ಕರಾವಳಿಕ್ರೈಂ

ವಿಟ್ಲ: ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್..! ಕುಸಿದ ಮನೆ , ಮನೆಯೊಳಗೆ ಸಿಲುಕಿದ ಮಹಿಳೆ ಗಂಭೀರ!

ನ್ಯೂಸ್ ನಾಟೌಟ್ :  ಮನೆ ಮೇಲೆ ನಿಯಂತ್ರಣ ತಪ್ಪಿ ಬಿದ್ದ ಪಿಕಪ್ ವಾಹನ ಬಿದ್ದ ಘಟನೆ ಬಂಟ್ವಾಳ ತಾಲೂಕಿನ ಸಾರಡ್ಕ‌ ಬಳಿಯ ಕೂರೇಲು ಎಂಬಲ್ಲಿ ಇಂದು(ಜುಲೈ 14) ಘಟನೆ ನಡೆದಿದೆ.

ಪಿಕಪ್ ಮೇಲಿಂದ ಕೆಲಕ್ಕೆ ಬಿದ್ದ ರಭಸಕ್ಕೆ ಹಂಚಿನ ಮನೆ ಸಂಪೂರ್ಣ ನಜ್ಜು ಗುಜ್ಜುಜಾಗಿದ್ದು, ಮನೆಯೊಳಗಡೆ ಇದ್ದ ಮಹಿಳೆ ಅಲ್ಲೆ ಸಿಲುಕಿಕೊಂಡ ಘಟನೆ ಮುಂಜಾನೆ 4:30 ರ ವೇಳೆಗೆ ನಡೆದಿದೆ.

ಕೋಳಿ ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನ ಬಿದ್ದಿದೆ ಎನ್ನಲಾಗಿದ್ದು, ಪಿಕಪ್ ಬಿದ್ದ ರಭಸಕ್ಕೆ ಮನೆಯೊಳಗೆ ಮಲಗಿದ್ದ ಮಹಿಳೆ ಸ್ಥಿತಿ ಗಂಭೀರವಾಗಿದೆ. ಕ್ರೇನ್ ಮೂಲಕ ಪಿಕಪನ್ನ ಮೇಲೆತ್ತುವ ಕಾರ್ಯ ನಡೆದಿದ್ದು, ಮಹಿಳೆಯನ್ನ ಮನೆಯಿಂದ ಹೊರ ತೆಗೆಯಲು ಹರಸಾಹಸ ಪಡುವಂತಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

Related posts

ಮಂಗಳೂರು: ಮೊಬೈಲ್ ಕಳ್ಳನ 1 ಕಿ.ಮೀ. ಬೆನ್ನಟ್ಟಿ ಹಿಡಿದ ಪೊಲೀಸ್, ವಿಡಿಯೋ ವೈರಲ್

ಹೊತ್ತಿ ಉರಿಯಿತು ಗ್ರಾಮ ಪಂಚಾಯಿತಿ..! ಸ್ಥಳೀಯರ ಪ್ರಯತ್ನವೂ ವಿಫಲ!

ಕೈ ಕಾಲು ಕತ್ತರಿಸಿ ಬಿಜೆಪಿ ಕಾರ್ಯಕರ್ತೆಯ ಹತ್ಯೆ..! ಡ್ರಮ್‌ ನೊಳಗಿದ್ದ ಮೃತದೇಹ ಸಿಕ್ಕಿದ್ದೇಗೆ..?