ವೈರಲ್ ನ್ಯೂಸ್

ಏನಿದು ಪೊಲೀಸ್ ಠಾಣೆಯಲ್ಲಿ ಸೀಮಂತ..? ಮಹಿಳಾ ಪೊಲೀಸ್ ಸಿಬ್ಬಂದಿಗಳಿಗೆ ಮಡಿಲಕ್ಕಿ ತುಂಬಿದ ಇನ್ಸ್ ಪೆಕ್ಟರ್

ನ್ಯೂಸ್ ನಾಟೌಟ್: ಪೊಲೀಸ್ ಠಾಣೆಯಲ್ಲಿ ಮಹಿಳಾ ಸಿಬ್ಬಂದಿಯೊಬ್ಬರಿಗೆ ಸೀಮಂತ ಕಾರ್ಯ ಮಾಡಿದ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದಲ್ಲಿ ನಡೆದಿದೆ.

ಮಹಿಳಾ ಪೊಲೀಸ್ ಸಿಬ್ಬಂದಿಗಳಿಗೆ ಮಡಿಲಕ್ಕಿ ತುಂಬಿ ಸೀಮಂತ ಮಾಡಲಾಗಿದೆ. ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಸೀಮಂತ ಕಾರ್ಯಕ್ರಮ ನಡೆಸಿದ್ದು, ಪೊಲೀಸ್ ಸಿಬ್ಬಂದಿ ಶಾರದಾ ಮತ್ತು ಅಸ್ಮಬಾನು ಎಂಬ ಇಬ್ಬರು ಗರ್ಭಿಣಿ ಮಹಿಳಾ ಪೇದೆಗಳಿಗೆ ಸೀಮಂತ ಕಾರ್ಯ ಮಾಡಲಾಗಿದೆ.

ಪೊಲೀಸ್ ಇನ್ಸ್ ಪೆಕ್ಟರ್ ಸುಮಾರಾಣಿ ಇಬ್ಬರು ಮಹಿಳಾ ಸಿಬ್ಬಂದಿಗಳಿಗೆ ಸೀಮಂತ ಕಾರ್ಯ ಮಾಡಿ ಶುಭ ಹಾರೈಸಿದ್ದಾರೆ. ಇಬ್ಬರು ಮಹಿಳಾ ಪೇದೆಗಳಿಗೆ ಉಡಿ ತುಂಬಿ, ಮಡಿಲಕ್ಕಿ ಹಾಕಿ, ಕೊಬ್ಬರಿ ಬೆಲ್ಲ, ತೆಂಗಿನಕಾಯಿ, ಅರಿಶಿಣ-ಕುಂಕುಮ ಹಾಗೂ ಬಳೆಗಳನ್ನು ನೀಡಿ ಸೀಮಂತ ಕಾರ್ಯ ಮಾಡಲಾಗಿದೆ.

ಕೆಲಸದ ಒತ್ತಡದ ನಡುವೆಯೂ ಸೀಮಂತ ಕಾರ್ಯ ಅರ್ಥಪೂರ್ಣವಾಗಿ ನಡೆಸಲಾಗಿದೆ. ಶಾರದಾ ಮತ್ತು ಅಸ್ಮಾಬಾನು ಅವರು ಕೆ.ಆರ್. ಪೇಟೆ ಪಟ್ಟಣ ಪೊಲೀಸ್ ಠಾಣೆಯ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪೊಲೀಸ್ ಠಾಣಾ ವತಿಯಿಂದ ಸೀಮಂತ ಕಾರ್ಯದ ಮೂಲಕ ಸಿಬ್ಬಂದಿಗಳನ್ನ ಗೌರವಿಸಿ ಪೊಲೀಸರು ಬೀಳ್ಕೊಟ್ಟಿದ್ದಾರೆ ಎಂದು ವರದಿ ತಿಳಿಸಿದೆ.

Related posts

ಈ ನಾಣ್ಯ ಬರೋಬ್ಬರಿ 4.25 ಕೋಟಿಗೆ ಹರಾಜು..! ಪ್ರಪಂಚದಲ್ಲಿ ಈ ರೀತಿಯ ಎರಡು ನಾಣ್ಯಗಳು ಮಾತ್ರ ಇವೆ..!

ಸಲ್ಮಾನ್ ಖಾನ್‌ ಗೆ ಜೀವ ಬೆದರಿಕೆ ಹಾಕಿದ್ದ ರಾಯಚೂರಿನ ಯುವಕನ ಬಡ ಪೋಷಕರಿಗೆ ಸಂಕಷ್ಟ..! ಮುಂಬೈಗೆ ಬರುವಂತೆ ಪೋಷಕರಿಗೆ ಪೊಲೀಸರಿಂದ ಕರೆ..!

ಸುಳ್ಯ: ರಸ್ತೆ ಮಧ್ಯೆ ಪಲ್ಟಿಯಾದ ಗೂಡ್ಸ್‌ ಲಾರಿ..! ಕೆಲ ಹೊತ್ತು ವಾಹನ ಸಂಚಾರಕ್ಕೆ ತಡೆ