ವಿದ್ಯಾರ್ಥಿನಿಗೆ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ. ಆದರೆ ಪರೀಕ್ಷೆ ಶುರುವಾಗಲು ಕೆಲವೇ ಸಮಯವಿದ್ದರೂ ಆ ವಿದ್ಯಾರ್ಥಿನಿ ಹಿಜಾಬ್ ತೆಗೆಯದೇ ಹಾಗೇ ಕುಳಿತ್ತಿದ್ದಳು.

ಕಾಲೇಜು ಆಡಳಿತ ಮಂಡಳಿಯು ಆಕೆಗೆ ಮನವರಿಕೆ ಮಾಡಲು ಪ್ರಯತ್ನಿಸಿದೆ, ಕೆಲವು ಸಮಯಗಳ ನಂತರ ಸರ್ಕಾರದ ನಿಯಮದ ಅನ್ವಯ ಕೊನೆಗೂವಿದ್ಯಾರ್ಥಿನಿ ಹಿಜಾಬ್ ತೆಗೆದು ಪರೀಕ್ಷೆಗೆ ಹಾಜರಾಗಿದ್ದಾಳೆ.

Related posts

ಸುಳ್ಯ:ವಿದ್ಯಾರ್ಥಿನಿಯರು ಹೊಳೆಯಲ್ಲಿ ನಾಪತ್ತೆ ಪ್ರಕರಣ,ಇಬ್ಬರ ಮೃತದೇಹವೂ ಪತ್ತೆ

ಸುಳ್ಯ: ಸಂಭ್ರಮದ ಗಣೇಶೋತ್ಸವಕ್ಕೆ ದಿನಗಣನೆ, ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ

ಕಾಸರಗೋಡು : ವಿದ್ಯಾರ್ಥಿನಿಯ ನಿಗೂಢ ಸಾವು