ನ್ಯೂಸ್ ನಾಟೌಟ್: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇನಲ್ಲಿ ತಾಂತ್ರಿಕ ಕಾರಣದಿಂದಾಗಿ ವಿದ್ಯುತ್ ಕೈ ಕೊಟ್ಟಿದೆ. ಇದರಿಂದಾಗಿ ಏರ್ ಪೋರ್ಟ್ನಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನಗಳನ್ನು ಡೈವರ್ಟ್ ಮಾಡಲಾಗಿರುವ ಘಟನೆ ವರದಿಯಾಗಿದೆ. ಪವರ್ ಸಪ್ಲೇ ಸಮಸ್ಯೆಯಿಂದ ರನ್ ವೇನಲ್ಲಿ ಕತ್ತಲು ಆವರಿಸಿದೆ.
ಮುಂಬೈನಿಂದ ಆಗಮಿಸಿದ ವಿಮಾನ ಎಟಿಸಿ ಸೂಚನೆ ಹಿನ್ನೆಲೆ ಲ್ಯಾಂಡ್ ಆಗದೇ ಕೇರಳದ ಕಣ್ಣೂರಿಗೆ ವಾಪಾಸ್ ತೆರಳಿದೆ. ತಾಂತ್ರಿಕ ಸಮಸ್ಯೆ ಸರಿಪಡಿಸುವವರೆಗೆ ಮಂಗಳೂರಿಗೆ ಬರುವ ಮತ್ತು ಹೋಗುವ ಎಲ್ಲಾ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ವಿದ್ಯುತ್ ಪೂರೈಕೆ ಸಮಸ್ಯೆಯನ್ನು ಏರ್ಪೋರ್ಟ್ ಸಿಬ್ಬಂದಿ ಸರಿಪಡಿಸುತ್ತಿದ್ದು, ಬಹರೇನ್ಗೆ ತೆರಳಬೇಕಿದ್ದ ಏರ್ ಇಂಡಿಯಾ ಸಂಚಾರದಲ್ಲಿ ವಿಳಂಬವಾಗಿದೆ. ಜೊತೆಗೆ ಚೆನ್ನೈ, ಬೆಂಗಳೂರಿಂದ ಬರಬೇಕಿದ್ದ ವಿಮಾನಗಳ ಲ್ಯಾಂಡಿಂಗ್ ಕೂಡ ವಿಳಂಬವಾಗುತ್ತಿದೆ.