ಉಪ್ಪಿನಂಗಡಿ

ಉಪ್ಪಿನಂಗಡಿ: ಗುಂಡ್ಯದಲ್ಲಿ ಸರಣಿ ಅಪಘಾತ, ಇಪ್ಪತ್ತಕ್ಕೂ ಅಧಿಕ ಮಂದಿಗೆ ಗಾಯ

ನ್ಯೂಸ್‌ ನಾಟೌಟ್‌: ಶನಿವಾರ (ನ.23) ಮುಂಜಾನೆ ಖಾಸಗಿ ಬಸ್, ಕೆಎಸ್ಸಾರ್ಟಿಸಿ ಬಸ್ ಹಾಗೂ ಕಾರಿನ ನಡುವೆ ಸರಣಿ ಅಪಘಾತ ಸಂಭವಿಸಿ ಹಲವು ವಾಹನಗಳು ಜಖಂಗೊಂಡ ಘಟನೆ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯ ಸಮೀಪದ ಅಡ್ಡಹೊಳೆ ಎಂಬಲ್ಲಿ ಸಂಭವಿಸಿದೆ.

ಅಪಘಾತದಲ್ಲಿ ಇಪ್ಪತ್ತಕ್ಕೂ ಅಧಿಕ ಮಂದಿಗೆ ಗಾಯಗೊಡಿದ್ದಾರೆ. ಗಾಯಾಳುಗಳಿಗೆ ನೆಲ್ಯಾಡಿ ಮತ್ತು ಕಡಬದ ಖಾಸಗಿ ಆಸ್ಪತ್ರೆಗಳಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಹಲವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿಗೆ ರವಾನಿಸಲಾಗಿದೆ.

ಕುಂದಾಪುರಕ್ಕೆ ಪ್ರವಾಸಕ್ಕೆಂದು ತೆರಳಿ ಹಿಂತಿರುಗುತ್ತಿದ್ದ ಬೆಂಗಳೂರು ಮೂಲದ ಕಾಲೇಜು ವಿದ್ಯಾರ್ಥಿಗಳು ಸಂಚರಿಸುತ್ತಿದ್ದ ಖಾಸಗಿ ಬಸ್‌ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಕೆಎಸ್ಸಾರ್ಟಿಸಿ ಬಸ್ ಗೆ ಡಿಕ್ಕಿ ಹೊಡೆದಿದೆ. ಇದೆ ವೇಳೆ ಹಿಂದಿನಿಂದ ಬರುತ್ತಿದ್ದ ಕಾರೊಂದು ಕೆಎಸ್ಸಾರ್ಟಿಸಿ ಬಸ್ ಗೆ ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದೆ. ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

Related posts

ಭಾರೀ ಮಳೆಗೆ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಮುಳುಗಡೆ..! ನದಿಗೆ ಇಳಿಯದಂತೆ ಭಕ್ತಾದಿಗಳಿಗೆ ಎಚ್ಚರಿಕೆ..!

ಅಯ್ಯೋ..ಬಿಸಿಲೇ..! ಬರಿದಾಗಿದೆ ನೇತ್ರಾವತಿಯ ಒಡಲು

ಉಪ್ಪಿನಂಗಡಿ: ನಡು ರಸ್ತೆಯಲ್ಲೇ ಎರಡು ಕಾರು ಪಾರ್ಕ್ ಮಾಡಿ ಸಂತೆಗೆ ಹೋದ ಅಣ್ತಮ್ಮ..!, ಅರ್ಧಗಂಟೆ ಕಾದು..ಕಾದು ಎರಡು KSRTC ಸಿಟಿ ಬಸ್ ನಲ್ಲಿದ್ದ ಜನ ಸುಸ್ತೋ…ಸುಸ್ತು..!