ಕರಾವಳಿಸುಳ್ಯ

ಪ್ರವೀಣ್ ನೆಟ್ಟಾರು ಪ್ರಕರಣ:ವಿದೇಶದಲ್ಲಿ ಅಡಗಿರುವ ಆರೋಪಿಗಳ ಬಂಧನಕ್ಕೆ ತೀವ್ರ ಕಾರ್ಯಾಚರಣೆ,ಫೀಲ್ಡ್ ಗಿಳಿದ ‘ರಾ'(RAW) ಏಜೆನ್ಸಿ

ನ್ಯೂಸ್ ನಾಟೌಟ್ : ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಪ್ರಮುಖ ಆರೋಪಿಗಳಿಬ್ಬರು ಸೌದಿ ಅರೆಬಿಯಾದಲ್ಲಿ ಪತ್ತೆ ಅನ್ನುವ ಸುದ್ದಿ ಹರಿದಾಡಿತ್ತು. ಮೊಹಮ್ಮದ್ ಶರೀಫ್ ಮತ್ತು ಕೆ.ಎ.ಮಸೂದ್ ಸೌದಿ ಅರೇಬಿಯಾಕ್ಕೆ ಪರಾರಿಯಾಗಿರುವ ಬಗ್ಗೆ, ಎನ್.ಐ.ಎ ಮಾಹಿತಿ ಕಲೆ ಹಾಕಿತ್ತು. ಅದರಂತೆ ಕೇಂದ್ರ ‘ರಾ’ ಏಜೆನ್ಸಿ ಜತೆ ಎನ್.ಐ.ಎ ನಿರಂತರ ಸಂಪರ್ಕದಲ್ಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆರೋಪಿಗಳನ್ನು ಭಾರತಕ್ಕೆ ಕರೆತರಲು ದಾಖಲೆಗಳನ್ನು ಸಿದ್ಧಪಡಿಸಿ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳುತ್ತಿದೆ ಎನ್ನಲಾಗಿದೆ.

ಆರು ಜನ ಆರೋಪಿಗಳಿಗಾಗಿ ಶೋಧ

ಕಳೆದ 6 ತಿಂಗಳ ಹಿಂದೆ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಹಲವರನ್ನು ವಶಕ್ಕೆ ಪಡೆದು ಬಂಧಿಸಲಾಗಿತ್ತು. ಈ ಪ್ರಕರಣವನ್ನು ರಾಜ್ಯ ಸರಕಾರ ಎನ್.ಐ.ಎ ಸಂಸ್ಥೆಗೆ ತನಿಖೆಗೆ ಒಪ್ಪಿಸಿತ್ತು. ಎನ್.ಐ.ಎ ಬೆಂಗಳೂರು ಇನ್ಸ್ಪೆಕ್ಟರ್ ಷಣ್ಮುಗಂ ನೇತೃತ್ವದ ತಂಡ ತನಿಖೆ ನಡೆಸಿ 14 ಜನರನ್ನು ಬಂಧಿಸಿತ್ತು. ಬೆಂಗಳೂರು ಎನ್.ಐ.ಎ ಕೋರ್ಟ್ ಗೆ 2023 ರ ಜ.20 ರಂದು 20 ಮಂದಿ ಆರೋಪಿಗಳ ವಿರುದ್ಧ 240 ಸಾಕ್ಷಿ ಸೇರಿದಂತೆ 1500 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದೆ. ಪರಾರಿಯಾಗಿರುವ ಉಳಿದ ಆರು ಜನ ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆದಿದ್ದು, ಇಬ್ಬರು ಆರೋಪಿಗಳು ಪತ್ತೆಯಾಗಿದ್ದಾರೆ ಅನ್ನುವ ಮಾಹಿತಿ ಸಿಕ್ಕಿತ್ತು.

ಫೀಲ್ಡ್ ಗಿಳಿದ ‘ರಾ'(RAW) ಏಜೆನ್ಸಿ:

ಪ್ರಕರಣದಲ್ಲಿ ನಾಪತ್ತೆಯಾದ ನಾಲ್ಕು ಜನ ಆರೋಪಿಗಳು ಕೂಡ ಇಬ್ಬರು ಪ್ರಮುಖ ಆರೋಪಿಗಳಾದ ಮೊಹಮ್ಮದ್ ಶರೀಫ್ ಮತ್ತು ಕೆ.ಎ.ಮಸೂದ್ ಜತೆ ಇರುವ ಸಾಧ್ಯತೆ ಇದೆ ಎನ್ನುವ ಅನುಮಾನ ದಟ್ಟವಾಗಿ ಮೂಡಿದೆ. ಈ ಬಗ್ಗೆ ಎನ್ ಐ ಎ ಅಧಿಕಾರಿಗಳಿಗೆ ಶಂಕೆ ಇದ್ದು, ಇದಕ್ಕಾಗಿ ವಿಶೇಷ ಏಜೆನ್ಸಿಯೊಂದು ಫೀಲ್ಡ್ ಗಿಳಿದಿದೆ.ಎನ್.ಐ.ಎ ಮಾಹಿತಿ ಮೇರೆಗೆ ಐಬಿ(IB), ಇನ್ನರ್ ಪೋಲ್( INTER POLE) ಮೂಲಕ ‘ರಾ'(RAW) ಏಜೆನ್ಸಿ ಸ್ಕ್ಯಾನ್ ಮಾಡಿ ದಾಖಲೆಗಳೊಂದಿಗೆ ವಿದೇಶಕ್ಕೆ ತೆರಳಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಭಾರತಕ್ಕೆ ಕರೆತಂದು ಬೆಂಗಳೂರು ಎನ್.ಐ.ಎ ವಶಕ್ಕೆ ನೀಡಲು ಫೀಲ್ಡ್ ಗೆ ಇಳಿದಿದೆ ಎಂದು ಎನ್.ಐ.ಎ ಸಂಸ್ಥೆಯ ಉನ್ನತ ಮೂಲಗಳು ಮಾಹಿತಿ ನೀಡಿವೆ.

Related posts

ಸುಳ್ಯ: ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ಪೋಷಣ್ ಮಾಹ

ಲೋಕಸಭಾ ಚುನಾವಣೆ ಹೊತ್ತಲ್ಲೇ 7.25 ಕೋಟಿ ರೂ ಖೋಟಾ ನೋಟು ಪತ್ತೆ ಪ್ರಕರಣ:ಸುಳ್ಯದ ವ್ಯಕ್ತಿ ಸಹಿತ ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು!!

ಮಂಗಳೂರಿನಲ್ಲಿ ಕೋವಿಡ್-19​ ಸೋಂಕಿತ ದಿಢೀರ್ ಸಾವು..! ಆರೋಗ್ಯ ಸಚಿವ ಈ ಬಗ್ಗೆ ಹೇಳಿದ್ದೇನು? ಹೊಸ ವರ್ಷಕ್ಕೆ ಬರಲಿದೆಯಾ ಹೊಸ ರೂಲ್ಸ್?