ಕ್ರೈಂ

ಬೈಕ್ ಕಳ್ಳನಿಗೆ ದೇವರೇ ಕೊಟ್ಟ ಶಿಕ್ಷೆ…. ಏನು ಗೊತ್ತೆ..?

380
Spread the love

ಉಪ್ಪಿನಂಗಡಿ: ಗಾಂಧಿಪಾರ್ಕ್ ಬಳಿಯ ಜೈನ ಬಸದಿ ಸಮೀಪದ ಮನೆಯೊಂದರಲ್ಲಿ ನಿಲ್ಲಿಸಿದ್ದ ಬೈಕ್ ನ್ನು ಕಳ್ಳರು ನಕಲಿ ಕೀ ಬಳಸಿ ಕಳವುಗೈದು ಪರಾರಿಯಾಗುತ್ತಿದ್ದಾಗ ಅಪಘಾತವಾದ ಘಟನೆ ನಡೆದಿದೆ.

ಬೈಕನ್ನು ಹಿರೇಬಂಡಾಡಿ ಗ್ರಾಮದ ಕೊಳ್ಳೇಜಾಲ್ ‌ನಿವಾಸಿ ಮುಹಮ್ಮದ್ ಎಂಬವರದು. ಇವರು ಬೈಕ್ ಕಳವಾದ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ದೂರು ಕೂಡಾ ದಾಖಲಿಸಿದ್ದರು. ಆದರೆ ಅಪರಿಚಿತ ಕಳ್ಳರು ಬೈಕ್ ಕದ್ದೊಯ್ದು ಪರಾರಿಯಾಗುತ್ತಿದ್ದ ವೇಳೆ ಬೈಕ್ ಶಿರಾಡಿ ಸಮೀಪದ ಅಡ್ಡಹೊಳೆ ಎಂಬಲ್ಲಿ ಲಾರಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸವಾರನನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತ ಅಪಘಾತಕ್ಕೀಡಾದ ಬೈಕ್ ನ ರಿಜಿಸ್ಟರ್ ನಂಬರ್ ಆಧಾರದಲ್ಲಿ ಮಾಲಕನನ್ನು ಪತ್ತೆಹಚ್ಚಿ ವಿಚಾರಿಸಿದಾಗ, ಮಾಲಕ ಮಹಮ್ಮದ್ ಅವರು ನಿಲ್ಲಿಸಿದ್ದ ಬೈಕ್ ನ್ನು ಕದ್ದೊಯ್ದ ಘಟನೆ ಬೆಳಕಿಗೆ ಬಂದಿದೆ.

See also  ಮುಂಬೈ ದಾಳಿಯ 'ತರಬೇತುದಾರ' ಪಾಕ್ ಜೈಲಿನಲ್ಲಿ ಸಾವು! ಕಳೆದ 16 ವರ್ಷಗಳಿಂದ ಪಾಕಿಸ್ತಾನದ ಕಾರಾಗೃಹದಲ್ಲಿದ್ದ ಉಗ್ರ!
  Ad Widget   Ad Widget   Ad Widget   Ad Widget   Ad Widget   Ad Widget