ನ್ಯೂಸ್ ನಾಟೌಟ್: ಅಯೋಧ್ಯೆಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿತ್ತು, ಮರಣೋತ್ತರ ಪರೀಕ್ಷೆ ವೇಳೆ ಬಾಲಕಿಯ ಸ್ಥಿತಿ ನೋಡಿ ವೈದ್ಯರು ಕಣ್ಣೀರಿಟಿದ್ದಾರೆ. ಅಯೋಧ್ಯೆಯಲ್ಲಿ ನಡೆದ ಬಾಲಕಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ಮೂವರನ್ನು ಸೋಮವಾರ(ಫೆ.6) ಬಂಧಿಸಿದ್ದಾರೆ.
ಅತ್ಯಾಚಾರಿಗಳಾದ ದಿಗ್ವಿಜಯ್ ಸಿಂಗ್ ಅಲಿಯಾಸ್ ಬಾಬಾ, ಹರಿರಾಮ್ ಕೋರಿ ಮತ್ತು ವಿಜಯ್ ಸಾಹು ಪೊಲೀಸರ ಮುಂದೆ ತಮ್ಮ ಅಪರಾಧಗಳನ್ನು ಒಪ್ಪಿಕೊಂಡಿದ್ದಾರೆ.
ಆಕೆಯ ಸಾವಿಗೆ ಅತಿಯಾದ ರಕ್ತಸ್ರಾವವೇ ಕಾರಣ ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿದೆ. ಪೊಲೀಸ್ ಮೂಲಗಳು ಹೇಳುವಂತೆ ಇಬ್ಬರು ವೈದ್ಯರ ತಂಡವು ಮರಣೋತ್ತರ ಪರೀಕ್ಷೆ ನಡೆದಿದೆ. ಬಾಲಕಿಯ ದೇಹದ ಮೇಲೆ 30 ಸಣ್ಣ ಹಾಗೂ ದೊಡ್ಡ ಗಾಯಗಳಿದ್ದವು. ಸಂತ್ರಸ್ತೆಯ ಎರಡೂ ಬದಿಗಳಲ್ಲಿ 24 ಪಕ್ಕೆಲುಬುಗಳಲ್ಲಿ 14 ಮುರಿದಿವೆ.
ಆಕೆಯ ಖಾಸಗಿ ಅಂಗಕ್ಕೆ ಕ್ರೂರವಾಗಿ ಇರಿದಿದ್ದಾರೆ. ಎರಡಕ್ಕೂ ಹೆಚ್ಚು ವ್ಯಕ್ತಿಗಳು ಸೇರಿ ಆಕೆಯನ್ನು ಕೊಲೆ ಮಾಡಿದ್ದಾರೆ.ಘಟನೆಯ ಆರೋಪಿ ದಿಗ್ವಿಜಯ್ ಸಿಂಗ್ ಹೇಳಿಕೆ ನೀಡಿದ್ದು, ನಾವು ಆಕೆಯ ಹಿಂದೆ ಓಡಿ ಹೋಗಿ ಹೊಲದಲ್ಲಿ ಆಕೆಯನ್ನು ಹಿಡಿದಿದ್ದೆವು, ಕೋಲಿನಿಂದ ಆಕೆಯ ತಲೆಗೆ ಮೊದಲು ಪೆಟ್ಟು ಕೊಟ್ಟೆವು, ಆಕೆ ಯಾವಾಗ ಸತ್ತಿದ್ದಾಳೆ ಎಂಬುದು ನಮಗೆ ತಿಳಿದಿಲ್ಲ. ಹುಡುಗಿ ಸತ್ತಿರುವುದು ತಡವಾಗಿ ನಮಗೆ ಅರ್ಥವಾಗಿತ್ತು. ನಾವು ಆಕೆಯ ಜತೆ ಒಂದು ಗಂಟೆಗಳ ಕಾಲ ಕ್ರೂರವಾಗಿ ವರ್ತಿಸಿದ್ದೆವು, ಆಕೆಯ ದುಪಟ್ಟಾವನ್ನು ಬಾಯಿಗೆ ತುಂಬಿಸಿದ್ದೆವು, ಆಕೆ ವಿರೋಧಿಸುತ್ತಲೇ ಇದ್ದಳು, ನಾವೆಲ್ಲರೂ ಕುಡಿದಿದ್ದೆವು, ಆದ್ದರಿಂದ ಕೋಪಗೊಂಡು ಆಕೆಗೆ ಹೊಡಿದಿದ್ದೆವು ಎಂದು ಹೇಳಿದ್ದಾನೆ.
Click