ರಾಜಕೀಯರಾಜ್ಯವಿಡಿಯೋವೈರಲ್ ನ್ಯೂಸ್

ಇನ್ನು ಕೆಲವೇ ಗಂಟೆಗಳಲ್ಲಿ ಶಾಸಕ ಪ್ರದೀಪ್ ಈಶ್ವರ್ ರಾಜಿನಾಮೆ..? ಇಲ್ಲಿದೆ ವಿಡಿಯೋ

ನ್ಯೂಸ್ ನಾಟೌಟ್: ಕರ್ನಾಟಕ ಲೋಕಸಭೆ ಚುನಾವಣೆಯ ಫಲಿತಾಂಶ ಬಹುತೇಕ ಕಡೆಗಳಲ್ಲಿ ನಿರ್ಧಾರವಾಗಿದ್ದು. ಉಡುಪಿ, ದಕ್ಷಿಣ ಕನ್ನಡ ಬಿಜೆಪಿ ತೆಕ್ಕೆಗೆ ಸೇರಿದೆ. ಈ ಮಧ್ಯೆ ಚಿಕ್ಕಬಳ್ಳಾಪುರದಲ್ಲಿ ಮಾಜಿ ಸಚಿವ ಡಾ. ಕೆ ಸುಧಾಕರ್ ಗೆದ್ದರೆ ತಾವು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ ಎಂದು ಪ್ರದೀಪ್ ಈಶ್ವರ್ ಮಾಧ್ಯಮಗಳ ಮುಂದೆ ಈ ಚಾಲೆಂಜ್ ಮಾಡಿದ್ದರು.

ಇದೀಗ ಚಿಕ್ಕಬಳ್ಳಾಪುರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಕೆ ಸುಧಾಕರ್ 8,19,588 ಮತಗಳನ್ನು ಪಡೆದು 1,62,099 ಮತಗಳ ಅಂತರದಿಂದ ಬೃಹತ್ ಗೆಲುವು ಸಾಧಿಸಿದ್ದಾರೆ. ಇನ್ನು ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ 6,57,489 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.

ಈ ಹಿಂದೆ ಮಾಧ್ಯಮಗಳ ಮುಂದೆ ಮಾತನಾಡಿದ್ದ ಕಾಂಗ್ರೆಸ್ ಶಾಸಕ ಚಿಕ್ಕಬಳ್ಳಾಪುರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಖಚಿತವಾಗಿ ಗೆಲ್ಲುತ್ತಾರೆ. ನಮ್ಮ ಅಭ್ಯರ್ಥಿಗಿಂತ ಡಾ. ಸುಧಾಕರ್ 1 ಮತ ಹೆಚ್ಚಿಗೆ ಪಡೆದರೆ ನಾನು ನನ್ನ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ ಎಂದು ಘಂಟಾ ಘೋಷವಾಗಿ ಹೇಳಿದ್ದರು. ಇದೀಗ ಮಾಜಿ ಸಂಸದ ಪ್ರತಾಪ್ ಸಿಂಹ ಪ್ರದೀಪ್ ಈಶ್ವರ್ ಮಾತನಾಡಿದ್ದ ವಿಡಿಯೋ ತುಣುಕನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು ಇನ್ನು ಕೆಲವೇ ಗಂಟೆಗಳಲ್ಲಿ ಶಾಸಕ ಪ್ರದೀಪ್ ಈಶ್ವರ್ ರಾಜಿನಾಮೆ ನೀಡಲಿದ್ದಾರೆ ಎಂದು ಟ್ವೀಟ್ ಮಾಡಿ ಟೀಕಿಸಿದ್ದಾರೆ.

Click 👇

https://newsnotout.com/2024/06/election-padmaraj-and-brijish-kannada-news
https://newsnotout.com/2024/06/loka-sabha-result-news-stars
https://newsnotout.com/2024/06/election-and-tv-court-issued-notice
https://newsnotout.com/2024/06/strong-room-key-kannada-news-vijayapura

Related posts

ಹೆಡ್​ ಕಾನ್ಸ್​ಟೇಬಲ್ ​ನಿಂದಲೇ ಇಲಾಖೆಯ ಗೌಪ್ಯ ಮಾಹಿತಿ ಸೋರಿಕೆ..! ಹಣ ಕೊಟ್ರೆ ಕೇಸ್ ಸಂಬಂಧಪಟ್ಟ ಮೊಬೈಲ್ ನಂಬರ್​, ಟವರ್ ಲೊಕೇಶನ್ ಎಲ್ಲ ಸಿಗುತ್ತೆ..!

ಚಪಾತಿ ಮಹಿಮೆ, ಲಟ್ಟಿಸುವಾಗ 500 ರೂ. ಹಾಕಿದ್ದ ಮಹಿಳೆ,ಬೇಯಿಸುವಾಗ ಕಾಣಿಸಿಕೊಂಡಿತ್ತು 2000ರ ನೋಟು!

‘ಬಡವರಿಗೆ ವಿಸ್ಕಿ, ಬಿಯರ್ ನೀಡ್ತೇನೆ’ ಎಂದು ಆಫರ್ ಕೊಟ್ಟ ಪಕ್ಷೇತರ ಅಭ್ಯರ್ಥಿ..! ಯಾರು ಆ ಅಭ್ಯರ್ಥಿ..?