ಕ್ರೈಂವೈರಲ್ ನ್ಯೂಸ್

ವಿಚ್ಚೇದನದ ಬಳಿಕ ನನ್ನ ಹಣ ವಾಪಾಸ್ ಕೊಡುವಂತೆ ಫೊಟೋಗ್ರಾಫರ್ ಬೆನ್ನುಬಿದ್ದ ಮಹಿಳೆ! ತಮಾಷೆ ಎಂದುಕೊಂಡ ಫೊಟೋಗ್ರಾಫರ್ ಗೆ ಕಾದಿತ್ತು ಶಾಕ್!

ನ್ಯೂಸ್ ನಾಟೌಟ್: ಮದುವೆ ಎನ್ನುವುದು ಎಲ್ಲರ ಜೀವನದಲ್ಲೂ ಒಂದು ಅದ್ಭುತ ಅದ್ಯಾಯಗಳನ್ನು ನೀಡುತ್ತದೆ. ಅದರಲ್ಲೂ ಮದುವೆ ಎಂದ ತಕ್ಷಣ ಫೋಟೋ-ವಿಡಿಯೋ ಬೇಕೇ ಬೇಕು ಹಠ ಹಿಡಿಯುವ ಜೋಡಿಗಳೆ ಹೆಚ್ಚು. ಅದರಲ್ಲೂ ಲಕ್ಷಾಂತರ ಬೆಲೆಯಲ್ಲಿ ಮದುವೆ ಚಿತ್ರೀಕರಣ ಮಾಡಿಸುವ ಜೋಡಿಗಳು ಮದುವೆ ಮತ್ತು ಸಂಬಂಧಕ್ಕಿಂತ ಕ್ಯಾಮೆರಾದಲ್ಲಿ ಚೆನ್ನಾಗಿ ಕಾಣಿಸಬೇಕು ಎಂಬ ಮುಂದಾಲೋಚನೆ ಇರುವವರೇ ಹೆಚ್ಚು.

ಇಲ್ಲೊಂದು ಜೋಡಿ ವಿಚಿತ್ರ ಕಾರಣಕ್ಕಾಗಿ ಸುದ್ದಿಯಾಗಿದ್ದಾರೆ. ಕಾರಣ ಮಹಿಳೆಯೊಬ್ಬಳು ನನಗೆ ಡಿವೋರ್ಸ್ ಆಗಿದೆ ನನ್ನ ಹಣ ವಾಪಾಸ್ ಕೊಡಿ ಎಂದು ಫೋಟೋಗ್ರಾಫರ್ ಬೆನ್ನು ಬಿದ್ದ ಘಟನೆಯೊಂದು ಬೆಳಕಿಗೆ ಬಂದಿದೆ.

ಅಚ್ಚರಿಯ ಸಂಗತಿ ಎಂದರೆ ಮಹಿಳೆ 4 ವರ್ಷದ ಬಳಿಕ ಫೋಟೋಗ್ರಾಫರ್ ಅನ್ನು ಸಂಪರ್ಕಿಸಿದ್ದು, ನಾನು ಮದುವೆ ಸಮಯದಲ್ಲಿ ಫೊಟೋಗ್ರಾಫಿಗಾಗಿ ಖರ್ಚು ಮಾಡಿದ ಹಣವನ್ನು ವಾಪಾಸ್ಸು ಕೊಡಿ ಎಂದು ಕೇಳಿದ್ದಾಳೆ. ಆದರೆ ಪ್ರಾರಂಭದಲ್ಲಿ ಫೋಟೋಗ್ರಾಫರ್ ಆಕೆ ತಮಾಷೆ ಮಾಡುತ್ತಿದ್ದಾಳೆ ಎಂದು ಭಾವಿಸುತ್ತಾನೆ. ಅದರಂತೆ ಆಕೆಯ ಮೆಸೇಜ್‌ಗೆ ರಿಪ್ಲೇ ಮಾಡುತ್ತಾನೆ. ಕೊನೆ ಕೊನೆಗೆ ಆಕೆ ನಿಜವಾಗಿಯೂ ಹಣ ಹಿಂತಿರುಗಿಸುವಂತೆ ಕೇಳುತ್ತಿದ್ದಾಳೆ ಎಂಬುದನ್ನು ಅರಿತು ಶಾಕ್ ಆಗುತ್ತಾನೆ.

Related posts

ಬೆಳ್ತಂಗಡಿ: ಇಲಿ ಪಾಷಾಣ ಸೇವಿಸಿದ ವ್ಯಕ್ತಿ ಸಾವು

ಕೊಲೆ ಆಗಿದ್ದ ಬಾಲಕ ಸುಪ್ರೀಂಕೋರ್ಟ್‌ ಮುಂದೆ ಹಾಜರಾಗಿ ಬದುಕಿದ್ದೇನೆ ಎಂದದ್ದೇಗೆ..! ಆತನ ತಂದೆ ಮಾಡಿದ ಆ ಒಂದು ತಪ್ಪೇನು?

98.52 ಕೋಟಿ ರೂ. ಮೊತ್ತದ ಬಿಯರ್ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು..! 7000 ಸಾವಿರ ವಿವಿಧ ಬ್ರಾಂಡಿನ ಪೆಟ್ಟಿಗೆಗಳು ಪತ್ತೆ