Uncategorized

ಪ್ರವೀಣ್ ನೆಟ್ಟಾರ್‌ ಅಕ್ಷಯ ಚಿಕನ್ ಸೆಂಟರ್ ಪುನರಾರಂಭ

ನ್ಯೂಸ್ ನಾಟೌಟ್ : ಕೆಲವು ದಿನಗಳ ಹಿಂದೆ ದುಷ್ಕರ್ಮಿಗಳಿಂದ ಹತ್ಯೆಯಾದ ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರ್ ಅಕ್ಷಯ ಚಿಕನ್ ಸೆಂಟರ್ ಇದೀಗ ಬೆಳ್ಳಾರೆಯ ಹಿಂದೆ ಇದ್ದ ಜಾಗದಲ್ಲಿಯೇ ಪುನರಾರಂಭಗೊಂಡಿದೆ.

ಯತೀಶ್ ಮುರ್ಕೆತ್ತಿಯವರು ಕೋಳಿ ಅಂಗಡಿಯನ್ನು ನಿರ್ವಹಿಸಲಿದ್ದಾರೆ. ಈ ಬಗ್ಗೆ ನ್ಯೂಸ್ ನಾಟೌಟ್ ಗೆ ಮಾಹಿತಿ ನೀಡಿದ ಯತೀಶ್‌ ಅವರು, ಪ್ರವೀಣ್ ನೆಟ್ಟಾರ್ ಚಿಕನ್ ಅಂಗಡಿಯನ್ನು ಮತ್ತೆ ನಡೆಸಿಕೊಂಡು ಹೋಗುತ್ತಿದ್ದೇವೆ. ಅವರಿಲ್ಲದ ನೋವು ನಮ್ಮನ್ನು ಕಾಡುತ್ತಿದೆ ಎಂದು ತಿಳಿಸಿದರು. ಪ್ರವೀಣ್ ಹತ್ಯೆ ಬಳಿಕ ಈ ಕೋಳಿ ಮಾಂಸದ ಅಂಗಡಿಯನ್ನು ಮುಚ್ಚಲಾಗಿತ್ತು. ಆದರೆ ಪ್ರವೀಣ್ ಇಟ್ಟುಕೊಂಡಿದ್ದ ಕನಸನ್ನು ಮುಂದುವರಿಸಿಕೊಂಡು ಹೋಗುವುದಕ್ಕಾಗಿ ಚಿಕನ್ ಅಂಗಡಿಯನ್ನು ಪುನರಾರಂಭಿಸಲಾಗಿದೆ ಎಂದು ತಿಳಿದು ಬಂದಿದೆ. ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ಪ್ರವೀಣ್ ನೆಟ್ಟಾರ್ ಹತ್ಯೆಯ ಆರೋಪಿಗಳನ್ನು ಬಂಧಿಸಲಾಗಿದ್ದು ಎನ್ ಐಎ (ರಾಷ್ಟ್ರೀಯ ತನಿಖಾ ದಳ) ತನಿಖೆ ನಡೆಯುತ್ತಿದೆ. ಪ್ರವೀಣ್ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಲವಾರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.

Related posts

ಡಾ. ಟಿ. ಶ್ಯಾಮ್ ಭಟ್ ಗೆ ಒಲಿದ ರಾಜ್ಯ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷ ಪಟ್ಟ , ಇಲ್ಲಿದೆ ಸಂಪೂರ್ಣ ಮಾಹಿತಿ

ಹೊಸ ಹೆಲಿಕಾಪ್ಟರ್ ಅನ್ನೇ ಪೂಜೆಗೆಂದು ದೇವಸ್ಥಾನದ ಬಳಿ ಇಳಿಸಿದ ಉದ್ಯಮಿ..!

ನಾಳೆ ಕರೆ ನೀಡಿದ್ದ ಸಾರಿಗೆ ನೌಕರರ ಮುಷ್ಕರಕ್ಕೆ ಹೈಕೋರ್ಟ್ ನಿಂದ ತಡೆ! 3 ವಾರಗಳ ಕಾಲ ನಿರ್ಬಂಧ!