ಸುಳ್ಯ

ಹಠಾತ್ ಹೃದಯಾಘಾತಕ್ಕೆ ಸುಳ್ಯ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಬಲಿ, ಕರ್ತವ್ಯ ಮುಗಿಸಿ ನಗುನಗುತ್ತಾ ಮನೆಗೆ ಬಂದು ಮಲಗಿದವರು ಅಸ್ವಸ್ಥ, ಸಾವು

ನ್ಯೂಸ್ ನಾಟೌಟ್: ಮನುಷ್ಯನ ಜೀವನ ಎಷ್ಟು ಸಣ್ಣದು ಅನ್ನೋದನ್ನ ತಿಳಿಯುವುದಕ್ಕೆ ಹೆಚ್ಚು ಸಮಯ ಬೇಕಿಲ್ಲ, ಮೂರು ದಿನದ ಜೀವನದಲ್ಲಿ ಅದೆಷ್ಟೋ ಬೂಟಾಟಿಕೆ, ಕೆಲಸಕ್ಕೆ ಬಾರದು ಮಾತುಗಳನ್ನು ನಾವು ಆಡುತ್ತೇವೆ. ಆದರೆ ಈ ಸಾವು ಅನ್ನುವುದು ಯಾವುದೇ ವ್ಯಕ್ತಿಯ ಜೀವನದಲ್ಲಿ ಯಾವ ಕ್ಷಣದಲ್ಲಿ ಬೇಕಾದರೂ ಬಂದು ಬಿಡಬಹುದು ಅನ್ನುವುದಕ್ಕೆ ಸುಳ್ಯ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಬಾಲಕೃಷ್ಣ ಗೌಡ ಕೊಯಿಕುಳಿ ಪ್ರತ್ಯಕ್ಷ ಉದಾಹರಣೆಯಾಗಿದ್ದಾರೆ.

ಹೌದು, ಸುಳ್ಯ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಆಗಿರುವ ಬಾಲಕೃಷ್ಣ ಗೌಡ (57 ವರ್ಷ) ಹಲವಾರು ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಳ್ಳೆಯ ಅಧಿಕಾರಿ ಎಂದು ಹೆಸರು ಮಾಡಿದ್ದ ಬಾಲಕೃಷ್ಣ ಗೌಡರು ಮೂಲತಃ ದುಗ್ಗಲಡ್ಕದ ಕುಂಬೆತ್ತಿಬನ ನಿವಾಸಿಯಾಗಿದ್ದಾರೆ. ಪುತ್ತೂರು DYSP ಕಚೇರಿಯಲ್ಲಿ ಒಒಡಿಯಲ್ಲಿ ಕರ್ತವ್ಯ ನಿರ್ವಹಿಸಿ ಮನೆಗೆ ತೆರಳಿದ್ದ ಬಾಲಕೃಷ್ಣ ಗೌಡರು ಮನೆಯವರ ಜೊತೆ ಎಂದಿನಂತೆ ನಗುನಗುತ್ತಾ ಮಾತನಾಡಿದ್ದರು. ಊಟ ಮಾಡಿ ಖುಷಿಯಾಗಿಯೇ ನಿದ್ದೆಗೆ ಜಾರಿದ್ದರು. ಆದರೆ ಶನಿವಾರ ಬೆಳ್ಳಂ ಬೆಳಗ್ಗೆ ಸಮಯದಲ್ಲಿ ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿದೆ. ತಕ್ಷಣ ಅವರನ್ನು ಸುಳ್ಯದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಅವರು ಹೃದಯಾಘಾತದಿಂದ ಮೃತಪಟ್ಟರು ಎಂದು ತಿಳಿದು ಬಂದಿದೆ. ಮೃತರು ಪತ್ನಿ ಮೀನಾಕ್ಷಿ, ಪುತ್ರರಾದ ಹೇಮಂತ್, ಜಯಂತ್, ಸಹೋದರ ಬಾಲಚಂದ್ರ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Related posts

ಸುಳ್ಯ:ಎನ್ನೆಂಸಿಯ ಜೀವ ವಿಜ್ಞಾನ ಪದವಿ ವಿದ್ಯಾರ್ಥಿಗಳಿಗೆ ಕೃಷಿ ಕ್ಷೇತ್ರ ಅಧ್ಯಯನ ಶಿಬಿರ,ಕೃಷಿ ಸಾಧಕರನ್ನು ಭೇಟಿಯಾಗಿ ಸಂದರ್ಶಿಸಿದ ವಿದ್ಯಾರ್ಥಿಗಳು

ಬೈಕ್ ಕಳ್ಳರ ಹಾವಳಿಗೆ ಸುಳ್ಯ ಪೊಲೀಸರ ಬ್ರೇಕ್..! ತಡರಾತ್ರಿ ಬರುವ ಕಳ್ಳರ ಹಿಡಿಯಲು ಪೊಲೀಸರು ಹೂಡಿದ್ರು ಉಪಾಯ..!

‘ಯೋಗಿ’ ನೋಡಲು ಬಂದ ‘ಬಾಲ ಯೋಗಿ’, ಕಾರ್ಕಳದಲ್ಲಿ ಗಮನ ಸೆಳೆದ ಜೂನಿಯರ್ ಯೋಗಿ ಆದಿತ್ಯನಾಥ್