ಕರಾವಳಿ

ಮಂಗಳೂರು: ಜನ ನಿಬಿಡ ವಸತಿ ಸಂಕೀರ್ಣದ ಬಳಿ ಗ್ಯಾಸ್‌ ಸಿಲಿಂಡರ್‌ ಅಕ್ರಮ ದಾಸ್ತಾನು, ಪೊಲೀಸರ ಮಿಂಚಿನ ಕಾರ್ಯಾಚರಣೆ, 26 ಸಿಲಿಂಡರ್‌ಸಹಿತ ಓರ್ವ ವಶ

ನ್ಯೂಸ್‌ ನಾಟೌಟ್‌: ಮಂಗಳೂರು ಅಳಕೆ ನ್ಯೂಚಿತ್ರಾ ಮಸೀದಿ ಪಕ್ಕದಲ್ಲಿರುವ ಜನ ನಿಬಿಡ ವಸತಿ ಸಂಕೀರ್ಣದ ಬಳಿಯ ಸಣ್ಣ ಕೊಠಡಿಯಲ್ಲಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಗ್ಯಾಸ್‌ ಸಿಲಿಂಡರ್‌ಗಳನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಶೇಖ್‌ ಆಶಫ್‌ ಉದ್ದೀನ್‌ (59 ) ಎಂಬಾತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಖಚಿತ ಮಾಹಿತಿಯ ಆಧಾರದಲ್ಲಿ ಶನಿವಾರ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು ಅರ್ಧ ಗ್ಯಾಸ್‌ ತುಂಬಿದ 3 ಗೃಹ ಬಳಕೆಯ ಇಂಡೇನ್‌ ಮತ್ತು ಎಚ್‌.ಪಿ.ಗ್ಯಾಸ್‌ ಸಿಲಿಂಡರ್‌ ಸಹಿತ ಒಟ್ಟು 26 ವಿವಿಧ ಅಳತೆಯ ಗ್ಯಾಸ್‌ ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಮಂಗಳೂರು ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Related posts

ಪುತ್ತೂರು: ಕಂಠಪೂರ್ತಿ ಮದ್ಯ ಸೇವಿಸಿ ನಡು ರಸ್ತೆಯಲ್ಲಿಯೇ ಆಟೋ ನಿಲ್ಲಿಸಿ ಮಲಗಿದ ಚಾಲಕ

ಮಂಗಳೂರು: 9ನೇ ಮಹಡಿಯಿಂದ ಆಯತಪ್ಪಿ ಬಿದ್ದು ಟೆಕ್ನಿಷಿಯನ್ ಸಾವು!

ಕೆವಿಜಿ ಮೆಡಿಕಲ್ ಕಾಲೇಜಿನ ಮುಕುಟಕ್ಕೆ ಹಲವು ರ‍್ಯಾಂಕ್‌ಗಳ ಗರಿ , 2023-24ನೇ ಸಾಲಿನ ವೈದ್ಯಕೀಯ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳ ಪ್ರಚಂಡ ಸಾಧನೆ