ನ್ಯೂಸ್ ನಾಟೌಟ್ : ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದ ಶಿರೂರು ಭೂಕುಸಿತ ದುರಂತಕ್ಕೆ ಒಂದು ವರ್ಷವಾಗುತ್ತಿದೆ.ಈ ಬಗ್ಗೆ ಇದೀಗ ಮಲೆಯಾಳಂನಲ್ಲಿ ಸಿನಿಮಾ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ಕೇರಳದ ಶಾಸಕ ಅಶ್ರಫ್ (A.K.M.Ashraf) ಅವರು ಸಿನಿಮಾ ಕಥೆ ಬರೆಯುತ್ತಿದ್ದಾರೆ ಎಂಬ ಸುದ್ದಿಯಿದೆ.
ಕಳೆದ ವರ್ಷ ಜುಲೈನಲ್ಲಿ ಈ ದುರ್ಘಟನೆ ಅಂಕೋಲದ ಶಿರೂರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿತ್ತು.ಭೂಕುಸಿತವಾಗಿ 11 ಜನ ಮೃತಪಟ್ಟರು. ಈವರೆಗೂ ಜಗನ್ನಾಥ, ಲೋಕೇಶ್ ಶವಗಳು ದೊರೆತಿಲ್ಲ. ಕೇರಳದ ಚಾಲಕ ಅರ್ಜುನ್ ಮೃತದೇಹ ಹುಡುಕಲು ಮೂರು ತಿಂಗಳ ಕಾಲ ಅವಿರತ ಕಾರ್ಯಾಚರಣೆ ನಡೆದು ಕೊನೆಗೆ ಆತನ ಶವವನ್ನು ಮಾತ್ರ ಹೊರತೆಗೆಯಲಾಯಿತು.
ಇದೀಗ ಶಿರೂರು ಘಟನೆ ನಡೆದು ಒಂದು ವರ್ಷವಾದ ಬೆನ್ನಲ್ಲೇ ಈ ದುರಂತ ಘಟನೆ ಕೇರಳದ ಮಲೆಯಾಳಂ ಭಾಷೆಯಲ್ಲಿ ಸಿನಿಮಾ ಸಟ್ಟೇರಲು ಸಿದ್ಧವಾಗಿದೆ.