Uncategorized

ಉದ್ಯೋಗಾಕಾಂಕ್ಷಿಗಳಿಗೆ ಭಾರತೀಯ ಅಂಚೆ ಇಲಾಖೆಯಿಂದ ಗುಡ್ ನ್ಯೂಸ್

ಭಾರತೀಯ ಅಂಚೆ ಇಲಾಖೆಯು ಬಹಳಷ್ಟು ದಿನಗಳ ಬಳಿಕ ಭರ್ಜರಿ ನೇಮಕಕ್ಕೆ ಚಾಲನೆ ನೀಡಿದೆ. ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 38, 926 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಹುದ್ದೆಗಳ ವಿವರ, ಅರ್ಜಿ ಸಲ್ಲಿಸುವ ವಿಧಾನ, ವಿದ್ಯಾರ್ಹತೆ ಸೇರಿದಂತೆ ಅಂಚೆ ಇಲಾಖೆಯ ನೇಮಕದ ಕುರಿತು ಸಂಪೂರ್ಣ ವಿವರ ಇಲ್ಲಿದೆ.


ಹುದ್ದೆಯ ಹೆಸರು: ಗ್ರಾಮೀಣ ಡಾಕ್ ಸೇವಕ್


ಅರ್ಜಿ ಸಲ್ಲಿಸಲು ಆರಂಭ: ಮೇ 2, 2022


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜೂನ್ 6, 2022


ಅರ್ಜಿ ಶುಲ್ಕ: 100 ರೂ, ಮಹಿಳಾ, ಎಸ್ ಸಿ ಮತ್ತು ಎಸ್ ಟಿ ಅಭ್ಯರ್ಥಿಗಳು ಯಾವುದೇ ಶುಲ್ಕ ಪಾವತಿಸಬೇಕಿಲ್ಲ


ವಯೋಮಿತಿ: ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಮತ್ತು ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ಹೆಚ್ಚಿನ ಮಾಹಿತಿಗೆ ವೆಬ್ ಸೈಟ್ ನೋಡಿರಿ.

https://sapost.blogspot.com/2022/05/gds-online-engagement-solution-is-made.html

https://indiapostgdsonline.cept.gov.in/Homediv.aspx?cid=11


ಕರ್ನಾಟಕದಲ್ಲಿರುವ ಒಟ್ಟು ಹುದ್ದೆ: 2410

ಗಮನಿಸಿ: ದೇಶದ ಬೃಹತ್ ನೇಮಕಾತಿಯಾಗಿರುವ ಕಾರಣ ಲಕ್ಷ ಲಕ್ಷ ಅಭ್ಯರ್ಥಿಗಳು ಭೇಟಿ ನೀಡುವ ಕಾರಣ ಆನ್ ಲೈನ್ ಲಿಂಕ್ ಸರ್ವರ್ ತೊಂದರೆಗಳು ಇರಬಹುದು. ಆಗಾಗ ಈ ಲಿಂಕ್ ಗಳಿಗೆ ಭೇಟಿ ನೀಡಿ ವೆಬ್ ಸೈಟ್ ಸರಿಯಾಗಿ ಕಾರ್ಯ ನಿರ್ವಹಿಸುವಾಗ ಹೆಸರು ನೋಂದಾಯಿಸಿ.

Related posts

ಮೊದಲ ಸಂಪುಟ ಸಭೆಯಲ್ಲಿಯೇ ಮುಖ್ಯಮಂತ್ರಿ ಬೊಮ್ಮಾಯಿ ರಾಜ್ಯದ ಜನರಿಗೆ ಕೊಟ್ರು ಭರ್ಜರಿ ಗಿಫ್ಟ್

ಕಾರಿನ ಹಿಂಬದಿ ಪ್ರಯಾಣಿಕರಿಗೂ ಸೀಟ್‌ಬೆಲ್ಟ್ ಕಡ್ಡಾಯ ಶೀಘ್ರ

ಎಂ.ಎಸ್‌.ಧೋನಿಗೆ ಅಂಬರೀಷ್ ಎರಡು ಲಕ್ಷ ನೀಡಿದ್ದರು: ಸುಮಲತಾ ಅಂಬರೀಷ್ ಟ್ವಿಟ್ ವೈರಲ್