ಕ್ರೈಂವೈರಲ್ ನ್ಯೂಸ್

ತಮ್ಮನನ್ನೇ ಪೆಟ್ರೋಲ್‌ ಸುರಿದು ಕೊಂದ ಅಣ್ಣ..! ಮದುವೆಯ ನಂತರ ಕಾರಿಗಾಗಿ ನಡೀತಾ ಕಾರುಬಾರು..?

ನ್ಯೂಸ್ ನಾಟೌಟ್: ಅಣ್ಣ ತಮ್ಮಂದಿರೇ ಶತ್ರುಗಳಾದ ಘಟನೆಗಳು ಹಲವು ಇದೆ ಆದರೆ, ಕೊಲ್ಲುವ ವರೆಗೂ ತಲುಪಿದೆ. ಕಾರು‌ ಹಾಗೂ ಜಮೀನು ವಿಚಾರಕ್ಕೆ ಅಣ್ಣ-ತಮ್ಮಂದಿರ ನಡುವೆ ಗಲಾಟೆಯಾಗಿದ್ದು, ಒಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಗೋಖರೆ ಗ್ರಾಮದಲ್ಲಿ ಘಟನೆ ನಡೆದಿದೆ.

ಅಣ್ಣನೇ ತಮ್ಮನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಜಗದೀಶ್ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಅಣ್ಣ ವೆಂಕಟೇಶ್‌ ಕೊಲೆ ಆರೋಪಿ ಎನ್ನಲಾಗಿದೆ. ಕಳೆದ ಮೂರು ದಿನಗಳ ಹಿಂದೆ ಕಾರು ಹಾಗೂ ಜಮೀನು ವಿಚಾರಕ್ಕೆ ಜಗದೀಶ್‌ ಹಾಗೂ ವೆಂಕಟೇಶ್‌ ನಡುವೆ ಜಗಳ ನಡೆದಿತ್ತು. ಮುಂಚೆ ಒಟ್ಟಿಗೆ ಇದ್ದಾಗ ತಮ್ಮನ ಹೆಸರಲ್ಲಿ ಕಾರು ಖರೀದಿ ಮಾಡಿದ್ದರು.

ಆದರೆ ಮದುವೆಯಾದ ನಂತರ ಅಣ್ಣ -ತಮ್ಮಂದಿರು ಬೇರೆ ಬೇರೆಯಾಗಿದ್ದರು. ಇತ್ತ‌ ಒಟ್ಟಾಗಿ ಖರೀದಿಸಿದ್ದ ಕಾರನ್ನು ತಮ್ಮ ಜಗದೀಶನೇ ಓಡಿಸುತ್ತಿದ್ದ. ಈ ಹಿನ್ನೆಲೆಯಲ್ಲಿ ಕಾರು ಕೊಡುವಂತೆ ಅಣ್ಣ‌ ವೆಂಕಟೇಶ್ ಕೇಳಿದ್ದ. ಆಗ ಜಗದೀಶ್‌ ಕಾರು ಕೊಡಲ್ಲ ಎಂದಿದ್ದ. ಈ ವಿಚಾರಕ್ಕೆ ಅಣ್ಣ-ತಮ್ಮನ ನಡುವೆ ಕಿರಿಕ್ ಶುರುವಾಗಿತ್ತು. ಮಾತಿಗೆ ಮಾತು ಬೆಳೆದು ಗಲಾಟೆಯು ವಿಕೋಪಕ್ಕೆ ತಿರುಗಿತ್ತು.

ಜಗದೀಶ್‌ ಕಾರು ತೆಗೆಯಲು ಹೋದಾಗ, ವೆಂಕಟೇಶ್‌ ಕೈಯಲ್ಲಿ ಪೆಟ್ರೋಲ್ ಹಿಡಿದು ಅಡ್ಡ ನಿಂತಿದ್ದ. ಆದರೂ ಜಗದೀಶ್‌ ಜಗ್ಗದೇ ಇದ್ದಾಗ ಕೈನಲ್ಲಿದ್ದ ಪೆಟ್ರೋಲ್ ತಮ್ಮನ ಮೇಲೆ ಹಾಕಿದ್ದ. ಪರಿಣಾಮ ಬೆಂಕಿ ಹೊತ್ತಿಕೊಂಡಿತ್ತು.

ಇದರಿಂದ ಗಂಭೀರ ಗಾಯಗೊಂಡಿದ್ದ ಜಗದೀಶ್‌ನನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ರಾತ್ರಿ ಆಸ್ವತ್ರೆಯಲ್ಲಿ ಜಗದೀಶ್‌ ಮೃತಪಟ್ಟಿದ್ದಾರೆ. ಜಮೀನು ಭಾಗವಾಗುವವರೆಗೂ ಅಂತ್ಯ ಸಂಸ್ಕಾರ ಮಾಡಲ್ಲ‌ ಎಂದು ವೆಂಕಟೇಶ್‌ ಕುಟುಂಬಸ್ಥರು ಪಟ್ಟು ಹಿಡಿದ ಘಟನೆಯು ನಡೆದಿದೆ. ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿ ತನಿಖೆ ನಡೆಸುತ್ತಿದ್ದಾರೆ.

Related posts

ಹೈಕೋರ್ಟ್‌ ಮೊರೆ ಹೋದದ್ದೇಕೆ ನಟ ದರ್ಶನ್..? ದಾಸನಿಗೆ ವಾಂತಿ, ಭೇದಿ ಆಗುತ್ತಿದೆ ಎಂದ ವಕೀಲರು..!

ಕಡಬ: 800 ವರ್ಷದ ಹಿಂದಿನ ಕನ್ನಡ ಶಿಲಾ ಶಾಸನ ಪತ್ತೆ, ಶ್ರೀ ಮಹಾವಿಷ್ಣು ಸುಬ್ರಮಣ್ಯೇಶ್ವರ ದೇವಸ್ಥಾನದಲ್ಲಿ ಸಿಕ್ಕಿದ ಶಾಸನದಲ್ಲಿದೆ ‘ತುಳು ರಾಜ್ಯ’ ಎಂಬ ಉಲ್ಲೇಖ..!

ದಿ.ಸ್ಪಂದನಾ ವಿಜಯ್ ರಾಘವೇಂದ್ರ ಬರೆದಿದ್ದ ಡೈರಿ ಸಿಕ್ಕಿದ್ದು ಹೇಗೆ? ಇಷ್ಟು ದಿನಗಳ ಬಳಿಕ ಸಿಕ್ಕ ಡೈರಿಯಲ್ಲೇನಿತ್ತು ಗೊತ್ತಾ..?