ಕರಾವಳಿಸುಳ್ಯ

ಸುಳ್ಯ : ದೈವ ನರ್ತನದ ಖ್ಯಾತ ನಾದಸ್ವರ ಮಾಂತ್ರಿಕ ಇನ್ನಿಲ್ಲ, ಧ್ರುವ ತಾರೆ ಪೊಡಿಯಾ ಬಾಳುಗೋಡು ನಿಧನಕ್ಕೆ ಕಂಬನಿ ಮಿಡಿದ ಅಭಿಮಾನಿಗಳು

ನ್ಯೂಸ್ ನಾಟೌಟ್: ನಾದಸ್ವರ ಲೋಕದ ಧ್ರುವ ತಾರೆ ಪೊಡಿಯಾ ಬಾಳುಗೋಡು ನಿಧನರಾಗಿದ್ದಾರೆ.

ಅವರಿಗೆ 60 ವರ್ಷವಾಗಿತ್ತು. ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಶನಿವಾರ ಬೆಳಗ್ಗೆ ಮೃತಪಟ್ಟಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬಾಳುಗೋಡಿನ ನಿವಾಸಿ ಪೊಡಿಯಾ ಬಾಳುಗೋಡು ಅವರು ನಾದಸ್ವರ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದರು. ತನ್ನದೇ ಆದ ಶಿಷ್ಯ ವೃಂದವನ್ನು ಹುಟ್ಟು ಹಾಕಿಕೊಂಡಿದ್ದರು. ತುಳು ನಾಡಿನ ದೈವಾರಾಧನೆಯಲ್ಲಿ ನಾದಸ್ವರ ನುಡಿಸುವ ಮೂಲಕ ದೈವದ ಹೆಜ್ಜೆಗೆ ಜತೆಯಾಗಿದ್ದರು. ಇವರ ನಾದಸ್ವರಕ್ಕೆ ಹಲವಾರು ಮಂದಿ ತಲೆತೂಗುತ್ತಿದ್ದರು. ಪತ್ನಿ ಸುಂದರಿ, ಮಕ್ಕಳಾದ ಪ್ರವೀಣ್, ಪ್ರದೀಪ್‌ , ಉದಯ್ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಹಲವಾರು ಪ್ರಶಸ್ತಿಗಳು ಇವರಿಗೆ ಒಲಿದು ಬಂದಿರುವುದು ವಿಶೇಷ.

Related posts

ಗಂಡನನ್ನು ಬಿಟ್ಟು ಬಾ ಮದುವೆಯಾಗೋಣ ಎಂದವನೇ ಪರಾರಿ; ಕೊನೆಗೂ ಪ್ರಿಯಕರ ಅರೆಸ್ಟ್

ಕರಿಕೆಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ

ಸುಳ್ಯ: ವಯನಾಡಿನ ಸಂತ್ರಸ್ಥ ಜನರ ನೋವಿಗೆ ಸ್ಪಂದಿಸಿದ ಜ್ಯೋತಿ ಆಸ್ಪತ್ರೆ, ಕೇರಳಕ್ಕೆ ಉಚಿತ ಔಷಧಿ ರವಾನೆ