ಕರಾವಳಿ

ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ಆರೋಪಿಗಳ ಬಲೆಗೆ NIA ಬಿಗ್ ಸ್ಕೆಚ್ ..! ಮೂವರು ಹಂತಕರ ಮಾಹಿತಿ ಕೊಟ್ರೆ ಲಕ್ಷ..ಲಕ್ಷ ಬಹುಮಾನ..! ಯಾರಿವರು ಮೂವರು ಆರೋಪಿಗಳು..?

ನ್ಯೂಸ್ ನಾಟೌಟ್: ದುಷ್ಕರ್ಮಿಗಳ ಸಂಚಿಗೆ ಬಲಿಯಾದ ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರ್ ಹತ್ಯೆ ಆರೋಪಿಗಳ ಹುಡುಕಾಟದಲ್ಲಿರುವ ರಾಷ್ಟ್ರೀಯ ತನಿಖಾ ದಳ (NIA) ಇದೀಗ ಮೂವರು ಆರೋಪಿಗಳ ಹೆಸರನ್ನು ಘೋಷಿಸಿ ಮಾಹಿತಿ ನೀಡುವಂತೆ ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ.

NIA ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಿ ತಲೆಮರೆಸಿಕೊಂಡಿರುವ ಆರೋಪಿಗಳ ಸುಳಿವು ನೀಡಿದ್ರೆ ಲಕ್ಷ ..ಲಕ್ಷ ರೂ. ಬಹುಮಾನ ಘೋಷಿಸುವುದಾಗಿ ಪ್ರಕಟಿಸಲಾಗಿದೆ.

ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದಲ್ಲಿ ಈಗಾಗಲೇ ಪಾಪ್ಯುಲರ್ ಪ್ರಿಂಟ್ ಆಫ್ ಇಂಡಿಯಾ (ಪಿಎಫ್ ಐ)ನ ಹಲವಾರು ಮಂದಿಯನ್ನು ಎನ್‌ಐಎ ಬಂಧಿಸಿದೆ. ಇನ್ನೂ ಕೆಲವರು ತಲೆಮರೆಸಿಕೊಂಡಿದ್ದಾರೆ. ಮೂಲಗಳ ಪ್ರಕಾರ ಕೆಲವರು ವಿದೇಶಗಳಲ್ಲಿ ತಲೆಮರೆಸಿಕೊಂಡಿದ್ದಾರೆ. ಇನ್ನೂ ಕೆಲವರು ದೇಶದ ಒಳಗೆಯೇ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಪೈಕಿ ಎನ್ಐಎ ಈಗ ಹೊಸದಾಗಿ ಹೊರಡಿಸಿರುವ ವಾಂಟೆಡ್ ಪ್ರಕಟಣೆಯಲ್ಲಿ ಕೊಡಗಿನ ಸೋಮವಾರಪೇಟೆಯ ಅಬ್ದುಲ್ ನಾಸಿರ್ (೪೧ ವರ್ಷ), ಬೆಳ್ತಂಗಡಿ ಪಡಂಗಡಿಯ ನೌಷಾದ್ (೩೨ ವರ್ಷ) ಹಾಗೂ ಸೋಮವಾರ ಪೇಟೆಯ ಅಬ್ದುಲ್ ರಹಮಾನ್ (೩೬ ವರ್ಷ) ಹೆಸರು ಇದೆ. ಈ ಮೂವರ ಮಾಹಿತಿ ಕೊಟ್ಟವರಿಗೆ ಕ್ರಮವಾಗಿ ಎರಡು ಲಕ್ಷ ರೂ. ಘೋಷಣೆ ಮಾಡಲಾಗಿದೆ.

Related posts

ಸುಳ್ಯ:ಬರೆ ಕುಸಿದು ಮೂವರು ಕಾರ್ಮಿಕರು ದುರಂತ ಅಂತ್ಯ ಕಂಡಿದ್ದ ಸ್ಥಳದಲ್ಲಿ ಮತ್ತೆ ಕಾಮಗಾರಿ ಶುರು,ಜಿಲ್ಲಾಧಿಕಾರಿಗಳ ಆದೇಶವಿದ್ದರೂ ಡೋಂಟ್ ಕೇರ್..!ಏನಿದು ಘಟನೆ?

ಜಸ್ಟ್ ಮಿಸ್: ಮನೆ ಮೇಲೆ ಬೀಳುತ್ತಿದ್ದ ಟಿಪ್ಪರ್‌ ತೆರವು

ಚಂದನ ಸಾಹಿತ್ಯ ವೇದಿಕೆಯ ವತಿಯಿಂದ ದಸರಾ ಕವಿಗೋಷ್ಠಿ , ಗಾಂಧಿ ನಡಿಗೆ ಮತ್ತು 2 ಕೃತಿಗಳ ಬಿಡುಗಡೆ