ಕರಾವಳಿಕ್ರೈಂರಾಜ್ಯವೈರಲ್ ನ್ಯೂಸ್

ಶ್ರೀಮಂತ ಮನೆಯ ಹುಡುಗಿಯನ್ನು ಪ್ರೀತಿಸಿ ಮದುವೆಯಾದ ಫೋಟೋಗ್ರಾಫರ್..! ಪೊಲೀಸ್ ಠಾಣೆಗೆ ನುಗ್ಗಿ ಬೆದರಿಕೆ ಹಾಕಿದ ಯುವತಿ ಮನೆಯವರು..!

ನ್ಯೂಸ್ ನಾಟೌಟ್: ಶ್ರೀಮಂತ ಮನೆಯ ತನಗಿಂತ ಚಿಕ್ಕವಳನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ಯುವತಿ ಪೋಷಕರು ಯುವಕನಿಗೆ ಕೊಲೆ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ರಕ್ಷಣೆ ಕೋರಿ ನವ ಜೋಡಿ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸಿ ಎಂಬವರ ಮೊರೆ ಹೋಗಿದ್ದಾರೆ. ದೇವನಹಳ್ಳಿ ತಾಲೂಕಿನ ಸಿ.ಎನ್. ಹೊಸೂರು ಗ್ರಾಮದ ವಿಜಯ್ ಕುಮಾರ್ (39 ವರ್ಷ) ಹಾಗೂ ಬೆಂಗಳೂರು ಉತ್ತರದ ಅಮೃತ್ ಹಳ್ಳಿ ಮೂಲದ ಹಂಸಲೇಖಾ (21 ವರ್ಷ) ಪ್ರೀತಿಸಿ ಮದುವೆಯಾಗಿದ್ದಾರೆ.

ಇಬ್ಬರು ಬೇರೆ ಬೇರೆ ಜಾತಿಯವರಾಗಿದ್ದಾರೆ. ಅಲ್ಲದೆ ವಿಜಯ್ ಕುಮಾರ್ ಮಧ್ಯಮವರ್ಗದ ಫೋಟೋಗ್ರಾಫರ್​ ಆಗಿದ್ದು, ಶ್ರೀಮಂತಳಾದ ಹಂಸಲೇಖಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ ಎನ್ನಲಾಗಿದೆ. ಈ ಮದುವೆಗೆ ಹಂಸಲೇಖಾ ಮನೆಯವರು ವಿರೋಧ ವ್ಯಕ್ತಪಡಿಸಿದ್ದಾರೆ. ಹಂಸಲೇಖಾಳಿಗಿಂತ ವಿಜಯ್ ಕುಮಾರ್ ವಯಸ್ಸಿನಲ್ಲಿ ದೊಡ್ಡವನಿದ್ದಾನೆ, ಹಾಗೆ ಆತ ಆರ್ಥಿಕವಾಗಿ ಸದೃಡವಾಗಿಲ್ಲ. ಅಲ್ಲದೆ ಇದು ಅಂತರ್ಜಾತಿ ವಿವಾಹವೆಂದು ಹಂಸಲೇಖಾ ಪೋಷಕರು ಈ ಮದುವೆ ವಿರೋಧ ವ್ಯಕ್ತಪಡಿಸಿ, ಗೂಂಡಾ ವರ್ತನೆ ತೋರಿದ್ದಾರೆ. ನವ ಜೋಡಿ ಪೊಲೀಸರ ಮೊರೆ ಹೋಗುತ್ತಿದ್ದಂತೆ ಠಾಣೆಗೆ ಏಕಾಏಕಿ ನುಗ್ಗಿದ ಯುವತಿ ಪೋಷಕರು ಗುಂಡಾವರ್ತನೆ ತೋರಿದ್ದಾರೆ. ಕೂಡಲೆ ಪೊಲೀಸರು ನವ ಜೊಡಿ ಹೊರತುಪಡಿಸಿ ಎಲ್ಲರನ್ನು ಬಲವಂತವಾಗಿ ಹೊರಗೆ ಕಳುಹಿಸಿದ್ದಾರೆ.

ಪತಿ ವಿಜಯ ಕುಮಾರ್​ ಅವರನ್ನು ಬಿಟ್ಟು ವಾಪಸ್​ ಮನೆಗೆ ಬರುವಂತೆ ಹಂಸಲೇಖಾಗೆ ಆಕೆಯ ಪೋಷಕರು ಅಂಗಲಾಚಿದರು. ಪೊಲೀಸ್ ಠಾಣೆಯಲ್ಲಿ ಪರಿ ಪರಿಯಾಗಿ ಕಾಲಿಗೆ ಬಿದ್ದು ಕೇಳಿಕೊಂಡರು. ತಾಯಿ, ಅಕ್ಕ ಸೇರಿದಂತೆ ಸಂಬಂಧಿಗಳ ಮನವಿಗೆ ಸ್ಪಂದಿಸದ ಹಂಸಲೇಖಾ ಪತಿಯೊಂದಿಗೆ ಹೋಗುವುದಾಗಿ ಪಟ್ಟು ಹಿಡಿದರು. ಕೊನೆಗೆ ಹಂಸಲೇಖಾ ಪತಿಯೊಂದಿಗೆನೇ ಜೊತೆಗೆ ಹೋದರು. ಗಂಡನನ್ನು ಬಿಟ್ಟ ಬಾರದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ನನ್ನ ಹೆಸರಿನಲ್ಲಿ ಮಾಡಿರುವ ಎಲ್ಲ ಆಸ್ತಿಯನ್ನು ಬರೆದುಕೊಡಲು ಕೇಳಿದ್ದಾರೆ. ಎಲ್ಲ ಆಸ್ತಿಯನ್ನು ಬರೆದುಕೊಡಲು ನೊಂದಣಿ ಮಾಡಿ ಕೊಡಲು ರೆಡಿ ಇದ್ದೇನೆ. ಆದರೂ ನಮ್ಮನ್ನು ನಮ್ಮ ಪಾಡಿಗೆ ಬೀಡುತ್ತಿಲ್ಲವೆಂದು ಹುಡುಗಿ ಬೇಸರ ವ್ಯಕ್ತಪಡಿಸಿದ್ದಾಳೆ.

Related posts

GOLD THEFT|ಬಂಗಾರದ ಕಡಗ ಕದ್ದು ಒಡಿದ ಬುರ್ಖಾಧಾರಿ ಮಹಿಳೆಯರು..! ಇಬ್ಬರು ಮಹಿಳೆಯರ ಕೃತ್ಯ ಸಿಸಿಟಿವಿಯಲ್ಲಿ ಸೆರೆ

ಬಂಟ್ವಾಳ : ಗಾಯಾಳುವನ್ನು ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್ ಪಲ್ಟಿ, ಚಾಲಕ ಸ್ಥಳದಲ್ಲೇ ಸಾವು

ಕೆ.ಎಸ್.​ಆರ್.​ಟಿ.ಸಿ ಬಸ್ ನಲ್ಲೂ ಇನ್ಮುಂದೆ ಗೂಗಲ್ ಪೇ, ಫೋನ್ ಪೇ ಮೂಲಕ ಪಾವತಿ..! ಯಾವಾಗಿನಿಂದ ಜಾರಿಗೆ..?