ಕ್ರೈಂದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಊಟದ ವಿಚಾರದಲ್ಲಿ ಜಗಳ, ಅರ್ಧಕ್ಕೆ ನಿಂತ ಮದುವೆ..! ಪೊಲೀಸ್ ಠಾಣೆಯಲ್ಲಿ ಮತ್ತೆ ವಿವಾಹ..!

ನ್ಯೂಸ್ ನಾಟೌಟ್ : ಮದುವೆ ಸಮಾರಂಭವೊಂದರಲ್ಲಿ ಊಟದ ವಿಚಾರದಲ್ಲಿ ವಧು ಮತ್ತು ವರನ ಕಡೆಯವರ ನಡುವೆ ನಡೆದ ಜಗಳದಿಂದ ಮುರಿದು ಬೀಳುವ ಹಂತಕ್ಕೆ ಬಂದಿದ್ದ ಮದುವೆ ಕೊನೆಗೆ ಪೊಲೀಸ್ ಠಾಣೆಯಲ್ಲೇ ನೆರವೇರಿದ ಘಟನೆ ಸೂರತ್‌ ನ ವರಾಚಾ ಪ್ರದೇಶದಲ್ಲಿ ಕಳೆದ ಭಾನುವಾರ(ಫೆ.2) ನಡೆದಿದೆ.

ಬಿಹಾರದ ನಿವಾಸಿಗಳಾಗಿರುವ ರಾಹುಲ್ ಪ್ರಮೋದ್ ಮಹ್ತೋ ಮತ್ತು ಅಂಜಲಿ ಕುಮಾರಿ ಇವರಿಬ್ಬರ ವಿವಾಹ ನಿಶ್ಚಯವಾಗಿತ್ತು. ಅದರಂತೆ ಕಳೆದ ಭಾನುವಾರ(ಫೆ.2) ಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ನೆರವೇರಬೇಕಿತ್ತು. ಅದರಂತೆ ವಧು ಹಾಗೂ ವರನ ಕಡೆಯವರು ಮದುವೆ ಹಾಲ್ ಗೆ ಬಂದಿದ್ದಾರೆ ಮದುವೆಯ ಅರ್ಧ ಶಾಸ್ತ್ರಗಳು ಮುಗಿದಿತ್ತು. ಈ ನಡುವೆ ಮದ್ಯಾಹ್ನದ ಊಟದಲ್ಲಿ ಕೊರತೆಯಾಗಿದೆ ಎಂದು ಕೋಪಗೊಂಡ ಹುಡುಗನ ಕಡೆಯವರು ಹೆಣ್ಣಿನ ಕಡೆಯವರ ಮೇಲೆ ಕಿಡಿಕಾರಿದ್ದಾರೆ.

https://x.com/HindBharatvarsh/status/1886354731787825571?ref_src=twsrc%5Etfw%7Ctwcamp%5Etweetembed%7Ctwterm%5E1886354731787825571%7Ctwgr%5Edd8136f338c896ed6387a5b916aff0f40cab7dff%7Ctwcon%5Es1_&ref_url=https%3A%2F%2Fwww.udayavani.com%2Fviral-news%2Fcouple-gets-married-at-police-station-after-wedding-called-off-over-food

ಅಲ್ಲದೆ ಮಾತಿಗೆ ಮಾತು ಬೆಳೆದು ಮದುವೆ ಮುರಿಯುವ ಹಂತಕ್ಕೆ ತಲುಪಿದೆ. ಇದರಿಂದ ಗಾಬರಿಗೊಂಡ ಹೆಣ್ಣಿನ ಕಡೆಯವರು ಪೊಲೀಸರಿಗೆ ಮಾಹಿತಿ ನೀಡಿದದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಎರಡೂ ಕಡೆಯವರ ಮನವೊಲಿಸಿ ಮದುವೆ ಮಾಡಿಸುವ ಯತ್ನ ನಡೆಸಿದ್ದಾರೆ ಆದರೆ ಜಗಳ ಹೆಚ್ಚಾದ ಪರಿಣಾಮ ಸಂಧಾನ ಸಾಧ್ಯವಾಗಲಿಲ್ಲ ಈ ವೇಳೆ ಪೊಲೀಸರು ವರನ ಹಾಗೂ ವಧುವಿನ ಪೋಷಕರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಸಮಾಧಾನ ಪಡಿಸಿದ್ದಾರೆ.

ಬಳಿಕ ಎರಡೂ ಕಡೆಯವರು ಒಪ್ಪಿಕೊಂಡಿದ್ದು ಈ ವೇಳೆ ಮತ್ತೆ ಮದುವೆ ಹಾಲಿಗೆ ಹೋದರೆ ಮತ್ತೆ ಊಟದ ವಿಚಾರದಲ್ಲಿ ಸಂಬಂಧಿಕರ ನಡುವೆ ಗಲಾಟೆ ನಡೆಯುತ್ತದೆ ಎಂದು ಎರಡು ಕುಟುಂಬದವರ ಮನವಿ ಮೇರೆಗೆ ಪೊಲೀಸ್ ಠಾಣೆಯಲ್ಲೇ ಮದುವೆ ಮಾಡಿ ಕೊಡಲಾಯಿತು ಎಂದು ವರದಿ ತಿಳಿಸಿದೆ. 

Click

ಮಂಗಳೂರು: ರಾತ್ರಿ ಕರ್ತವ್ಯದಲ್ಲಿದ್ದ ಪೊಲೀಸರ ವಾಕಿಟಾಕಿ ಕಳವು..! ಪ್ರಕರಣ ದಾಖಲು

ನಾಪತ್ತೆಯಾದ 11 ಬಾಲಕಿಯರ ಜಾಡು ಹಿಡಿದ ಪೊಲೀಸರಿಗೆ ಕಾದಿತ್ತು ಶಾಕ್..! ಅಂಕಿತ್ ಎಂದು ಹೆಸರು ಬದಲಿಸಿಕೊಂಡಿದ್ದ ಅಫ್ತಾಬ್ ಖಾನ್ ನ ರಹಸ್ಯ ಬಯಲು..!

Related posts

ರಾತ್ರಿ ಕಳ್ಳತನಕ್ಕೆ ಬಂದವನು ಮಹಿಳೆಗೆ ಕಿಸ್ ಕೊಟ್ಟು ಪರಾರಿ..! ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಹೇಳಿದ್ದೇನು..?

Airplane: ಕಲಬುರಗಿ ಮತ್ತು ಬೆಳಗಾವಿ ನಡುವೆ ವಿಮಾನ ಸಂಚಾರ ಆರಂಭ..! ಟಿಕೆಟ್​ ಬೆಲೆ ಎಷ್ಟು..? ಇಲ್ಲಿದೆ ಸಂಪೂರ್ಣ ಮಾಹಿತಿ

ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ, ವಯನಾಡ್‌ನಿಂದಲೇ ಮತ್ತೊಮ್ಮೆ ಸ್ಪರ್ಧೆ