ಕ್ರೈಂ

ಮಂಗಳೂರು: ಮೊಬೈಲ್ ಕಳ್ಳನ 1 ಕಿ.ಮೀ. ಬೆನ್ನಟ್ಟಿ ಹಿಡಿದ ಪೊಲೀಸ್, ವಿಡಿಯೋ ವೈರಲ್

364
Spread the love

ಮಂಗಳೂರು: ಯುವಕನೋರ್ವನ ಮೊಬೈಲ್ ಕದ್ದು ಪರಾರಿಯಾದ ಕಳ್ಳನನ್ನು ಮಂಗಳೂರಿನ ಪೊಲೀಸ್ ವೊಬ್ಬರು ಬೆನ್ನಟ್ಟಿ ಹಿಡಿದ ಸಿನಿಮೀಯ ಶೈಲಿಯ ಘಟನೆ ನಡೆದಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಏನಿದು ಘಟನೆ?

ಮಂಗಳೂರಿನ ನೆಹರೂ ಮೈದಾನದಲ್ಲಿ ಮಲಗಿದ್ದ ವ್ಯಕ್ತಿಯೊಬ್ಬರ ಮೊಬೈಲ್ ನ್ನು ಕಳ್ಳ ಕದ್ದು ಪರಾರಿಯಾಗುತ್ತಿದ್ದ. ಇದನ್ನು ಗಮನಿಸಿದ ಸ್ಥಳೀಯರು ಹಾಗೂ ಮೊಬೈಲ್ ಕಳೆದುಕೊಂಡ ವ್ಯಕ್ತಿ ಆತನನ್ನು  ಬೆನ್ನಟ್ಟಿದ್ದಾರೆ. ಈ ವೇಳೆ ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿದ ಪೊಲೀಸ್ ವೊಬ್ಬರು ವ್ಯಕ್ತಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕಳ್ಳನನ್ನು ಹಿಡಿದು, “ಈ  ಪಂ*** ಬ್ಯಾವರ್ಸಿ,  ನೀನು ಒಬ್ಬನೇ ಓಡೋದಾ, ಬ್ಯಾವರ್ಸಿ” ಎಂದು ಕಳ್ಳನ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಕಳ್ಳ, ನಾನೇನು ಮಾಡಿಲ್ಲ ಎಂದು ಹೇಳಿದ್ದಾನೆ. ಕಳ್ಳನನ್ನು ಸುಮಾರು 1 ಕಿ.ಮೀ. ದೂರ ಬೆನ್ನಟ್ಟಿ ಸಿನಿಮೀಯ ಶೈಲಿಯಲ್ಲಿ ಹಿಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

See also  ಮಡಿಕೇರಿ: ಕುಸಿದು ಬಿದ್ದು ಅತ್ತೆ ಸತ್ತರೆಂದು ಕಥೆ ಕಟ್ಟಿದ್ದ ಸೊಸೆ..!ಬಟ್ಟೆಯ ರಕ್ತದ ಕಲೆ, ಮುಖದ ಪರಚಿದ ಕಲೆಗಳು ಗಂಡನಿಗೆ ನೀಡಿತ್ತು ಕೊಲೆಯ ಸುಳಿವು..! ಮುಂದೇನಾಯ್ತು..?
  Ad Widget   Ad Widget   Ad Widget   Ad Widget   Ad Widget   Ad Widget