ಕರಾವಳಿಸುಳ್ಯ

ಭರ್ಜರಿ ಪ್ರೊ ಕಬಡ್ಡಿ ಮಾದರಿ ಕೂಟಕ್ಕೆ ಸಾಕ್ಷಿಯಾಗಲಿದೆ ಸುಳ್ಯ ..! ಚಪ್ಪರ ಮುಹೂರ್ತಕ್ಕೆ ಅದ್ಧೂರಿ ಚಾಲನೆ

ನ್ಯೂಸ್ ನಾಟೌಟ್: ಸುಳ್ಯದ ಕಬಡ್ಡಿ ಪ್ರಿಯರಿಗೆ ಮಸ್ತ್ ಮನೋರಂಜನೆ ಸಿಗುವ ಸಮಯ ಹತ್ತಿರ ಬರುತ್ತಿದೆ. ಪ್ರೊ ಕಬಡ್ಡಿ ಮಾದರಿಯಲ್ಲಿ ಭರ್ಜರಿ ಕಬಡ್ಡಿ ಕೂಟದ ಆಯೋಜನೆಗೆ ಕ್ಷಣಗಣನೆ ಶುರುವಾಗಿದೆ.

ಸುಳ್ಯ ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ಪ್ರೋ ಮಾದರಿಯ ಕಬಡ್ಡಿ ಕೂಟಕ್ಕೆ ಶುಕ್ರವಾರ ಚಪ್ಪರ ಮುಹೂರ್ತ ನಡೆಯಿತು. ನ. 17,18,19 ರಂದು ಮೂರು ದಿನಗಳ ಕಾಲ ನಡೆಯಲಿರುವ ಪುರುಷರ ಮತ್ತು ಮಹಿಳೆಯರ ವಿಭಾಗದ ಪ್ರೋ ಮಾದರಿಯ ಕೂಟವನ್ನು ವೀಕ್ಷಿಸುವುದಕ್ಕೆ ಸಾವಿರಾರು ಮಂದಿ ಆಗಮಿಸುವ ನಿರೀಕ್ಷೆ ಇದೆ.

ಕೂಟವನ್ನು ಪ್ರಭು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಚಪ್ಪರ ಮೂಹೂರ್ತ ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ಎಸ್.ಪಿ ಲೋಕನಾಥ್ ದೀಪ ಪ್ರಜ್ವಲಿಸಿದರು.ಗುರು ಶಾಮಿಯಾನ ಮಾಲಕ ಜಿ.ಜಿ.ನಾಯಕ್ ತೆಂಗಿನಕಾಯಿ ಒಡೆಯುವ ಮೂಲಕ ಚಪ್ಪರದ ಕೆಲಸಕ್ಕೆ ಚಾಲನೆ ನೀಡಿದರು.

ಕಬಡ್ಡಿ ಕೂಟದ ಸಂಘಟನಾ ಸಮಿತಿ ಅಧ್ಯಕ್ಷ ಭಾರತ್ ಶಾಮಿಯಾನ ಮಾಲಕ ಸಂಶುದ್ದೀನ್, ಸಂಘದ ಅಧ್ಯಕ್ಷ ಶಿವಪ್ರಕಾಶ್ ಸುಳ್ಯ, ಮಾಜಿ ಅಧ್ಯಕ್ಷ ಗಿರಿಧರ, ಪದಾಧಿಕಾರಿಗಳಾದ ರಾಜೇಶ್ ಸುಬ್ರಹ್ಮಣ್ಯ, ಜಿ.ಎ.ಮಹಮ್ಮದ್, ಹರೀಶ್ ರೈ ಉಬರಡ್ಕ, ಗುರುದತ್ ನಾಯಕ್, ವೆಂಕಟ್ರಮಣ ಅರಂತೋಡು, ಹಮೀದ್ ಜನತಾ, ಸುನಿಲ್ ಐವರ್ನಾಡು, ರಜಾಕ್ ಜಿ ನಾರಾಯಣ ಮತ್ತಿತರರು ಉಪಸ್ಥಿತರಿದ್ದರು.

Related posts

ಮಗನನ್ನೇ ಅಪಹರಿಸಿ ಪೊಲೀಸರ ಮುಂದೆ ಅಪ್ಪನ ಕಣ್ಣೀರ ಹೈಡ್ರಾಮಾ..!

ಪ್ರೇಮ ವಿವಾಹವಾಗಿದ್ದ ಮನೆ ಮಗಳನ್ನು ಹುಡುಗನ ಮನೆಗೆ ನುಗ್ಗಿ ಅಪಹರಿಸಿದ ಗ್ಯಾಂಗ್! ಏನಿದು ಕೇರಳ ಕರ್ನಾಟಕ ನಡುವಿನ ಪ್ರೇಮ ದಂಗಲ್!

ಬಿಜೆಪಿ ಸರಕಾರದವ್ರು ನನ್ನ ಗನ್ ಮ್ಯಾನ್ ಕಸ್ಕೊಂಡ್ರು..!