ದೇಶ-ಪ್ರಪಂಚಬೆಂಗಳೂರುರಾಜಕೀಯ

ಇಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು, ತುಮಕೂರು ಭೇಟಿ

ನ್ಯೂಸ್‌ ನಾಟೌಟ್‌: ಇಂದು ಬೆಂಗಳೂರು ಮತ್ತು ತುಮಕೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದು, ಒಂದೇ ದಿನ ಆರು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

ಬೆಳಗ್ಗೆ 10.55ಕ್ಕೆ ಬೆಂಗಳೂರಿನ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ತಲುಪಲಿದ್ದು, ಅಲ್ಲಿಂದ ಹೆಲಿಕಾಪ್ಟರ್‌ ಮೂಲಕ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನಕ್ಕೆ ಭೇಟಿ ನೀಡಿ ಅಲ್ಲಿ ಆಯೋಜಿಸಿರುವ ಭಾರತ ಇಂಧನ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಬಳಿಕ ಅದೇ ವೇದಿಕೆಯಲ್ಲಿ ಶೇ. 20 ಎಥೆನಾಲ್‌ ಮಿಶ್ರಿತ ಪೆಟ್ರೋಲ್‌ ದೇಶದ 67 ಪೆಟ್ರೋಲ್‌ ಬಂಕ್‌ಗಳಲ್ಲಿ ವಿತರಣೆಯನ್ನು ಉದ್ಘಾಟಿಸಲಿದ್ದಾರೆ. ನಂತರ ಇಂಡಿಯನ್‌ ಆಯಿಲ್‌ ಅನಿಲ ವಿತರಕರಿಗೆ ಏಕಬಳಕೆಯ ಪ್ಲಾಸ್ಟಿಕ್‌ನ ಸಮವಸ್ತ್ರ ವಿತರಿಸಲಿದ್ದಾರೆ.

ಅನಂತರ ತುಮಕೂರಿಗೆ ತೆರಳಿ ತುಮಕೂರಿನ ಗುಬ್ಬಿಯಲ್ಲಿ ದೇಶದ ಅತಿ ದೊಡ್ಡ ಹೆಲಿಕಾಪ್ಟರ್ ತಯಾರಿಕಾ ಘಟಕ ಉದ್ಘಾಟಿಸಲಿದ್ದಾರೆ. ಬಳಿಕ ತುಮಕೂರಿನಲ್ಲಿ ನಿರ್ಮಾಣವಾಗುವ 8484 ಎಕರೆ ಕೈಗಾರಿಕಾ ಟೌನ್‌ಶಿಪ್‌ಗೆ ಶಂಕುಸ್ಥಾಪನೆ, ತಿಪಟೂರು, ಚಿಕ್ಕನಾಯಕನಹಳ್ಳಿ 545 ಕೋಟಿ ರೂಪಾಯಿಯ ಕುಡಿಯುವ ನೀರಿನ ಯೋಜನೆಗೆ ಶಂಕುಸ್ಥಾಪನೆ ಮಾಡಲಿದ್ದಾರೆ.

ನಂತರ ತುಮಕೂರಿನಿಂದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಲಿಕಾಪ್ಟರ್‌ ಮೂಲಕ ಆಗಮಿಸಿ ಅಲ್ಲಿಂದ ಸಾಯಂಕಾಲ 5.30ಕ್ಕೆ ದೆಹಲಿಗೆ ಹಿಂತಿರುಗಲಿದ್ದಾರೆ.

Related posts

ಕುತೂಹಲ ಮೂಡಿಸಿದ ಪಿಎಂ ಮೋದಿ-ಟ್ರಂಪ್ ಫೋನ್ ಮಾತುಕತೆ..! ಈ ಬಗ್ಗೆ ಟ್ರಂಪ್ ಹೇಳಿದ್ದೇನು..?

ಸುಳ್ಯ: ದಿ.ನವೀನ್ ರೈ ಮೇನಾಲ ಮತ್ತು ದಿ.ಸುಧೀರ್ ರೈ‌ ಮೇನಾಲರ ಮನೆಗೆ ಸಂಸದ ನಳಿನ್ ಕಟೀಲ್ ಭೇಟಿ! ರಾಜಕೀಯ ಮುಖಂಡರ ಭಾವಚಿತ್ರಕ್ಕೆ ಪುಷ್ಪನಮನ

ದೇಶಾದ್ಯಂತ ವೇಗವಾಗಿ ಹಬ್ಬುತ್ತಿದೆ ಮಂಗನ ಕಾಯಿಲೆ….! ರೋಗ ಲಕ್ಷಣವಿದ್ದರೆ ತಕ್ಷಣ ವೈದ್ಯರನ್ನ ಸಂಪರ್ಕಿಸಿ