Uncategorized

ನನ್ನನ್ನು ಮದುವೆಯಾಗು,ಇಲ್ಲಾಂದ್ರೆ ಕಿಡ್ನ್ಯಾಪ್‌ ಮಾಡಿ ತಾಳಿ ಕಟ್ಟಿ ಬಿಡ್ತೀನಿ..! ಮಹಿಳಾ ಪಿಎಸ್‌ಐಗೆ ಧಮ್ಕಿ ಹಾಕಿದ ಈತ ಯಾರು?

ನ್ಯೂಸ್‌ ನಾಟೌಟ್‌ : ಪಿಎಸ್‌ಐಯೊಬ್ಬ ಮಹಿಳಾ ಪಿಎಸ್ಐಗೆ ಅನುಚಿತವಾಗಿ ವರ್ತಿಸಿರುವ ಘಟನೆ ಬಗ್ಗೆ ಬೆಂಗಳೂರಿನಿಂದ ವರದಿಯಾಗಿದೆ. ಈತ ಮಹಿಳಾ ಪಿಎಸ್‌ಐ ಜತೆಗಿನ ಫೋಟೊ ಸೆರೆಹಿಡಿದು ಮದುವೆ ಆಗು ಎಂದು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಸದ್ಯ 28 ವರ್ಷದ ಮಹಿಳಾ ಪಿಎಸ್‌ಐ ಕೊಟ್ಟ ದೂರಿನ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ.

ಮಹಿಳಾ ಪಿಎಸ್‌ಐಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಮತ್ತೊಬ್ಬ ಪಿಎಸ್‌ಐನನ್ನು ಇದೀಗ ಬಂಧಿಸಲಾಗಿದೆ.ಕೆ.ಎಸ್‌.ಐ.ಎಸ್‌.ಎಫ್‌ನ ಪಿಎಸ್‌ಐ ಸಂಜಯ್ ಕುಮಾರ್ (34) ಬಂಧಿತ ಆರೋಪಿ. ಸಂಜಯ್‌ ಕುಮಾರ್‌ ಹಾಗೂ ಮಹಿಳಾ ಪಿಎಸ್‌ಐ ಬ್ಯಾಚ್ ಮೇಟ್ ಆಗಿದ್ದ. ತರಬೇತಿ ಪಡೆಯುವ ವೇಳೆ ಸಂಜಯ್ ಪ್ರೇಮ ನಿವೇದನೆಯನ್ನು ಮಾಡಿಕೊಂಡಿದ್ದ ಎನ್ನಲಾಗಿದೆ. ಆದರೆ ಮಹಿಳೆ ಪ್ರೇಮ ನಿವೇದನೆಯನ್ನು ತಿರಸ್ಕರಿಸಿದ್ದರು ಎಂದು ತಿಳಿದು ಬಂದಿದೆ.

ಆದರೂ ಬಿಡದೇ ಹಿಂದೆ ಬಿದ್ದಿದ್ದ ಸಂಜಯ್‌, ಕೆಎಸ್‌ಐಎಸ್‌ಎಫ್‌ನಲ್ಲಿ ಪಿಎಸ್‌ಐ ಆಗಿ ಇದ್ದುಕೊಂಡು ನಿಮ್ಮನ್ನು ವಿವಾಹ ಆಗುವುದಿಲ್ಲ. ಯುಪಿಎಸ್‌ಸಿ ಮಾಡುತ್ತೇನೆ ನನಗೆ ಓದಲು ಸಹಾಯ ಮಾಡಿ ಎಂದು ಹೇಳಿದ್ದ. ಓದಿನ ನೆಪ ಇಟ್ಟುಕೊಂಡು ಮಹಿಳೆಗೆ ಹತ್ತಿರವಾಗಿದ್ದ. ಸಂಜಯ್‌ 2020ರಲ್ಲಿ 5.50 ಲಕ್ಷ ರೂ. ತೆಗೆದುಕೊಂಡಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.ಓದುವ ನೆಪದಲ್ಲಿ ಹತ್ತಿರವಾದ ಸಂಜಯ್‌, ತನಗೆ ತಿಳಿಯದೆ ಆತನ ಜತೆಗೆ ಇರುವ ಫೋಟೋ ತೆಗೆದುಕೊಂಡಿದ್ದಾನೆ. ಅವುಗಳನ್ನು ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿ ನನಗೆ ಲೈಂಗಿಕ ಕಿರುಕುಳ ಕೊಡುತ್ತಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ನನ್ನನ್ನು ತಿರಸ್ಕರಿಸಿದರೆ ಅಪಹರಿಸಿಕೊಂಡು ಹೋಗಿ ತಾಳಿ ಕಟ್ಟುವುದಾಗಿ’ ಸಂಜಯ್‌, ಮಹಿಳೆಗೆ ಬೆದರಿಕೆ ಹಾಕಿದ್ದಾನೆ. ಕಳೆದ ಮಾ.11ರಂದು ಸಂಜಯ್ ಏಕಾಏಕಿ ನಮ್ಮ ಮನೆಗೆ ನುಗ್ಗಿದ್ದ ಎಂದು ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ಮಹಿಳೆ ದೂರು ನೀಡಿದ್ದಾರೆ. ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ, ತನಿಖೆಯನ್ನು ನಡೆಸುತ್ತಿದ್ದಾರೆ.

Related posts

ರಾಜ್ಯದಲ್ಲಿ ಆಗಸ್ಟ್ 23 ರಿಂದ 9-12ನೇ ತರಗತಿಗಳು ಶುರು: ಶಿಕ್ಷಣ ಸಚಿವ ಬಿ.ಸಿ ನಾಗೇಶ್

ಜೆಡಿಎಸ್‌ ಅಧಿಕಾರಕ್ಕೆ ಬಂದ್ರೆ ಗೋಮಾಂಸ ಮುಕ್ತ ವ್ಯಾಪಾರಕ್ಕೆ ಅವಕಾಶ

ಮುಸ್ಲಿಂ ಯುವಕನ ಎದೆಯ ಮೇಲೆ ಯೋಗಿಯ ಫೋಟೋ ಹಚ್ಚೆ..!