ಕರಾವಳಿಬೆಂಗಳೂರುವೈರಲ್ ನ್ಯೂಸ್

ನಾಳೆ(ಸೆ.4) ಸರ್ಕಾರಿ ಸಾರಿಗೆ ನೌಕರರಿಂದ ಪ್ರತಿಭಟನೆ..! ಬಸ್​ ಸೇವೆ ಇರಲಿದೆಯಾ..?

ನ್ಯೂಸ್‌ ನಾಟೌಟ್‌: ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ (KSRTC) ಕಾರ್ಯನಿರ್ವಹಿಸುತ್ತಿರುವ ನೌಕರರು, ಇದೀಗ ಸರ್ಕಾರದ ವಿರುದ್ಧ ಮತ್ತೆ ಸಮರ ಸಾರಲು ಸಿದ್ಧರಾಗಿದ್ದಾರೆ. ಈ ಹಿನ್ನೆಲೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸಾರಿಗೆ ನೌಕರರು ನಾಳೆ (ಸೆ. 04) ರಂದು ಪ್ರತಿಭಟನೆ ಮಾಡುವುದಾಗಿ ಕರ್ನಾಟಕ ರಾಜ್ಯ ಸಾರಿಗೆ ಮಜ್ದೂರ್ ಸಂಘ ಬೆಂಗಳೂರಿನಲ್ಲಿ ಕರೆ ನೀಡಿದೆ.

ಸಾರಿಗೆ ನೌಕರರಿಗೆ 38 ತಿಂಗಳ ವೇತನ ನೀಡಲು ಬಾಕಿ ಇರುವ ಕಾರಣ ಇದನ್ನು ಖಂಡಿಸಿ ನಾಳೆ ಫ್ರೀಡಂಪಾರ್ಕ್ ನಲ್ಲಿ ಸಾರಿಗೆ ನೌಕರರಿಂದ ಧರಣಿ ಸತ್ಯಾಗ್ರಹ ನಡೆಸುವುದಾಗಿ ಕರ್ನಾಟಕ ರಾಜ್ಯ ಸಾರಿಗೆ ಮಜ್ದೂರ್ ಸಂಘ ತಿಳಿಸಿದೆ. ಇನ್ನು ಈ ಧರಣಿ ಸತ್ಯಾಗ್ರಹ ಬೆಳಿಗ್ಗೆ 11 ಗಂಟೆಗೆ ಶುರುವಾಗಲಿದೆ.

ಈ ಹಿನ್ನೆಲೆ ಸರ್ಕಾರಿ ಬಸ್​ ಸೌಲಭ್ಯ ಇರಲಿದೆಯೇ? ಇಲ್ಲವೇ? ಎಂಬ ಬಗ್ಗೆ ಇನ್ನೂ ಮಾಹಿತಿ ನೀಡಿಲ್ಲ. 38 ತಿಂಗಳ ವೇತನ ಬಾಕಿ ಹಣ ನೀಡಬೇಕು, ಸರ್ಕಾರಿ ನೌಕರರಿಗೆ ನೀಡುವ ವೇತನಕ್ಕೆ ಸರಿಸಮಾನ ವೇತನ ನೀಡಬೇಕು, ಖಾಸಗೀಕರಣ ಭ್ರಷ್ಟಾಚಾರ ಕಾರ್ಮಿಕರ ಕಿರುಕುಳ ನಿಲ್ಲಬೇಕು, ನೌಕರರಿಗೆ ನಗದು ರಹಿತ ವೈದ್ಯಕೀಯ ಸೌಲಭ್ಯ ನೀಡಬೇಕು, ನಮ್ಮ ಹಕ್ಕಿನ ರಜೆ ನೀಡಬೇಕು, ಉತ್ತಮ ಕ್ಯಾಂಟೀನ್ ವ್ಯವಸ್ಥೆ ಒದಗಿಸಬೇಕು ಎಂಬ ಹಲವು ಬೇಡಿಕೆಗಳನ್ನಿಟ್ಟು ಪ್ರತಿಭಟನೆಗೆ ಕರೆ ನೀಡಲಾಗಿದೆ.

Click

https://newsnotout.com/2024/09/siddaramayya-vice-opponent-leader-kannada-news-aravinda-bellad/
https://newsnotout.com/2024/09/cow-transfer-kannada-news-puc-student-noomore-by-fire/
https://newsnotout.com/2024/09/helicopter-emergency-landing-in-sea-ship-and-airplane/
https://newsnotout.com/2024/09/devi-chamundeshwari-kannada-news-k-news-siddaramayya/

Related posts

ದುರ್ಗಾದೇವಿ ಮೂರ್ತಿ ವಿರ್ಸಜನೆ ವೇಳೆ ಕೋಮು ಸಂಘರ್ಷ..! ನವರಾತ್ರಿ ಸಂಭ್ರಮದ ವೇಳೆ ಓರ್ವ ಸಾವು, ಲಾಠಿ ಚಾರ್ಜ್, 30 ಮಂದಿ ಬಂಧನ..!

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿದ ಕಾರು ಧರೆಗೆ ಡಿಕ್ಕಿ, ಪುತ್ತೂರು ಮೂಲದ ವಿದ್ಯಾರ್ಥಿನಿ ಧಾರುಣ ಸಾವು !

ಅಜ್ಜಾವರ: ಬಾಲಕ ನಾಪತ್ತೆ ಪ್ರಕರಣ ಸುಖಾಂತ್ಯ, ತಡರಾತ್ರಿ ಬಾಲಕ ಪತ್ತೆಯಾಗಿದ್ದೆಲ್ಲಿ..?