ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ರಾತ್ರಿಯಿಂದಲೇ ವಾರಾಂತ್ಯ ಕಫ್ಯೂ ಜಾರಿ

613
Spread the love

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರೋನ ವೈರಸ್ ಸಂಬಂಧಿತ ವಾರಾಂತ್ಯ ಕರ್ಫ್ಯೂ ಆಗಸ್ಟ್ 27 ಶುಕ್ರವಾರ ರಾತ್ರಿ 9 ರಿಂದ ಆರಂಭವಾಗಲಿದೆ. ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಅಗತ್ಯ ವಸ್ತುಗಳ ಅಂಗಡಿಗಳು, ಹಣ್ಣು – ತರಕಾರಿ, ಮೀನು, ಮಾಂಸ ಮತ್ತು ಬೀದಿ ವ್ಯಾಪಾರಿಗಳ ಅಂಗಡಿಗಳು ಬೆಳಗ್ಗೆ 5 ರಿಂದ ಮಧ್ಯಾಹ್ನ 2 ರವರೆಗೆ ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ. ಮದ್ಯದ ಅಂಗಡಿಗಳು ಬೆಳಿಗ್ಗೆ 5 ರಿಂದ ಮಧ್ಯಾಹ್ನ 2 ರವರೆಗೆ ಪಾರ್ಸೆಲ್ ಗಳನ್ನು ನೀಡಬಹುದು. ಹೋಟೆಲ್‌ಗಳು ಪಾರ್ಸೆಲ್ ಗಳನ್ನು ಮಾತ್ರ ನೀಡಬಹುದು. ದಿನದ 24 ಗಂಟೆಗಳಲ್ಲಿ ಆಹಾರ ಪದಾರ್ಥಗಳ ಹೋಂ ಡೆಲಿವರಿ ಕೈಗೊಳ್ಳಬಹುದು. ಬಸ್ಸುಗಳು ಮತ್ತು ಇತರ ಸಾರ್ವಜನಿಕ ಸಾರಿಗೆಯನ್ನು ಮಧ್ಯಾಹ್ನದವರೆಗೆ ಅನುಮತಿಸಲಾಗಿದೆ.

See also  ಬೆಳ್ತಂಗಡಿ: ನಕಲ್ಸರೆಂದು ಸುಳ್ಳು ಮಾಹಿತಿ ಕೊಟ್ಟ ವ್ಯಕ್ತಿ..! ದೂರು ಆಧರಿಸಿ ಪೊಲೀಸರನ್ನೇ ಹುಡುಕಿದ ಪೊಲೀಸರು..! ಏನಿದು ನಕ್ಸಲ್ -ಪೊಲೀಸ್ ಆಟ..?
  Ad Widget   Ad Widget   Ad Widget   Ad Widget   Ad Widget   Ad Widget