ಕರಾವಳಿಕ್ರೈಂ

ಬಸ್‌ ನಿಲ್ಲಿಸಿ ಪೊಲೀಸರೆದುರೇ ವ್ಯಕ್ತಿಗೆ ಹಲ್ಲೆ ಮಾಡಿ ವಿದ್ಯಾರ್ಥಿಗಳ ಗೂಂಡಾಗಿರಿ..ಬಸ್‌ ನಿಲ್ಲಿಸದ ವಿಚಾರಕ್ಕೆ ಕಂಡೆಕ್ಟರ್ ಜತೆ ವಾಗ್ವಾದ..!

ನ್ಯೂಸ್ ನಾಟೌಟ್: ಕಾಲೇಜಿಗೆ ಓದಲು ಹೋಗುವ ವಿದ್ಯಾರ್ಥಿಗಳು ರಸ್ತೆಯಲ್ಲೇ ಕೆಎಸ್‌ಆರ್‌ಟಿಸಿ ಬಸ್ ತಡೆದು ಗೂಂಡಾಗಿರಿ ಪ್ರದರ್ಶಿಸಿದ್ದಾರೆ. ಅದರಲ್ಲೂ ಪೊಲೀಸರ ಎದುರೇ ಇಂತಹದ್ದೊಂದು ವರ್ತನೆ ಪ್ರದರ್ಶಿಸಿರುವ ವಿಡಿಯೋ ವೈರಲ್ ಆಗುತ್ತಿದೆ.

ದ.ಕ ಜಿಲ್ಲೆ ಬೆಳ್ತಂಗಡಿಯ ಚಾರ್ಮಾಡಿಯಲ್ಲಿ ವಿದ್ಯಾರ್ಥಿಗಳ ಗೂಂಡಾಗಿರಿ ನಡೆದಿದೆ. ಪೊಲೀಸರ ಎದುರೇ ವ್ಯಕ್ತಿಯೋರ್ವನಿಗೆ ಹಲ್ಲೆ ನಡೆಸಲಾಗಿದೆ. ವಿದ್ಯಾರ್ಥಿಗಳಿಂದ ಗೂಂಡಾಗಿರಿ ನಡೆದರೂ ಪೊಲೀಸರು ಸುಮ್ಮನಾಗಿದ್ದಾರೆ. ಉಜಿರೆಯಿಂದ ಚಾರ್ಮಾಡಿಗೆ ಬಸ್ ನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿಗಳ ಗುಂಪು ಎಂದು ತಿಳಿದು ಬಂದಿದೆ. ಚಾರ್ಮಾಡಿ ಬಳಿ ಬಸ್ ನಿಲ್ಲಿಸಲು ವಿದ್ಯಾರ್ಥಿಗಳು ಸೂಚಿಸಿದ್ದಾರೆ. ಆದರೆ ಬಸ್ ನಿಲ್ಲಿಸದ ಹಿನ್ನೆಲೆಯಲ್ಲಿ ಗಲಾಟೆ ಎಬ್ಬಿಸಿದ್ದಾರೆ.

ವೇಗದೂತ ಬಸ್ ಆಗಿರೋದರಿಂದ ಸಿಕ್ಕಸಿಕ್ಕಲ್ಲಿ ಬಸ್ ನಿಲ್ಲಿಸಲು ಸಾಧ್ಯವಿಲ್ಲ ಎಂದಿದ್ದ ಬಸ್ ಕಂಡೆಕ್ಟರ್ ಹೇಳಿದ್ದಾರೆ. ಇದಕ್ಕೆ ಪ್ರಯಾಣಿಕರೊಬ್ಬರು ಸಾಥ್ ನೀಡಿದ್ದಾರೆ. ಇದರಿಂದರೊಚ್ಚಿಗೆದ್ದ ವಿದ್ಯಾರ್ಥಿಗಳು ಪ್ರಯಾಣಿಕನಿಗೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯ ಕುರಿತು ಈವರೆಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ.

Related posts

ರೇಣುಕಾಸ್ವಾಮಿ ಮೈಮೇಲಿದ್ದ ಚಿನ್ನಾಭರಣವನ್ನೂ ದೋಚಿದ್ದರು ದರ್ಶನ್ ಸಹಚರರು..! ಆರೋಪಿ ರವಿ ಬಾಯ್ಬಿಟ್ಟ ರೋಚಕ ಕಹಾನಿ ಇಲ್ಲಿದೆ..!

ಸಿಂಗಾಪುರದಲ್ಲಿ ನೆಲೆಸಿದ ತುಳುನಾಡಿನ ಸಮುದಾಯದಿಂದ ಯೋಗ ಸಂಭ್ರಮ, ತುಳುವಿನಲ್ಲಿ ಮಾತನಾಡುತ್ತಲೇ ಯೋಗ, ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಖುಷಿ ಪಟ್ಟ ತುಳುವರು

ಜೆಸಿಬಿ ಮೇಲೆ ಮಣ್ಣು ಕುಸಿದು ಭೀಕರ ದುರಂತ,ಮಣ್ಣಲ್ಲಿ ಸಿಲುಕಿ ಚಾಲಕ ಮೃತ್ಯು