ಕರಾವಳಿಕೊಡಗು

ಪ್ರಧಾನಿ ಜತೆಗಿನ ಮನ್ ಕೀ ಬಾತ್ ಸಂವಾದಕ್ಕೆ ಆಯ್ಕೆಯಾದ ಸುಳ್ಯದ ಶಿಕ್ಷಣ ತಜ್ಞ

ನ್ಯೂಸ್ ನಾಟೌಟ್: ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ಮನ್‌ ಕೀ ಬಾತ್ ಬಾನುಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸುಳ್ಯದ ಶಿಕ್ಷಣ ತಜ್ಞ ಹಾಗೂ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ ಚಂದ್ರಶೇಖರ ದಾಮ್ಲೆಯವರಿಗೆ ಆಹ್ವಾನ ಬಂದಿದೆ.


ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಇದೀಗ ಚಂದ್ರಶೇಖರ ದಾಮ್ಲೆಯವರು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಹೊರಡುವ ಮೊದಲು ನ್ಯೂಸ್ ನಾಟೌಟ್‌ಗೆ ಪ್ರತಿಕ್ರಿಯಿಸಿದ ಅವರು, ಏಪ್ರಿಲ್ ೩೦ರಂದು ಬೆಳಗ್ಗೆ ೯.೩೦ಕ್ಕೆ ನಡೆಯಲಿರುವ ಮನ್‌ಕೀ ಬಾತ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನನಗೆ ಪ್ರಧಾನಿ ಕಚೇರಿಯಿಂದ ಆಹ್ವಾನ ಬಂದಿದೆ. ಹೀಗಾಗಿ ಹೊರಟಿದ್ದೇನೆ. ಪ್ರಧಾನಿ ಜತೆಗಿನ ಸಂವಾದವನ್ನು ಬಹಳ ಕುತೂಹಲದಿಂದ ಎದುರು ನೋಡುತ್ತಿದ್ದೇನೆ ಎಂದು ತಿಳಿಸಿದರು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಡಾ. ದಾಮ್ಲೆಯವರು ೭೫ ಮಂದಿ ಅಪ್ರಕಟಿತ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಪುಸ್ತಕ ರಚಿಸಿದ್ದರು. ಈ ಪುಸ್ತಕದ ಪ್ರತಿಯನ್ನು ಪ್ರಧಾನಿ ಕಾರ್ಯಾಲಯಕ್ಕೂ ಕಳುಹಿಸಿಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಕರೆ ಬಂದಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

Related posts

ಸುಬ್ರಹ್ಮಣ್ಯದಲ್ಲಿ ಗುಡ್ಡ ಕುಸಿತ, ಎರಡು ಮಕ್ಕಳ ದುರಂತ ಸಾವು

ಮಡಿಕೇರಿ: ನಿಜಾಮುದ್ದೀನ್ ‘ಕೈ’ ರಾಶಿದ್ ಪತ್ನಿಗೆ ತಾಗಿದ್ದಕ್ಕೆ ಹಲ್ಲೆ..? ಕಿಡ್ನ್ಯಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟದ್ದೇಕೆ?

ಸುಳ್ಯ: ಎನ್ನೆoಪಿಯುಸಿಯಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಓರಿಯಂಟೇಶನ್ ಕಾರ್ಯಕ್ರಮ