ಕೊಡಗು

ಪೆರಾಜೆ: ಏರೆಗಾವುಯೇ ಕಿರಿಕಿರಿ, ಪಿರಿಪಿರಿ ತಡೆಯಲಾರದೆ ಗಂಡನ ತಲೆಗೆ ಸೌಟ್ ನಲ್ಲಿ ಹಿಗ್ಗಾಮುಗ್ಗಾ ಬಾರಿಸಿದ ಪತ್ನಿ..! ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಪತಿ..!

ನ್ಯೂಸ್ ನಾಟೌಟ್: ಕುಡಿದ ಮತ್ತಿನಲ್ಲಿ ಹೆಂಡತಿಗೆ ಗಂಡ ಹೊಡೆದ ಅದೆಷ್ಟೋ ಜ್ವಲಂತ ಉದಾಹರಣೆಗಳು ನಮ್ಮ ಮುಂದಿವೆ. ಆದರೆ ಈ ಸಲ ಇಡೀ ಪ್ರಕರಣವೇ ಉಲ್ಟಾ ಆಗಿದೆ ನೋಡಿ. ಇಲ್ಲಿ ಗಂಡನಿಗೆ ಹೆಂಡತಿಯೇ ಸೌಟ್ ನಲ್ಲಿ ಹಿಗ್ಗಾಮುಗ್ಗಾ ಹೊಡೆದು ಭಾರಿ ಸುದ್ದಿಯಾಗಿದ್ದಾಳೆ. ಈಕೆಯ ಆಕ್ರಮಣಕ್ಕೆ ನಲಕ್ಕುರುಳಿ ಬಿದ್ದ ಗಂಡ ಈಗ ಆಸ್ಪತ್ರೆ ಪಾಲಾಗಿದ್ದಾನೆ.

ಈ ಘಟನೆ ನಡೆದಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಗಡಿ ಭಾಗವಾಗಿರುವ ಕೊಡಗು ಜಿಲ್ಲೆಗೆ ಸೇರಿರುವ ಪೆರಾಜೆಯ ದಾಸರಹಿತ್ಲು ಎಂಬಲ್ಲಿ. ಗಂಡ – ಹೆಂಡತಿ ನಡುವೆ ಬುಧವಾರ ತಡರಾತ್ರಿ ಮಾತಿಗೆ ಮಾತು ಬೆಳೆದಿದೆ. ಒಂದು ಹಂತದಲ್ಲಿ ಇದು ವಿಪರೀತ ಹಂತಕ್ಕೆ ತಿರುಗಿ ಪರಿಸ್ಥಿತಿ ಕೈಮೀರಿ ಬಿಟ್ಟಿದೆ. ಎಲ್ಲಿತ್ತೋ ಕೋಪ ಗೊತ್ತಿಲ್ಲ, ಗಂಡನ ಪಿರಿಪಿರಿ ತಾಳಲಾರದೆ ಹೆಂಡತಿ ಹಠಾತ್ ರೌದ್ರಾವತಾರ ತಾಳಿದ್ದಾಳೆ. ಗಂಡನ ಮಂಡೆಗೆ ರಪರಪನೆ ಕೈಯಲ್ಲಿದ್ದ ಸೌಟ್ ನಲ್ಲಿ ಹಿಗ್ಗಾಮುಗ್ಗಾ ಬಾರಿಸಿದ್ದಾಳೆ. ಪೆಟ್ಟು ಎಲ್ಲಿಂದ ಬೀಳುತ್ತಿದೆ ಅನ್ನುವುದು ತಿಳಿಯದೆ ಗಂಡ ನೆಲಕ್ಕೆ ಉರುಳಿ ಬಿದ್ದಿದ್ದಾನೆ. ಮಾತ್ರವಲ್ಲ ಅದೇ ಗಾಯದಲ್ಲಿಯೇ ಎಲ್ಲಿ ಪ್ರಾಣ ಹೋಗುತ್ತದೋ ಎಂಬ ಭಯದಿಂದ ಆಸ್ಪತ್ರೆಗೆ ಓಡೋಡಿ ಬಂದಿದ್ದಾನೆ. ವೈದ್ಯರು ಚಿಕಿತ್ಸೆ ಕೊಟ್ಟು ರಕ್ತ ಹೋಗುವುದನ್ನು ನಿಲ್ಲಿಸಿದ್ದಾರೆ. ಆಸ್ಪತ್ರೆಗೆ ಹೋಗುವುದು ಸ್ವಲ್ಪ ತಡವಾಗಿದ್ದರೂ ಗಂಡನ ಕಥೆ ಕೈಲಾಸ ಆಗುತ್ತಿತೆಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

Related posts

ಕೊಡಗು: ಗಡಿಭಾಗದಲ್ಲಿ ಮತ್ತೆ ನಕ್ಸಲರ ಅಟ್ಟಹಾಸ; ಗುಂಡಿನ ಚಕಮಕಿ, ಕೂಂಬಿಂಗ್‌ ನಡೆಸಿದ ಪೊಲೀಸರಿಗೆ ಕಾದಿತ್ತು ಶಾಕ್‌..!

ಮಡಿಕೇರಿ : ಕಾಫಿ ತೋಟಕ್ಕೆಂದು ತೆರಳಿದ್ದ ವ್ಯಕ್ತಿಗೆ ಕಾಡಾನೆ ದಾಳಿ, ಕಾಫಿ ಬೆಳೆಗಾರ ಗಂಭೀರ-ಚಿಕಿತ್ಸೆ

ಸುಳ್ಯ: ಸಂಪಾಜೆಯಲ್ಲಿ ಬಸ್‌-ಕಾರು ಭೀಕರ ಅಪಘಾತ ಪ್ರಕರಣ, ತುರ್ತು ನಿಗಾ ಘಟಕದಲ್ಲಿದ್ದ ಬಾಲಕ ಪ್ರಾಣಾಪಾಯದಿಂದ ಪಾರು