ದೇಶ-ವಿದೇಶರಾಜಕೀಯ

‘ಪತ್ರಕರ್ತರು ಒಂದು ರೀತಿಯಲ್ಲಿ ಬಿಜೆಪಿ ಗುಲಾಮರು’ ಎಂದ ರಾಹುಲ್ ಗಾಂಧಿ..! ಈ ಬಗ್ಗೆ ಮುಂಬೈ ಪ್ರೆಸ್‌ ಕ್ಲಬ್‌ ಹೇಳಿದ್ದೇನು..?

ನ್ಯೂಸ್ ನಾಟೌಟ್ : ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಯ ಪ್ರಚಾರ ಸಮಾವೇಶವೊಂದರಲ್ಲಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸುವಾಗ ‘ಪತ್ರಕರ್ತರು ಒಂದು ರೀತಿಯಲ್ಲಿ ಬಿಜೆಪಿ ಗುಲಾಮರು’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ರಾಹುಲ್‌ ಗಾಂಧಿಯವರ ಹೇಳಿಕೆಯನ್ನು ಖಂಡಿಸಿರುವ ಮುಂಬೈ ಪ್ರೆಸ್‌ ಕ್ಲಬ್‌, ‘ಇಂತಹ ಮಾತು ಪತ್ರಕರ್ತರ ಸಮುದಾಯಕ್ಕೆ ಘಾಸಿ ಉಂಟುಮಾಡುತ್ತದೆ. ರಾಹುಲ್‌ ಯಾವತ್ತಾದರೂ ಭಾರತದಲ್ಲಿ ಪತ್ರಕರ್ತರು ಎದುರಿಸುತ್ತಿರುವ ಸವಾಲುಗಳು, ಅವರಿಗಿರುವ ಕಷ್ಟಗಳಿಗೆ ಕಾರಣಗಳು ಹಾಗೂ ಒಟ್ಟಾರೆ ಪತ್ರಿಕೋದ್ಯಮದ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರಾ’ ಎಂದು ಪ್ರಶ್ನಿಸಿದೆ.

ಶನಿವಾರ ಅಮರಾವತಿಯಲ್ಲಿ ಭಾಷಣ ಮಾಡಿದ್ದ ರಾಹುಲ್‌ ಗಾಂಧಿ, ‘ನಾನು ಮೀಸಲಾತಿ ಮಿತಿ ಹೆಚ್ಚಿಸಬೇಕು ಎಂದು ಹೇಳಿದರೆ ಪ್ರಧಾನಿ ಮೋದಿ ‘ರಾಹುಲ್‌ ಗಾಂಧಿ ಮೀಸಲಾತಿಗೆ ವಿರುದ್ಧವಾಗಿದ್ದಾರೆ’ ಎಂದು ಆರೋಪಿಸುತ್ತಾರೆ. ಅದನ್ನು ಮಾಧ್ಯಮಗಳೂ ಪ್ರಶ್ನಿಸದೆ ವರದಿ ಮಾಡುತ್ತವೆ. ಪತ್ರಕರ್ತರು ಬಿಜೆಪಿಗೆ ಸೇರಿದವರೇ ಆಗಿದ್ದಾರೆ. ಅವರು ನನ್ನನ್ನು ನೋಡಿ ನಕ್ಕಾಗ ನನಗೆ ‘ಹೌದೌದು, ನಾವು ಬಿಜೆಪಿಗೆ ಸೇರಿದವರು’ ಎಂದು ಹೇಳಿದಂತೆ ಅನ್ನಿಸುತ್ತದೆ. ಇದರಲ್ಲಿ ಅವರ ತಪ್ಪಿಲ್ಲ. ಅವರಿಗೆ ಕೆಲಸ ಬೇಕು, ಸಂಬಳ ಬೇಕು, ಮಕ್ಕಳನ್ನು ಸಾಕಬೇಕು, ಶಿಕ್ಷಣ ಕೊಡಿಸಬೇಕು, ಊಟ ಮಾಡಬೇಕು. ಅವರು ತಮ್ಮ ಮಾಲಿಕರ ವಿರುದ್ಧ ಕೆಲಸ ಮಾಡಲು ಸಾಧ್ಯವಿಲ್ಲ. ಒಂದು ರೀತಿಯಲ್ಲಿ ಅವರು ಗುಲಾಮರಿದ್ದಂತೆ’ ಎಂದು ಹೇಳಿದ್ದಾರೆ. ಈ ವರದಿಗಳನ್ನು ಉಲ್ಲೇಖಿಸಿ ಮುಂಬೈ ಪ್ರೆಸ್‌ ಕ್ಲಬ್‌ ಖಂಡನೆ ವ್ಯಕ್ತಪಡಿಸಿದೆ.

Click

https://newsnotout.com/2024/11/kannada-news-supreme-court-apeal-viral-news-d-treatment/
https://newsnotout.com/2024/11/kannada-news-cinema-director-kannada-news-actor-arrested-serial/
https://newsnotout.com/2024/11/tirupati-tirumala-hindu-temple-kannada-news-1000-above-workers-other-relegious/
https://newsnotout.com/2024/11/75-year-old-lady-r-by-begging-man-kannada-news-d-viral-news-d/
https://newsnotout.com/2024/11/elon-musk-kannada-news-space-x-kannada-news-isro-issue-d/

Related posts

ಸಿದ್ರಾಮುಲ್ಲಾ ಖಾನ್ ಎಂದದ್ದಕ್ಕೆ ಸುಮೊಟೋ ಕೇಸ್ ದಾಖಲು..! ಪಂಜಾಬ್ ರೈತರು ಟೆರೆರಿಸ್ಟ್ ಗಳು ಎಂದ ಅನಂತ್ ಕುಮಾರ್ ಹೆಗಡೆ

ತಡವಾಗಿ ಬಂದಿದ್ದಕ್ಕೆ ಬಾಯಿಗೆ ಬಂದಂತೆ ಬೈದು, ದೂರು ನೀಡಿದ ಮಹಿಳೆ..! ಆತ್ಮಹತ್ಯೆಗೆ ಶರಣಾದ ಡೆಲಿವರಿ ಬಾಯ್‌ ಯ ‘ಡೆತ್ ನೋಟ್’ ನಲ್ಲೇನಿತ್ತು..?

ʻಹಮಾರೆ ಬಾರಾಹ್ʼ ಸಿನಿಮಾ ಬಿಡುಗಡೆಗೆ ನಿಷೇಧ ಹೇರಿದ ಕರ್ನಾಟಕ ಸರ್ಕಾರ..! ಸರ್ಕಾರದ ಆದೇಶ ಪ್ರತಿಯಲ್ಲೇನಿದೆ..?